ಕೇವಲ ಅರ್ಧ ಗಂಟೇಲಿ ಬ್ಯಾಟರಿ ಫುಲ್ ಚಾರ್ಜ್: ಭಾರತದಲ್ಲಿ Realme GT Neo 3 ಬಿಡುಗಡೆ ದಿನಾಂಕ ಫಿಕ್ಸ್
Realme GT Neo 3 ಕೆಲವು ದಿನಗಳ ಹಿಂದೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು 150W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುವ ಕಂಪನಿಯ ಮೊದಲ ಫೋನಾಗಿದೆ.
Realme GT Neo 3 India Launch: Realme GT Neo 3 ಏಪ್ರಿಲ್ 29 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಯುಟ್ಯೂಬ್‌ನಲ್ಲಿನ "AskMadhav" ಸರಣಿಯ ಇತ್ತೀಚಿನ ಸಂಚಿಕೆಯಲ್ಲಿ ರಿಯಲ್‌ಮಿ ಇಂಡಿಯಾದ ಮುಖ್ಯಸ್ಥ ಮಾಧವ್ ಶೇತ್ ಈ ಘೋಷಣೆ ಮಾಡಿದ್ದಾರೆ. ಜಿಟಿ ನಿಯೋ 3 ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ, ಜಿಟಿ ನಿಯೋ 3 ಗಾಗಿ ಅಭಿಮಾನಿಗಳು ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ಹೇಳಿದ ಶೇತ್ ಮತ್ತು ಬಿಡುಗಡೆ ದಿನಾಂಕ ಬಹಿರಂಗಪಡಿಸಿದ್ದಾರೆ. Realme GT Neo 3 ಕೆಲವು ದಿನಗಳ ಹಿಂದೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು 150W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುವ ಕಂಪನಿಯ ಮೊದಲ ಫೋನಾಗಿದೆ.
ಹೊಸ GT Neo 3 ಚೀನಾದಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಹೈ ಎಂಡ್ ಮಾಡೆಲ್ 150W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ, ಇದು ಸುಮಾರು 20 ನಿಮಿಷಗಳಲ್ಲಿ ಬ್ಯಾಟರಿಯನ್ನು ಫುಲ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ ಮತ್ತು ಮೂಲ ಆವೃತ್ತಿಯು 80W ಚಾರ್ಜಿಂಗ್ ಬೆಂಬಲ ಹೊಂದಿದೆ, ಇದು 30 ನಿಮಿಷಗಳಲ್ಲಿ ಬ್ಯಾಟರಿಯನ್ನು ಟಾಪ್ ಅಪ್ ಮಾಡುತ್ತದೆ.
ಇದನ್ನೂ ಓದಿ: Samsung Galaxy F12, Poco C31: ಇಲ್ಲಿವೆ ₹10,000 ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
ಕುತೂಹಲಕಾರಿಯಾಗಿ, ಮುಂಬರುವ OnePlus 10Rನಲ್ಲಿ ಇದೇ ಮಾದರಿಯ ವೇಗದ ಚಾರ್ಜಿಂಗ್ ಸಾಮರ್ಥ್ಯಗಳು ಲಭ್ಯವಿರುತ್ತವೆ, ಇದು ಕೇವಲ GT ನಿಯೋ 3 ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂಬುದು ಟೆಕ್ ವಿಶ್ಲೇಷಕರ ಅಭಿಪ್ರಾಯ.
ಭಾರತದಲ್ಲಿ Realme GT Neo 3 ಬೆಲೆ: Realme GT Neo 3 ಭಾರತದ ನಿಖರ ಬೆಲೆ ಇನ್ನೂ ತಿಳಿದಿಲ್ಲ. ರಿಯಲ್‌ಮಿ ಬಿಡುಗಡೆಯ ಮುಂಚೆಯೇ ಅದನ್ನು ಘೋಷಿಸುವುದಿಲ್ಲ ಮತ್ತು ಬೆಲೆಯ ಬಗ್ಗೆ ಪ್ರಸ್ತುತ ಯಾವುದೇ ವರದಿಗಳು ಪ್ರಕಟವಾಗಿಲ್ಲ. ಆದರೆ ಫೋನ್‌ನ ಚೈನೀಸ್ ಬೆಲೆಗಳನ್ನು ಆಧರಿಸಿ ಭಾರತದ ಬೆಲೆಯನ್ನು ಊಹಿಸಬಹುದು.
Realme GT Neo 3 80W ಆವೃತ್ತಿಗೆ CNY 1,999 ಮತ್ತು 150W ಆವೃತ್ತಿಗೆ CNY 2,699 ರಿಂದ ಪ್ರಾರಂಭವಾಗುತ್ತದೆ. ಈ ಬೆಲೆಗಳು ಕ್ರಮವಾಗಿ 24,000 ಮತ್ತು 33,000 ರೂ.ಗಳಿಗೆ ಸಮನಾಗಿರುತ್ತದೆ. GT Neo 3 ಇದೇ ಬೆಲೆಗಳಲ್ಲಿ ಬಿಡುಗಡೆಯಾದರೆ ಇದು ಮಧ್ಯಮ ಶ್ರೇಣಿಯ ಫೋನಾಗಲಿದೆ.
Realme GT Neo 3 ಫೀಚರ್ಸ್: Realme GT Neo 3 ಕೆಲವು ಪ್ರಮುಖ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 6.7-ಇಂಚಿನ 2K ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ, 1000Hz ಟಚ್ ಮಾದರಿ ದರ ಮತ್ತು HDR10+ಗೆ ಬೆಂಬಲವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಪ್ರೊಸೆಸರ್ ಬಳಸುತ್ತದೆ, ಇದು 12GB ಯ RAM ಮತ್ತು 256GB ಯ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಯಾಗಿದೆ.
ಇದನ್ನೂ ಓದಿ: OnePlus 10 Proಗೆ ಟಕ್ಕರ್: ಏಪ್ರಿಲ್ 27ಕ್ಕೆ Xiaomi 12 Pro ಭಾರತದಲ್ಲಿ ಲಾಂಚ್!
Realme GT Neo 3 Realme UI 3.0 ನೊಂದಿಗೆ ಬರುತ್ತದೆ ಆದರೆ ಚೀನಾದಲ್ಲಿ Android 12 ಬದಲಿಗೆ Android 11 ಬಳಸುತ್ತದೆ. ಭಾರತಕ್ಕೆ, ಕಂಪನಿಯು GT Neo 3 ನಲ್ಲಿ Android 12ನೊಂದಿಗೆ ಬಿಡುಗಡೆ ಮಾಡಬಹುದು. ಗೇಮರುಗಳಿಗಾಗಿ GT Neo 3 ನ ಕಾರ್ಯಕ್ಷಮತೆ ಇಷ್ಟವಾಗಬಹುದು, ಛಾಯಾಗ್ರಾಹಕರು 50-ಮೆಗಾಪಿಕ್ಸೆಲ್ Sony IMX766 ಸೆನ್ಸರ್ ಉತ್ತಮ ಆಯ್ಕೆ ಅನಿಸಬಹುದು. ಈ ಸೆನ್ಸರ್ ಸ್ಥಿರವಾದ ವೀಡಿಯೊಗಳನ್ನು ನೀಡಲು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲಿಸುತ್ತದೆ.
ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 119-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಕ್ಯಾಮೆರಾದೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾವು GT Neo 3 ರ ಡಿಸ್ಪ್ಲೇನಲ್ಲಿ ಪಂಚ್-ಹೋಲ್ನಲ್ಲಿ ಇರಿಸಲಾಗಿದೆ. ಫೋನ್ ಚಾರ್ಜಿಂಗ್ ವೇಗವನ್ನು ಆಧರಿಸಿ ಎರಡು ರೂಪಾಂತರಗಳನ್ನು ಹೊಂದಿದೆ. 80W ಹೊಂದಿರು ಫೋನ್ 5000mAh ಬ್ಯಾಟರಿಯನ್ನು ಬಳಸಿದರೆ, 150W ರೂಪಾಂತರವು 4500mAh ಬ್ಯಾಟರಿಯನ್ನು ಹೊಂದಿದೆ. 80W ಚಾರ್ಜಿಂಗ್ 32 ನಿಮಿಷಗಳಲ್ಲಿ 100 ಪ್ರತಿಶತ ಬ್ಯಾಟರಿಯನ್ನು ತುಂಬುತ್ತದೆ ಹಾಗೂ 150W ಜೊತೆಗೆ,50 ಪ್ರತಿಶತ ಬ್ಯಾಟರಿ 5 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ ಎಂದು ರಿಯಲ್‌ಮಿ ಹೇಳಿದೆ.