Asianet Suvarna News Asianet Suvarna News

ಮತ್ತೆರಡು ರಿಯಲ್‌ಮಿ ಸ್ಮಾರ್ಟ್‌ಫೋನ್ ಲಾಂಚ್!

ಭಾರತದ ಮೊಬೈಲ್ ಮಾರುಕಟ್ಟೆಯಷ್ಟು ವೇಗವಾಗಿ ಬೆಳೆಯುತ್ತಿರುವ ಹಾಗೂ ಹೊಸ ಹೊಸ ಆವಿಶಷ್ಕಾರ ಕಾಣುತ್ತಿರುವ ಇಂಡಸ್ಟ್ರಿ ಮತ್ತೊಂದಿಲ್ಲ. ಹೀಗಾಗಿ ಪ್ರತಿ ದಿನ ಹೊಸ ಹೊಸ ಫೋನ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ರಿಯಲ್‌ಮಿ ಮತ್ತೆರಡು ಹೊಸ ಫೋನ್ ಬಿಡುಗಡೆ ಮಾಡಿದೆ.

Realme launches new 2 smartphones in India
Author
Bengaluru, First Published Mar 19, 2020, 6:07 PM IST

ನವದೆಹಲಿ(ಮಾ.19):  64 ಎಂಪಿ ಎಐ ಕ್ವಾಡ್‌ ಕ್ಯಾಮೆರಾ, 30 ಡಬ್ಲ್ಯೂ ಫ್ಲಾಶ್‌ ಚಾರ್ಜ್ (60 ನಿಮಿಷಗಳಲ್ಲಿ ಪೂರ್ತಿ ಚಾರ್ಜ್)ನಂಥಾ ಹೊಸತನಗಳಿರುವ ರಿಯಲ್‌ ಮಿ 6 ಹಾಗೂ ರಿಯಲ್‌  ಮಿ 6 ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಬಜೆಟ್‌ ಮೊಬೈಲ್‌ನಲ್ಲೂ ಬಹಳ ಸ್ಮೂಥ್‌ ಆಗಿ ಸ್ಕೊ್ರೕಲ್‌ ಮಾಡಲು ಸಹಕಾರಿಯಾದ 90 ಎಚ್‌ಝಡ್‌ ಡಿಸ್‌ಪ್ಲೇ ಹಾಗೂ ಆಂಡ್ರಾಯ್ಡ್‌ 10 ನಂಥಾ ಓಎಸ್‌ ನೀಡುತ್ತಿರುವುದು ಇದರ ಹೆಚ್ಚುಗಾರಿಕೆ.

4ಜಿಬಿ+64ಜಿಬಿ , 6ಜಿಬಿ+64ಜಿಬಿ, 8ಜಿಬಿ+128ಜಿಬಿ ಮಾದರಿಗಳಲ್ಲಿ ರಿಯಲ್‌ ಮಿ 6 ಸ್ಮಾರ್ಟ್‌ಫೋನ್‌ಗಳಿವೆ. ರಿಯಲ್‌ ಮಿ 6 ಪ್ರೊದಲ್ಲೂ ಮೂರು ಬಗೆಯ ಮೆಮೊರಿ ಮಾಡೆಲ್‌ಗಳಿವೆ. 6ಜಿಬಿ+64ಜಿಬಿ, 6ಜಿಬಿ+128ಜಿಬಿ ಹಾಗೂ 8ಜಿಬಿ+128ಜಿಬಿ ಗಳಲ್ಲಿ ಈ ಫೋನ್‌ಗಳು ಲಭ್ಯ.

ಇನ್ಫಿನಿಕ್ಸ್ ಪಾಪ್-ಅಪ್ ಸೆಲ್ಫಿ ಕ್ಯಾಮರಾ S5 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ!

ಅದರಲ್ಲೂ ರಿಯಲ್‌ಮಿ 6 ಪ್ರೊ ಒಟ್ಟು 6 ಕ್ಯಾಮೆರಾಗಳನ್ನು ಹೊಂದಿದ್ದು, ಇದರಲ್ಲಿ ಡ್ಯುಯೆಲ್‌ ವೈಡ್‌ ಆ್ಯಂಗಲ್‌ನ ಫ್ರಂಟ್‌ ಕ್ಯಾಮೆರಾ ಮತ್ತು 64 ಎಂಪಿ ಕ್ವಾಡ್‌ ರೇರ್‌ ಕ್ಯಾಮೆರಾ ಹೊಂದಿದೆ.

ಬೆಲೆ: ರಿಯಲ್‌ ಮಿ 6 - 12,999 ರು.(4ಜಿಬಿ+64ಜಿಬಿ), 14,999 ರು.( 6 ಜಿಬಿ+64 ಜಿಬಿ), 15,999 ರು. (8ಜಿಬಿ+128ಜಿಬಿ)

ರಿಯಲ್‌ ಮಿ 6 ಪ್ರೊ- 16,999 ರು. (6ಜಿಬಿ+64ಜಿಬಿ), 17,999 ರು. ( 6ಜಿಬಿ+128ಜಿಬಿ), 18,999 ರು. (8ಜಿಬಿ+128ಜಿಬಿ)

ಜಿಯೋ ಗ್ರಾಹಕರಿಗೆ ಮತ್ತಷ್ಟು ಸ್ಪೀಡ್ ನೆಟ್..!

ರಿಯಲ್‌ಮಿ ಬ್ಯಾಂಡ್‌ ಕೂಡ ಬಂತು
ಸ್ಮಾರ್ಟ್‌ಫೋನ್‌ ಕಂಪನಿಗಳೆಲ್ಲಾ ಸ್ಮಾರ್ಟ್‌ವಾಚ್‌ ಹಿಂದೆ ಬಿದ್ದಿವೆ. ಈಗ ರಿಯಲ್‌ಮಿ ಕೂಡ ಫಿಟ್‌ನೆಸ್‌ ಬ್ಯಾಂಡ್‌ ತಂದಿದೆ. 0.96 ಇಂಚಿನ ಕಲರ್ಸ್‌ ಡಿಸ್ಪೆ$್ಲೕ ಹೊಂದಿರುವ ಈ ಬ್ಯಾಂಡ್‌ ಹಾರ್ಟ್‌ ರೇಟ್‌ ಮಾನಿಟರ್‌, ಸ್ಪೋರ್ಟ್ಸ್ ಟ್ರ್ಯಾಕರ್‌, ಸ್ಲೀಪ್‌ ಕ್ವಾಲಿಟಿ ಮಾನಿಟರ್‌ ಫೀಚರ್‌ ಹೊಂದಿದೆ. ಈ ಬ್ಯಾಂಡಿನ ಬೆಲೆ 1,499 ರೂಪಾಯಿ.

Follow Us:
Download App:
  • android
  • ios