ಸುಧಾರಿತ ಜಿಯೋ ಟ್ರೂ 5ಜಿ ನೆಟ್‌ವರ್ಕ್ ಮತ್ತು ಅತ್ಯಾಧುನಿಕ 5ಜಿ ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕೈಗೆಟುಕವ ದರಲ್ಲಿ ಫೋನ್‌ಗಳನ್ನು ರಿಯಲ್‌ಮಿ ಲಾಂಚ್ ಮಾಡಿದೆ. ಇದರ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ. 

ನವದೆಹಲಿ(ಡಿ.08): ಭಾರತದಲ್ಲಿ ಭಾರಿ ಬೇಡಿಕೆ ಪಡೆದಿರುವ ರಿಯಲ್‌ಮಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. 5ಜಿ ಸಪೋರ್ಟ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಭಾರತದ ಮೊದಲ ಬ್ರ್ಯಾಂಡ್ ರಿಯಲ್‌ಮಿ, ಇಂದು ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಮತ್ತು ರಿಯಲ್‌ಮಿ 10 ಪ್ರೊ 5ಜಿ ಫೋನ್‌ಗಳು ಆಕರ್ಷಕ ವಿನ್ಯಾಸ, ಅದ್ಭುತ ಡಿಸ್‌ಪ್ಲೇ, ಫ್ಲ್ಯಾಗ್‌ಶಿಪ್ ಕ್ಯಾಮೆರಾ, ಶಕ್ತಿಶಾಲಿ 5ಜಿ ಪ್ರೊಸೆಸರ್‌ಗಳನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ ಯುಐ 4.0 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಬಂದಿವೆ. ಇದರ ಬೆಲೆ 17,999 ರೂಪಾಯಿಂದ ಆರಂಭಗೊಳ್ಳುತ್ತಿದೆ.

ರಿಯಲ್‌ಮಿ ಸಂಖ್ಯಾ ಸರಣಿಯು ನಮ್ಮ ಭಾರತ ಮತ್ತು ಜಾಗತಿಕ ಬಳಕೆದಾರರು ಒಪ್ಪಿಕೊಂಡ ಮತ್ತು ಗರಿಷ್ಠ ಮೆಚ್ಚುಗೆ ಗಳಿಸಿದ ಸರಣಿಗಳಲ್ಲೊಂದು. ದಾಪುಗಾಲಿನ ಹೆಜ್ಜೆಯ ತಂತ್ರಜ್ಞಾನದ ಮೂಲಕ ಯುವಜನಾಂಗವನ್ನು ಸಶಕ್ತವಾಗಿಸಬೇಕೆಂಬ ನಮ್ಮ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಂದು ಸಂಖ್ಯಾ ಸರಣಿಯ ಉತ್ಪನ್ನದೊಂದಿಗೆ ಕನಿಷ್ಠ ಒಂದು ದಾಪುಗಾಲಿನ ಹೆಜ್ಜೆಯ ತಂತ್ರಜ್ಞಾನವೊಂದನ್ನು ಒದಗಿಸುತ್ತಿದ್ದೇವೆ. ಇದು ಈ ಬೆಲೆಯ ಶ್ರೇಣಿಯಲ್ಲೇ ಅತ್ಯುತ್ತಮವಾದುದು. ರಿಯಲ್‌ಮಿ 10 ಪ್ರೊ ಸರಣಿಯ 5ಜಿ ಫೋನ್‌ಗಳೊಂದಿಗೆ, ಈ ಸಂಖ್ಯಾ ಸರಣಿಗೆ ಮತ್ತಷ್ಟು ಮಾರುಕಟ್ಟೆ ನಿರ್ಧರಿಸುವ ವೈಶಿಷ್ಟ್ಯಗಳನ್ನು ಸಂಖ್ಯಾ ಸರಣಿಗೆ ಸೇರ್ಪಡೆಗೊಳಿಸಿ, ಬಳಕೆದಾರರಿಗೆ ವೈಶಿಷ್ಟ್ಯಗಳ ಮಟ್ಟಿಗೆ ಪ್ರೀಮಿಯಂ ಮಟ್ಟದ ಅನುಭವವನ್ನು ಒದಗಿಸುವುದು ನಮ್ಮ ಗುರಿ. ಈ ಎರಡೂ ಫೋನ್‌ಗಳಲ್ಲಿ ಫ್ಲ್ಯಾಗ್‌ಶಿಪ್ ಮಟ್ಟದ ಡಿಸ್‌ಪ್ಲೇ ತಂತ್ರಜ್ಞಾನಗಳು ಮತ್ತು ಶಕ್ತಿಶಾಲಿ 5ಜಿ ಪ್ರೊಸೆಸರ್‌ಗಳಿದ್ದು, ಭಾರತದಲ್ಲಿ 5ಜಿಯನ್ನು ಜನರಿಗೆ ತಲುಪಿಸುವ ನಮ್ಮ ಬದ್ಧತೆಯನ್ನು ದೃಢಪಡಿಸುತ್ತದೆ. ಜಾಗತಿಕವಾಗಿ ನಾವು ಸಂಖ್ಯಾ ಸರಣಿಯ 5 ಕೋಟಿ ಬಳಕೆದಾರರ ಸಂಖ್ಯೆಯನ್ನು ತಲುಪಿದ್ದು, ಅದರಲ್ಲಿ 3 ಕೋಟಿ ಬಳಕೆದಾರರು ಭಾರತೀಯರು ಮತ್ತು ನಮ್ಮ ಬಳಕೆದಾರರು ರಿಯಲ್‌ಮಿ 10 ಪ್ರೊ ಸರಣಿಯ 5ಜಿ ಫೋನ್‌ಗಳನ್ನು ಕೂಡ ಅದ್ಭುತವಾಗಿ ಬರಮಾಡಿಕೊಳ್ಳುವರೆಂಬ ವಿಶ್ವಾಸ ನಮಗಿದೆ ಎಂದು ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ ಸೇಠ್ ಹೇಳಿದ್ದಾರೆ.

Realme C33 ಬಿಡುಗಡೆ, ನಿಮ್ಮ ಜೇಬಿಗೆ ಹೊರೆಯಾಗೋಲ್ಲ ಈ ಫೋನ್!

ಈಗಾಗಲೇ ರಿಯಲ್‌ಮಿ ಕಂಪನಿಯು ಜಿಯೋ ಜೊತೆಗೆ ಕೈಜೋಡಿಸಿ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರಗಳಲ್ಲಿ ಭಾಗಿಯಾಗಿದೆ. ಜಿಯೋ ಜೊತೆ ಪಾಲುದಾರಿಕೆಯೊಂದಿಗೆ ಟ್ರೂ 5ಜಿ ಅನುಭವಕ್ಕಾಗಿ ಉತ್ತಮ ಕೊಡುಗೆಗಳನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಕೆಲವು ಆಯ್ದ ರಿಯಲ್‌ಮಿ ಶೋರೂಂಗಳಲ್ಲಿ ಟ್ರೂ 5ಜಿ ಅನುಭವ ಕೇಂದ್ರಗಳನ್ನು ಸ್ಥಾಪಿಸಲು ಜಿಯೋ ಜೊತೆ ಸಹಯೋಗ ನೀಡಿದ್ದೇವೆ. ಇದರಿಂದ ಪ್ರತಿಯೊಬ್ಬರೂ ರಿಯಲ್‌ಮಿ 10 ಪ್ರೊ ಸರಣಿಯು ಒದಗಿಸುವ ಸಂಪರ್ಕತೆಯ ಹೊಸ ಶಕೆಯನ್ನು ಅನುಭವಿಸುವಂತಾಗಲಿದೆ ಎಂದರು.

ನಮ್ಮ ಪ್ರಮುಖ ಪಾಲುದಾರ ರಿಯಲ್‌ಮಿ ಜೊತೆಗೆ ಮತ್ತೊಂದು ಮೈಲಿಗಲ್ಲಾಗಬಲ್ಲ ಪಾಲುದಾರಿಕೆಗೆ ನಮಗೆ ನಿಜಕ್ಕೂ ಹರ್ಷವಾಗುತ್ತಿದೆ. ರಿಯಲ್‌ಮಿ 10 ಪ್ರೊ ಪ್ಲಸ್‌ನಂತಹಾ ಶಕ್ತಿಶಾಲಿ 5ಜಿ ಸ್ಮಾರ್ಟ್‌ಫೋನ್‌ನ ನಿಜವಾದ ಸಾಮರ್ಥ್ಯವೇನೆಂಬುದನ್ನು ಜಿಯೋದಂತಹ ಟ್ರೂ 5ಜಿ ನೆಟ್‌ವರ್ಕ್‌ನಿಂದ ಮಾತ್ರ ತಿಳಿಯಬಹುದು. ಈ ಪಾಲುದಾರಿಕೆಯ ಉದ್ದೇಶವೇ ಇದು. ಜಿಯೋ ಟ್ರೂ 5ಜಿ ಎಂಬುದು ಭಾರತದಲ್ಲಿ ಮಾತ್ರವೇ ಅಲ್ಲ, ಜಗತ್ತಿನಲ್ಲೇ ಅತ್ಯಾಧುನಿಕವಾದ ನೆಟ್‌ವರ್ಕ್ ಆಗಿದೆ. ಭಾರತದ ಏಕೈಕ ಟ್ರೂ 5ಜಿ ನೆಟ್‌ವರ್ಕ್ ಎಂದನ್ನಿಸಲು ಜಿಯೋ ಟ್ರೂ 5ಜಿಯಲ್ಲಿ ಮೂರು ಪಟ್ಟು ಹೆಚ್ಚು ಸೌಕರ್ಯಗಳಿವೆ ಎಂದು ಜಿಯೋ ಸಿಇಒ ಕಿರಣ್ ಥಾಮಸ್ ಹೇಳಿದ್ದಾರೆ.

Realme Pad X 5G ಟ್ಯಾಬ್ಲೆಟ್ ಖರೀದಿಗೆ 4 ಕಾರಣಗಳು!

1. 4ಜಿ ನೆಟ್‌ವರ್ಕ್ ಮೇಲೆ ಶೂನ್ಯ ಅವಲಂಬನೆಯಿರುವ ಆಧುನೀಕೃತ 5ಜಿ ನೆಟ್‌ವರ್ಕ್ ಸಹಿತವಾದ ಪ್ರತ್ಯೇಕ 5ಜಿ ರಚನಾ ವಿನ್ಯಾಸ
2. 700 MHz, 3500 MHz ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5ಜಿ ಸ್ಪೆಕ್ಟ್ರಂನ ಅತಿದೊಡ್ಡ ಮತ್ತು ಅತ್ಯುತ್ತಮ ಸಮ್ಮಿಶ್ರಣ
3. ಕ್ಯಾರಿಯರ್ ಅಗ್ರಿಗೇಶನ್ ಎಂದು ಕರೆಯಲಾಗುವ ಸುಧಾರಿತ ತಂತ್ರಜ್ಞಾನದ ಮೂಲಕ ಈ 5ಜಿ ಸೇವೆ

● ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಫೋನ್, ಫ್ಲ್ಯಾಗ್‌ಶಿಪ್ ಮಟ್ಟದ 120Hz ಬಾಗಿದ ಅಂಚಿನ ಡಿಸ್‌ಪ್ಲೇ (ಸ್ಕ್ರೀನ್) ಇರುವ, ಭಾರತದಲ್ಲೇ ಮೊದಲ ಬಾರಿಗೆ 2160Hz ಡಿಮ್ಮಿಂಗ್ ವೈಶಿಷ್ಟ್ಯವುಳ್ಳ ಫೋನ್

● ಡೈಮೆನ್ಸಿಟಿ 1080 5ಜಿ ಚಿಪ್‌ಸೆಟ್, ತೀರಾ ಹಗುರವಾದ ಫೋನ್ (173 ಗ್ರಾಂ), ಭರ್ಜರಿ 5000mAh ಬ್ಯಾಟರಿ, ಫ್ಲ್ಯಾಗ್‌ಶಿಪ್ ಮಟ್ಟದ 108MP ಪ್ರೋ-ಲೈಟ್ ಕ್ಯಾಮೆರಾ ಇರುವ ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಫೋನ್ ಮೂರು ಬಣ್ಣಗಳಲ್ಲಿ (ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್ ಹಾಗೂ ನೆಬ್ಯುಲಾ ಬ್ಲೂ), ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯ. 6GB+128GB ಮಾದರಿಗೆ Rs 24,999 ಹಾಗೂ 8GB+128GB ಮಾದರಿಯ ಬೆಲೆ Rs 25,999

● ಮೊದಲ ಮಾರಾಟವು ಡಿಸೆಂಬರ್ 14ರಂದು ಮಧ್ಯಾಹ್ನ 12ರಿಂದ ರಿಯಲ್‌ಮಿ ಡಾಟ್ ಕಾಂ, ಫ್ಲಿಪ್‌ಕಾರ್ಟ್ ಹಾಗೂ ಸಮೀಪದ ಮಳಿಗೆಗಳಲ್ಲಿ ನಡೆಯಲಿದೆ. ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ (6ಜಿಬಿ+128ಜಿಬಿ) ಆವೃತ್ತಿಗೆ ಬ್ಯಾಂಕ್ ಕೊಡುಗೆಗಳಿಂದ Rs 1000 ರಿಯಾಯಿತಿ ಹಾಗೂ 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಕೂಡ ಲಭ್ಯವಿದೆ.