OnePlus 10 Proಗೆ ಟಕ್ಕರ್:‌ ಏಪ್ರಿಲ್‌ 27ಕ್ಕೆ Xiaomi 12 Pro ಭಾರತದಲ್ಲಿ ಲಾಂಚ್!‌

Xiaomi 12 Pro ಏಪ್ರಿಲ್ 27 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು OnePlus 10 Pro, Samsung Galaxy S22 ಮತ್ತು ಇತರ ಸಾಧನಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ.

Xiaomi 12 Pro launch date April 27 expected price features specifications mnj

Xiaomi 12 Pro Launch: OnePlus 10 Proಗೆ ಪ್ರತಿಸ್ಪರ್ಧಿಯಾಗಿ Xiaomi 12 Pro ಏಪ್ರಿಲ್ 27 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಕಳೆದ ಕೆಲವು ದಿನಗಳಿಂದ ಶಾಓಮಿ ಫ್ಲ್ಯಾಗ್‌ಶಿಪ್ ಮೊಬೈಲ್‌ ಸುಳಿವು ನೀಡುತ್ತಿತ್ತು ಮತ್ತು ಮಂಗಳವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಬಿಡುಗಡೆ ದಿನಾಂಕವನ್ನು ಕಂಪನಿ ದೃಢಪಡಿಸಿದೆ. ಫೋನನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಇದುವರೆಗೆ 2022 ರಲ್ಲಿ ಭಾರತದಲ್ಲಿ ಕಂಪನಿಯ ಅತ್ಯಂತ ಪ್ರೀಮಿಯಂ ಫೋನ್ ಇದಾಗಲಿದೆ. 

ಫೋನ್‌ನಲ್ಲಿ 'ಅಲ್ಟ್ರಾ' ಟ್ಯಾಗ್ ಇಲ್ಲದಿದ್ದರೂ, ಇದು ಕಳೆದ ವರ್ಷದ Mi 11 Ultraವನ್ನು ಶಾಓಮಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಪೋರ್ಟ್‌ಫೋಲಿಯೊದಲ್ಲಿ ಬದಲಾಯಿಸುತ್ತದೆ.  The flagship of the 𝑓𝑢𝑡𝑢𝑟𝑒 is coming home — #Xiaomi12Pro 5G is launching on 27.04.22! When we said we would get you "𝗧𝗵𝗲 𝗦𝗵𝗼𝘄𝘀𝘁𝗼𝗽𝗽𝗲𝗿", we meant it!" ಎಂದು ಶಾಓಮಿ ಇಂಡಿಯಾ ಟ್ವೀಟ್ ಮಾಡಿದೆ.

 

 

Xiaomi 12 Pro Qualcommನ Snapdragon 8 Gen 1 ಚಿಪ್ ಹೊಂದಿದೆ. ಇದು Samsung Galaxy S22 ಸರಣಿ, OnePlus 10 Pro ಮತ್ತು ಇತ್ತೀಚೆಗೆ ಬಿಡುಗಡೆಯಾದ Realme GT 2 Pro ನೊಂದಿಗೆ ಸ್ಪರ್ಧಿಸಲಿದೆ. ಶಾಓಮಿ ಫೋನ್‌ನ ಬೆಲೆಯನ್ನು ಸ್ಯಾಮಸಂಗ್ ಮತ್ತು ಒನ್‌ಪ್ಲಸ್ ಸ್ಮಾರ್ಟ್‌ಫೋನುಗಳಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಇದು 12GB ಯ LPDDR5 RAM ಮತ್ತು 256 GB UFS 3.1 ಸಂಗ್ರಹಣೆಯೊಂದಿಗೆ ಬರುತ್ತದೆ.

ಫೋನ್ 6.73-ಇಂಚಿನ QHD+ (1,440 x 3,200 ಪಿಕ್ಸೆಲ್) AMOLED ಡಿಸ್ಪ್ಲೇ ಜೊತೆಗೆ 1,500 nits ಗರಿಷ್ಠ ಹೊಳಪನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಪ್ಯಾನೆಲ್ 480 Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 120 Hz ವರೆಗಿನ ಡೈನಾಮಿಕ್ ರಿಫ್ರೆಶ್ ದರವನ್ನು ಬೆಂಬಲಿಬಹುದು. 

ಇದನ್ನೂ ಓದಿ: ಶವೊಮಿ, ಓಪ್ಪೋ, ರಿಯಲ್‌ಮಿ ಸೇರಿ ಏಪ್ರಿಲ್‌ನಲ್ಲಿ ಯಾವೆಲ್ಲ ಫೋನ್ ಲಾಂಚ್?

Xiaomi 12 Pro ಕ್ಯಾಮೆರಾ: ಈ ವಿಭಾಗದಲ್ಲಿ ಸ್ಪರ್ಧೆಯನ್ನು ಇನ್ನಷ್ಟು ತೀವ್ರಗೊಳಿಸಲು ಶಾಓಮಿ ಮತ್ತೊಮ್ಮೆ ಕ್ಯಾಮರಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆಯಿದೆ. Xiaomi 12 Pro ನ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 50-ಮೆಗಾಪಿಕ್ಸೆಲ್ ಸೋನಿ IMX707 ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. 

ಜೊತೆಗೆ 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಹಾಗೂ  ಮುಂಭಾಗದ ಕ್ಯಾಮೆರಾವು 32-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಬಹುದು ಎಂದು ವರದಿಗಳು ತಿಳಿಸಿವೆ.

ಶಾಓಮಿಯ  ಹೊಸ ಫ್ಲ್ಯಾಗ್‌ಶಿಪ್ ಫೋನ್ 120W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 4,600 mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ಸಾಧ್ಯತೆಯಿದೆ. ಶಾಓಮಿ ಈಗಾಗಲೇ Xiaomi 11i ಹೈಪರ್ಚಾರ್ಜ್ ಮತ್ತು Xiaomi 11T Pro ನಲ್ಲಿ 120W ವೇಗದ ಚಾರ್ಜಿಂಗ್ ಬೆಂಬಲವನ್ನು ಬಳಸಿದೆ. ಫೋನ್ 5G, WiFi 6E ಮತ್ತು ಬ್ಲೂಟೂತ್ 5.2 ಬೆಂಬಲಿಸುತ್ತದೆ.

ಸದ್ಯಕ್ಕೆ, Xiaomi 12 ಪ್ರೊ ಬಿಡುಗಡೆಯನ್ನು ಮಾತ್ರ ದೃಢಪಡಿಸಿದೆ ಆದರೆ, ಇದು ಇದೇ ದಿನಾಂಕದಂದು ಒಂದಕ್ಕಿಂತ ಹೆಚ್ಚು ಫೋನ್‌ಗಳನ್ನು ಪರಿಚಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. 

Latest Videos
Follow Us:
Download App:
  • android
  • ios