ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ದೈತ್ಯ ಕಂಪನಿಯ ಭಾಗವಾಗಿದ್ದ ಪೊಕೋ ಇದೀಗ ಸ್ವತಂತ್ರ ಬ್ರ್ಯಾಂಡ್ ಆಗಿ ರೂಪುಗೊಂಡಿದೆ ಮತ್ತು ಜಗತ್ತಿನಾದ್ಯಂತ ತನ್ನದೇ ಆದ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೊಕೋ ಬ್ರಾಂಡ್ ಜನಪ್ರಿಯವಾಗುತ್ತಿದೆ.

ಈ ಪೊಕೋ ಕಂಪನಿಯು ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಮೀಡಿಯಾಟೆಕ್ ಡಿಮ್ನಿಸಿಟಿ 700 ಪ್ರೊಸೆಸರ್ ಆಧರಿತವಾಗಿರುವ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಮೇ 19ರಂದು ಬಿಡುಗಡೆ ಕಾಣಲಿದೆ. ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಪೊಕೋ ಗ್ಲೋಬಲ್ ಅಕೌಂಟ್‌ನಿಂದ ಷೇರ್ ಮಾಡಲಾಗಿದೆ.

5ಜಿ ಸೇವೆ ದೊರೆತರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?

ಮೇ 19ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ. ಕಂಪನಿಯು ಈ ಹಿಂದೆ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ಪೊಕೋ ಎಂ3 ಸ್ಮಾರ್ಟ್‌ಫೋನ್‌ನ ಮುಂದುವರಿದ ಆವೃತ್ತಿಯೇ ಈಗ ಬಿಡುಗಡೆ ಕಾಣಲಿರುವ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಪೋನ್ ಆಗಿದೆ. ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಪೊಕೋ ಎಂ3 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಈ ವರ್ಷದ ಫೆಬ್ರವರಿಯಲ್ಲಿ ಪ್ರವೇಶ ಪಡೆದುಕೊಂಡಿತ್ತು.

ಗ್ಲೂಬಲ್ ಲಾಂಚ್ ಮುನ್ನವೇ ಶಿಯೋಮಿಯ ಸಬ್ ಬ್ರ್ಯಾಂಡ್ ಆಗಿದ್ದ ಪೊಕೋ ತನ್ನ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಟೀಸರ್ ಬಿಡುಗಡೆ ಮಾಡಿತ್ತು. ಈ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಶೀಘ್ರವೇ ಭಾರತಕ್ಕೂ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವಾಗ ಬರಲಿದೆ ಎಂಬುದರ ಬಗ್ಗೆಸ್ಪಷ್ಟವಾದ ಮಾಹಿತಿ ಇಲ್ಲ.

 

ಪೊಕೋ ಗ್ಲೋಬಲ್ ಮಾಡಿರುವ ಟ್ವೀಟ್ ಪ್ರಕಾರ, ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡಿಮಿನ್ಸಿಟಿ 700 ಪ್ರೊಸೆಸರ್‌ನೊಂದಿಗೆ ಬರಲಿದೆ. ಕೆಲವು ದಿನಗಳ ಹಿಂದೆ, ಪೊಕೋ ಗ್ಲೋಬಲ್ ಮುಖ್ಯಸ್ಥ ಶಿಯಾಬೋ ಕ್ಯೂ ಮತ್ತು ಪ್ರಾಡಕ್ಟ್ ಮಾರ್ಕೆಟಿಂಗ್ ಹೆಡ್ ಆಂಗುಸ್ ಎನ್‌ಜಿ ಅವರು, ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾಟೆಕ್ ಡಿಮ್ನೆನಿಸಿಟಿ ಪ್ರೊಸೆರ್ ‌ಬಳಸುವ ಬಗ್ಗೆ ಖಚಿತಪಡಿಸಿದ್ದರು.

ಮೇ 15ರ ನಂತರ ವಾಟ್ಸಾಪ್ ಚಾಟ್‌ಗೆ ಸಿಗಲಿಕ್ಕಿಲ್ಲ! ಗೊಂದಲಕ್ಕೆ ಇಲ್ಲಿವೆ ಉತ್ತರ

ರೆಡ್‌ಮಿ ನೋಟ್ 10 5ಜಿ ಸ್ಮಾರ್ಟ್‌ಪೋನ್ ಅನ್ನು ಪೊಕೋ ಎಂ 3 ಪ್ರೊ 5 ಜಿ ರಿಬ್ರಾಂಡೆಡ್ ಆಗಿ ಬರಲಿದೆ ಎಂದು ನಿರೀಕ್ಷಿಸಲಾಗಿರುವುದರಿಂದ  ಮೀಡಿಯಾ ಟೆಕ್ ಡಿಮ್ನಿಸಿಟಿ 700 ಎಸ್‌ಒಸಿ ನಿರೀಕ್ಷಿಸಲಾಗಿದೆ. ರೆಡ್‌ಮಿ ನೋಟ್ 10 5 ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೆ ರೆಡ್‌ಮಿ ನೋಟ್ 10 ಸರಣಿಯೊಂದಿಗೆ ಜಾಗತಿಕವಾಗಿ ಬಿಡುಗಡೆ ಕಂಡಿದೆ.

ಮೇ 19ರಂದು ಜಾಗಿತಕವಾಗಿ ಬಿಡುಗಡೆ ಕಾಣಲಿರುವ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕಪ್ಪು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಈ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರಲಿದೆ. ಸೆಲ್ಫಿ ಕ್ಯಾಮೆರಾಗಾಗಿ  ಡಿಸ್‌ಪ್ಲೇ ಮೇಲ್ಗಡೆಯಲ್ಲಿ ಪಂಚ್‌ಹೋಲ್‌ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಸೈಡ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಅಳವಡಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರೆಡ್‌ಮಿ ನೋಟ್ 10 5ಜಿ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಈ ಸ್ಮಾರ್ಟ್‌ಫೋನ್‌ನ ಬ್ಯಾಕ್ ಪ್ಯಾನೆಲ್ ತುಸು ಭಿನ್ನವಾಗಿದೆ ಎಂದು ಹೇಳಬಹುದು. ಇದರ ಜೊತೆಗೆ ಇನು ಹಲವು ಫೀಚರ್‌ಗಳನ್ನು ಈ ಪೊಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಹೊಂದಿರುವ ಸಾಧ್ಯತೆಗಳಿವೆ. ಆದರೆ, ಈಫೋನ್ ಬೆಲೆ ಎಷ್ಟು ಎಂಬುದನ್ನು ಗೊತ್ತಾಗಿಲ್ಲ.

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!