ನವದೆಹಲಿ(ಮಾ.03): ಅಗ್ಗದ 4ಜಿ ಸೇವೆಯ ಮೂಲಕ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ರಿಲಯನ್ಸ್‌ ಜಿಯೋ ಇದೀಗ ಭಾರತದಲ್ಲಿ 5ಜಿ ಸೇವೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ವಿಶೇಷವೆಂದರೆ ಇದಕ್ಕೆ ತನ್ನದೇ ಸ್ವಂತ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ರಿಲಯನ್ಸ್‌ ಜಿಯೋ ಅಭಿವೃದ್ಧಿಪಡಿಸಿದೆ.

ಈ ಸಂಬಂಧ ತನಗೆ ಭಾರತದಲ್ಲಿ 5ಜಿ ಸೇವೆ ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಈ ಮೂಲಕ ತನ್ನದೇ ಸ್ವಂತ ತಂತ್ರಜ್ಞಾನದೊಂದಿಗೆ 5ಜಿ ಪ್ರಯೋಗಕ್ಕೆ ಅನುಮತಿ ಕೇಳಿದ ಭಾರತದ ಮೊದಲ ಟೆಲಿಕಾಂ ಕಂಪನಿ ಎನಿಸಿಕೊಂಡಿದೆ.

ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ಫೀಚರ್ ಶೀಘ್ರ ಬಳಕೆಗೆ ಲಭ್ಯ!

ರಿಲಯನ್ಸ್‌ ಜಿಯೋ ಹೊರತುಪಡಿಸಿ ಜಾಗತಿಕ ಟೆಲಿಕಾಂ ಸೇವಾದಾರರಾದ ಚೀನಾದ ಹುವಾಯ್‌ ಟೆಕ್ನೋಲಜೀಸ್‌, ಸ್ವೀಡನ್‌ನ ಎರಿಕ್ಸನ್‌ ಮತ್ತು ನೋಕಿಯಾ ನೆಟ್‌ವರ್ಕ್ಸ್‌ ಕಂಪನಿಗಳು ಭಾರತದಲ್ಲಿ 5ಜಿ ಸೇವೆ ಆರಂಭಿಸುವ ಉದ್ದೇಶ ಹೊಂದಿವೆ. ಆದರೆ, ರಿಲಯನ್ಸ್‌ ತನ್ನದೇ ಸ್ವಂತ ತಂತ್ರಜ್ಞಾನವನ್ನು ಹೊಂದಿರುವುದರಿಂದ ಇನ್ನೊಂದು ನೆಟ್‌ವರ್ಕ್ ಮೇಲೆ ಅವಲಂಬಿತವಾಗಬೇಕಾದ ಅಗತ್ಯವಿಲ್ಲ.

ಗ್ರಾಮಭಾರತದ ಮಿತ್ರ, ಈ ಸ್ಮಾರ್ಟ್‌ಫೋನ್ ಬೆಲೆ ಆರೂವರೆ ಸಾವಿರ ಮಾತ್ರ!

ಈ ಮುನ್ನ 4ಜಿ ಸೇವೆಯನ್ನು ನೀಡಲು ತಂತ್ರಜ್ಞಾನಕ್ಕಾಗಿ ರಿಲಯನ್ಸ್‌ ಜಿಯೋ ಸ್ಯಾಮ್‌ಸಂಗ್‌ ಮೇಲೆ ಅವಲಂಬಿತವಾಗಿತ್ತು. ಯಾವುದೇ ಉಪಕರಣಗಳು ಬೇಕಿದ್ದರೂ ಸ್ಯಾಮ್‌ಸಂಗ್‌ನಿಂದ ಪಡೆಯಬೇಕಿತ್ತು. ಒಂದು ವೇಳೆ ಸ್ವಂತ ತಂತ್ರಜ್ಞಾನದ 5ಜಿ ಪರಿಕ್ಷೆ ಯಶಸ್ವಿ ಆದರೆ, ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಹೊರಗುತ್ತಿಗೆ ನೀಡಿ ಅಗ್ಗದ ದರದಲ್ಲಿ ಉಪಕರಣಗಳನ್ನು ರಿಲಯನ್ಸ್‌ ಜಿಯೋ ಪಡೆದುಕೊಳ್ಳಬಹುದಾಗಿದೆ.