ಜಿಯೋ ಜೊತೆ ಸೇರಿ ಕೈಗೆಟುಕವ ದರದಲ್ಲಿ ಬರುತ್ತಿದೆ ಗೂಗಲ್ ಸ್ಮಾರ್ಟ್‌ಫೋನ್!
- ಭಾರತದಲ್ಲಿ ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಗೆ ಗೂಗಲ್ ರೆಡಿ
- ರಿಲಯನ್ಸ್ ಜಿಯೋ ಜೊತೆ ಸೇರಿ ಗೂಗಲ್ ಸ್ಮಾರ್ಟ್‌ಫೋನ್ ಲಾಂಚ್
- ಕೈಗೆಟುಕುವ ದರದ ಗೂಗಲ್ ಫೋನ್ ಖಚಿತ ಪಡಿಸಿದ ಸಿಇಒ ಸುಂದರ್ ಪಿಚೈ
ನವದೆಹಲಿ(ಮೇ.27): ಭಾರತದಲ್ಲಿ ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯಲು ಹಲವು ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದೀಗ ಗೂಗಲ್ ಅತ್ಯುತ್ತಮ ಹಾಗೂ ಕೈಗೆಟುಕುವ ದರದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕಾಗಿ ರಿಲಯನ್ಸ್ ಜಿಯೋ ಜೊತೆ ಗೂಗಲ್ ಕಾರ್ಯನಿರ್ವಹಿಸುತ್ತಿದೆ.
ಭಾರತದ ಕಾನೂನಿಗೆ ಗೂಗಲ್ ಬದ್ಧ; ನೂತನ ಡಿಜಿಟಲ್ ನಿಯಮ ಕುರಿತು ಸುಂದರ್ ಪಿಚೈ ಸ್ಪಷ್ಟನೆ!
ಜಿಯೋ ಜೊತೆ ಸೇರಿ ಅಗ್ಗದ ದರದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿಗಳು ನಡೆಯುತ್ತಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಶೀಘ್ರದಲ್ಲೇ ನೂತನ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಸುಂದರ್ ಪಿಚೈ ಮಾತು ಇದೀಗ ಭಾರತದಲ್ಲಿ ಫೋನ್ ಪೈಪೋಟಿ ಹೆಚ್ಚಿಸಿದೆ
ಕಳೆದ ವರ್ಷ ಗೂಗಲ್, ಜಿಯೋದ 7.7% ಪಾಲನ್ನು ಖರೀದಿಸಿದೆ. ಬರೋಬ್ಬರಿ 33,737 ಕೋಟಿ ರೂಪಾಯಿಗೆ ಷೇರು ಖರೀದಿಸಿತ್ತು. ಈ ಮೂಲಕ ಗೂಗಲ್ ಕೈಗೆಟುಕುವ ದರದ ಸ್ಮಾರ್ಟ್‌ಫೋನ್ ಜಂಟಿಯಾಗಿ ಅಭಿವೃದ್ಧಿಪಡಿಸಲು ಜಿಯೋ ಪ್ಲಾಟ್‌ಫಾರ್ಮ್‌ಗಳೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡಿತ್ತು.
ಗೂಗಲ್ ಮ್ಯಾಪ್ಸ್‌ನಲ್ಲೇ ಲಭ್ಯ ಬೆಡ್, ಆಮ್ಲಜನಕ ಲೊಕೇಷನ್ ಮಾಹಿತಿ!
ಏಷ್ಯಾ ಪೆಸಿಫಿಕ್‌ನ ವರ್ಚುವಲ್ ಸಭೆಯಲ್ಲಿ ಸುಂದರ್ ಪಿಚೈ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಳೆದ ವರ್ಷ ಸುಂದರ್ ಪಿಚೈ ಗೂಗಲ್ ಭಾರತದಲ್ಲಿನ 7 ವರ್ಷಗಳ ಪ್ಲಾನ್ ಘೋಷಿಸಿದ್ದರು. ಈ ಯೋಜನೆ ಪ್ರಕಾರ ಮುಂದಿನ 7 ವರ್ಷಗಳಲ್ಲಿ 75,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.