Asianet Suvarna News Asianet Suvarna News

ರಿಯಲ್‌ಮೀ 8 5ಜಿ ಸ್ಮಾರ್ಟ್‌ಫೋನ್ ಈಗ 4 ಜಿಬಿ RAM, 64 ಜಿಬಿ ಸ್ಟೋರೇಜ್ ಆಪ್ಷನ್‌ನಲ್ಲೂ ಲಭ್ಯ!

ಚೈನಾ ಮೂಲದ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಯಾಗಿರುವ ರಿಯಲ್‌ಮೀ ಕಡಿಮೆ ಅವಧಿಯಲ್ಲೇ ಹೆಚ್ಚು ಜನಪ್ರಿಯವಾಗಿದೆ. ಈ ಕಂಪನಿಯು ಪ್ರೀಮಿಯಂ ಮತ್ತು ಬಜೆಟ್ ಫೋನ್‌ಗಳ ಮೂಲಕ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರಿಯಲ್ ಮೀ 8 5ಜಿ ಸ್ಮಾರ್ಟ್ ಫೋನ್‌ನ ಸ್ಟೋರೇಜ್‌ನಲ್ಲಿ ಮತ್ತೊಂದು ಆಯ್ಕೆಗೆ ಅವಕಾಶ ಮಾಡಿಕೊಟ್ಟಿದೆ. ಕಂಪನಿಯು ಇದೀಗ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್‌ ಆಪ್ಷನ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.

Realme launched 8 5G 4GB RAM and 64GB Storage Smartphone in India
Author
Bengaluru, First Published May 17, 2021, 2:19 PM IST

ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ರಿಯಲ್‌ಮೀ, ತನ್ನ  ಜನಪ್ರಿಯ ರಿಯಲ್‌ಮೀ 8 5ಜಿ ಈಗ ಹೆಚ್ಚುವರಿಯಾಗಿ ರ್ಯಾಮ್ ಮತ್ತು ಸ್ಟೋರೇಜ್ ಹೆಚ್ಚಿಸಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ರಿಯಲ್‌ಮೀ 8 5ಜಿ ಸ್ಮಾರ್ಟ್‌ಫೋನ್ ಅನ್ನು ಕಂಪನಿಯು ಭಾರತೀಯ ಮಾರುಕಟ್ಟೆಗೆ ಏಪ್ರಿಲ್ ತಿಂಗಳ ಆದಿಯಲ್ಲಿ ಬಿಡುಗಡೆ ಮಾಡಿತ್ತು.  ಈ ಫೋನ್ ಅನ್ನು ಕಂಪನಿಯು 4 ಜಿಬಿ ಪ್ಲಸ್ 128 ಜಿಬಿ ಮತ್ತು 8 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಆಪ್ಷನ್‌ಗಳಲ್ಲಿ ಮಾರಾಟ ಮಾಡುತ್ತಿತ್ತು. ಇದೀಗ ಕಂಪನಿಯು ರಿಯಲ್‌ಮೀ 8 5ಜಿ ಸ್ಮಾರ್ಟ್‌ಫೋನ್‌ಗೆ 4 ಜಿಬಿ ಮತ್ತು 64 ಜಿಬಿ ಸ್ಟೋರೇಜ್‌ ಆಯ್ಕೆಯನ್ನು ಸೇರಿಸಿ ಬಿಡುಗಡೆ ಮಾಡಿದೆ.

ರಿಯಲ್‌ಮೀ 8 5ಜಿ ಸ್ಮಾರ್ಟ್‌ಫೋನ್‌ಗೆ ಈ ಸ್ಟೋರೇಜ್ ಆಯ್ಕೆಯ ಷರಿಷ್ಕರಣೆ ಹೊರತಾಗಿ ಉಳಿದೆಲ್ಲ ವಿಶೇಷತೆಗಳು ಹಾಗೆಯೇ ಉಳಿಯಲಿವೆ. ಅಂದರೆ, ಈ ರಿಯಲ್‌ಮೀ 5 ಜಿ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡಿಮ್ನೆಸಿಟಿ 700 ಎಸ್ಒಸಿ ಆಧರಿತವಾಗಿದೆ. 6.5 ಇಂಚ್ ಡಿಸ್‌ಪ್ಲೇ ಹೊಂದಿದೆ.

ಮೇ 19ಕ್ಕೆ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ

ರಿಯಲ್‌ಮೀ 5 ಜಿ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸ್ಮಾರ್ಟ್‌ಫೋನ್ ಬೆಲೆ 13,999 ರೂ. ಎಂದು ನಿಗದಿಪಡಿಸಲಾಗಿದೆ. ಈ ಹೊಸ ಮಾಡೆಲ್‌ ಸ್ಮಾರ್ಟ್‌ಫೋನ್ ಸೂಪರ್ ಸಾನಿಕ್ ಬ್ಲೂ ಮತ್ತು ಸೂಪರ್ ಸಾನಿಕ್  ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಹೆಚ್ಚುವರಿ ಸ್ಟೋರೇಜ್ ಫೀಚರ್ ಪಡೆದುಕೊಂಡಿರುವ ಈ ರಿಯಲ್ ಮೀ 5 ಜಿ ಸ್ಮಾರ್ಟ್‌ಫೋನ್ ಮೇ 18ರಿಂದ ರಿಯಲ್ ಮೀ ಡಾಟ್ ಕಾಮ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ಈಗಾಗಲೇ ಈ ಸ್ಮಾರ್ಟ್‌ಪೋನ್ ಬಗ್ಗೆ ಗ್ರಾಹಕರ ವಲಯಿಂದಲೂ ಹೆಚ್ಚಿನ ಉತ್ತೇಜನಕಾರಿ ಪ್ರಕ್ರಿಯೆ ಸಿಕ್ಕಿದೆ.

Realme launched 8 5G 4GB RAM and 64GB Storage Smartphone in India

ಇನ್ನು 4 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ರಿಯಲ್ ಮೀ 5ಜಿ ಸ್ಮಾರ್ಟ್ ಫೋನ್ ಬೆಲೆ 14,999 ರೂಪಾಯಿಯಾಗಿದ್ದರೆ, 8 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ ಬೆಲೆ 16,999 ರೂಪಾಯಿಯಾಗಿದೆ. ಈ ಎರಡೂ ಮಾದರಿಯ ಫೋನ್‌ಗಳು ನಿಮಗೆ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮತ್ತು ಸ್ಮಾರ್ಟ್‌ಫೋನ್ ಸ್ಟೋರ್‌ಗಳಲ್ಲಿ ದೊರೆಯುತ್ತದೆ.

ಈ ರಿಯಲ್‌ಮೀ 5 ಜಿ ಸ್ಮಾರ್ಟ್‌ಫೋನ್ 6.5 ಇಂಚ್ ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಡಿಮೆನ್ಸಿಟಿ 700 ಎಸ್ಒಸಿ(ಸಿಸ್ಟಮ್ ಆನ್ ಎ ಚಿಪ್) ಆಧರಿತವಾಗಿದೆ. 8 ಜಿಬಿ RAM ಇದೆ. ಜೊತೆಗೆ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನೂ ಹೊಂದಿದ್ದು, ಈ ಸಾಮರ್ಥ್ಯವನ್ನು  ಮೈಕ್ಸೋ ಎಸ್‌ಡಿ ಕಾರ್ಡ್ ಮೂಲಕ  1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

5ಜಿ ಸೇವೆ ದೊರೆತರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?

ಇನ್ನು ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾಗೆ ಸಂಬಂಧಿಸಿದಂತೆ ಹೇಳುವುದಾದರೆ ಮೂರು ಕ್ಯಾಮೆರಾಗಳ ಸೆಟ್ ಅಪ್ ಫೋನ್‌ನ ಹಿಂಬದಿಯಲ್ಲಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾಗ 48 ಮೆಗಾ ಪಿಕ್ಸೆಲ್ ಸ್ಯಾಮ್ಸಂಗ್ ಜಿಎಂ1  ಸೆನ್ಸರ್, 2 ಮೆಗಾ ಪಿಕ್ಸಲ್ ಮೋಮೋಕ್ರೋಮ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಟೆರಿಟಯರಿ ಸೆನ್ಸರ್ ಕ್ಯಾಮೆರಾಗಳಿವೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಕಂಪನಿಯ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಫೋನ್‌ನ ಮುಂಭಾಗದಲ್ಲಿ ಅಳವಡಿಸಿದೆ.

ಕ್ಯಾಮೆರಾಗಳ ಹೊರತಾಗಿ ಈ ಸ್ಮಾರ್ಟ್‌ಫೋನ್ ಗಮನ ಸೆಳೆಯುವುದು ಕನೆಕ್ಟಿವಿಟಿ ಫೀಚರ್‌ಗಳಿಗೆ ಸಂಬಂಧಿಸಿದಂತೆ. ರಿಯಲ್ ಮೀ 8 5 ಜಿ ಸ್ಮಾರ್ಟ್‌ಫೋನ್‌ 5ಜಿ, 4ಜಿ ಎಲ್‌ಟಿಇ, ವೈಫೈ 802.11ಎಮಿ, ಬ್ಲೂಟೂಥ್ ವಿ5.1, ಜಿಪಿಎಸ್ ಎ ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗೆ  ಸಪೋರ್ಟ್ ಮಾಡುತ್ತದೆ.

ಬ್ಯಾಟರಿ ದೃಷ್ಟಿಯಿಂದಲೂ ಈ ರಿಯಲ್ ಮೀ 5 ಜಿ ಸ್ಮಾರ್ಟ್‌ಫೋನ್ ಹೆಚ್ಚು ಗಮನ ಸೆಳೆಯುತ್ತದೆ.  ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯು 18 ವ್ಯಾಟ್ ಕ್ವಿಕ್ ಚಾರ್ಚ್ ಫಾಸ್ಟ್ ಚಾರ್ಚಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಇನ್ನು ಈ ಫೋನ್‌ನ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ. ಇದರಿಂದ  ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಬಹುದು.

ಗೂಗಲ್ ಮ್ಯಾಪ್ಸ್‌ನಲ್ಲೇ ಲಭ್ಯ ಬೆಡ್, ಆಮ್ಲಜನಕ ಲೊಕೇಷನ್ ಮಾಹಿತಿ!

ಭಾರತದಲ್ಲೂ ಈ ಕಂಪನಿಯ ಸ್ಮಾರ್ಟ್‌ಫೋನ್‌ಗಲಿಗೆ ಉತ್ತಮ ಬೇಡಿಕೆ ಇದೆ. ಅಗ್ಗದರದಲ್ಲಿ ಹೆಚ್ಚಿನ ಫೀಚರ್‌ಗಳು ಇರುವ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದರಿಂದ ಹೆಚ್ಚು ಜನಪ್ರಿಯವಾಗುತ್ತಿದೆ. ರಿಯಲ್ ಮೀ ಕಂಪನಿಯ ಸ್ಮಾರ್ಟ್‌ಫೋನ್‌ಗಳು, ಶಿಯೋಮಿ , ಸ್ಯಾಮ್ಸಂಗ್ಸ್‌ನಂಥ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲೂ ರಿಯಲ್ ಮೀ ಸ್ಮಾರ್ಟ್‌ಫೋನ್ ಗಳು ಹೆಚ್ಚು ಜನಪ್ರಿಯವಾಗುತ್ತಿವೆ.

Follow Us:
Download App:
  • android
  • ios