ಮೊಬೈಲ್‌ಗಳಲ್ಲೂ ಟಾಟಾ ಸ್ಕೈ ಬಿಂಜ್ ಒಟಿಟಿ ಕಂಟೆಂಟ್ ಸರ್ವೀಸ್!
ಒಟಿಟಿ ಕಂಟೆಂಟ್ ಒದಗಿಸುವ ಟಾಟಾ ಸ್ಕೈ ಬಿಂಜ್ ಆಪ್ ಸೇವೆ ಇನ್ನು ಮೊಬೈಲ್ ಸಾಧನಗಳಲ್ಲೂ ದೊರೆಯಲಿದೆ. 149 ರೂ. ಪ್ಲ್ಯಾನ್‌ನಲ್ಲಿ ಬಳಕೆದಾರರು 10 ಒಟಿಟಿ ವೇದಿಕೆಗಳಿಗೆ ಅಕ್ಸೆಸ್ ಪಡೆದುಕೊಳ್ಳಬಹುದು. ಅದೇ ರೀತಿ 299 ರೂ. ಪ್ಲ್ಯಾನ್‌ನಲ್ಲಿ ಟಿವಿ ಹಾಗೂ ಮೊಬೈಲ್‌ಗಳಲ್ಲಿ ಅಕ್ಸೆಸ್ ಪಡೆಯಲು ಸಾಧ್ಯವಾಗಲಿದೆ.
ಡೈರೆಕ್ಟ್ ಟು ಹೋಮ್(ಡಿಟಿಎಚ್) ಸೇವೆ ನೀಡುವ ಟಾಟಾ ಸ್ಕೈ ಈಗ ಮತ್ತೊಂದು ಸೇವೆಯನ್ನು ಒದಗಿಸಲು ಮುಂದಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಮತ್ತು ಐಫೋನ್ ಚಂದಾದಾರರಿಗೆ ತನ್ನ ಓವರ್ ದಿ ಟಾಪ್(ಒಟಿಟಿ) ಕಂಟೆಂಟ್ ಸೇವೆಯನ್ನು ಒದಗಿಸಲು ಟಾಟಾ ಸ್ಕೈ, ಟಾಟಾ ಸ್ಕೈ ಬಿಂಜ್ ಆಪ್ ಸೇವೆಯನ್ನು ಆರಂಭಿಸಿದೆ.
ಬೊಂಬಾಟ್ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ರಿಯಲ್‌ಮೀ
ಟಾಟಾ ಸ್ಕೈ ಬಿಂಜ್ ಪಾವತಿಸಿ ಪಡೆಯುವ ಸೇವೆಯಾಗಿದ್ದು, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಇರೋ ನೌ, ವೂಟ್ ಸೆಲೆಕ್ಟ್, ಸೋನಿಲೈವ್ ಸೇರಿದಂತೆ 10 ಒಟಿಟಿ ವೇದಿಕೆಗಳಿಗೆ ಪ್ರವೇಶ ಚಂದಾದಾರರು ಪ್ರವೇಶ ಪಡೆಯಬಹುದಾಗಿದೆ. ಮೊಬೈಲ್ ಗ್ರಾಹಕರನ್ನು ಸೆಳೆಯಲು ಕಂಪನಿಯು 149 ರೂ. ತಿಂಗಳ ಪ್ಲ್ಯಾನ್ ಅನ್ನು ಪರಿಚಯಿಸುತ್ತಿದೆ. ಈ ಪ್ಲ್ಯಾನ್ ಪಡೆದ ಗ್ರಾಹಕರು ಮೂಬೈಲ್ ಫೋನ್‌ಗಳಲ್ಲಿ ಟಾಟಾ ಸ್ಕೈ ಬಿಂಜ್ ಆಪ್ ಸೇವೆ ಪಡೆಯಬಹುದಾಗಿದೆ.
ಇಷ್ಟು ಮಾತ್ರವಲ್ಲದೇ ಟಾಟಾ ಸ್ಕೈ 299 ರೂ. ತಿಂಗಳ ಪ್ಲ್ಯಾನ್ ಕೂಡ ಪರಿಚಯಿಸಿದ್ದು, ಈ ಪ್ಲ್ಯಾನ್ ಪಡೆಯು ಗ್ರಾಹಕರು ಮೊಬೈಲ್ ಹಾಗೂ ಟಿವಿಗಳೆರಡರಲ್ಲೂ ಟಾಟಾ ಸ್ಕೈ ಬಿಂಜ್ ಆಪ್ ಸೇವೆಯನ್ನು ಪಡೆಯಬಹುದಾಗಿದೆ. ಒಂದೇ ವೇದಿಕೆಯಡಿ ಹತ್ತಾರು ಒಟಿಟಿ ಕಂಟೆಂಟ್ ಪಡೆಯಲು ಇದರಿಂದ ಸಾಧ್ಯವಾಗಲಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಟಾಟಾ ಸ್ಕೈ ಬಿಂಜ್ ಆಪ್, ಆಪ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಿದೆ. ಗ್ರಾಹಕರು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆಪ್ ಅನ್ನು ವಿಶೇಷವಾಗಿ ಟಾಟಾ ಸ್ಕೈ ಚಂದಾದಾರರಿಗೆಂದೇ ವಿನ್ಯಾಸ ಮಾಡಲಾಗಿದೆ. ಟಾಟಾ ಸ್ಕೈ ಚಂದಾದಾರಿಕೆ ಐಡಿ ಅಥವಾ ನೋಂದಣಿ ಮಾಡಿದ ಮೊಬೈಲ್ ನಂಬರ್ ಒದಗಿಸುವ ಮೂಲಕ ಟಾಟಾ ಸ್ಕೈ ಬಿಂಜ್ ಆಪ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿದೆ.
ಟಾಟಾ ಸ್ಕೈ ಬಿಂಜ್ ಆಪ್‌ಗೆ ಲಾಗಿನ್ ಆದ ಮೇಲೆ ಅದು ನಿಮಗೆ ಒಟಿಟಿ ಕಂಟೆಂಟ್ ಅನ್ನು ಮೊಬೈಲ್ ಸಾಧನಗಳಲ್ಲಿ ನೋಡಲು ಅವಕಾಶ ಕಲ್ಪಿಸುತ್ತದೆ. ನ್ಯೂ ರೀಲಿಸ್, ಪಾಪ್ಯುಲರ್ ಮೂವೀಸ್, ಟ್ರೆಂಡಿಂಗ್ ನೌ ರೀತಿಯಲ್ಲಿ ವರ್ಗೀಕರಣಗೊಂಡ ಕಂಟೆಂಟ್ ದೊರೆಯುತ್ತದೆ. ಹಾಗೆಯೇ ಬಳಕೆದಾರರು ತಮ್ಮ ಭಾಷಾ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಕಂಟೆಂಟ್ ಕೂಡ ಪಡೆದುಕೊಳ್ಳಬಹುದು. ಈ ಸೌಲಭ್ಯವೂ ಟಾಟಾ ಸ್ಕೈ ಬಿಂಜ್ ಆಪ್‌ನಲ್ಲಿದೆ.
ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!
ಈ ಟಾಟಾ ಸ್ಕೈ ಬಿಂಜ್ ಆಪ್‌ನಲ್ಲಿ ಸರ್ಚ್ ಹಾಗೂ ವಾಯ್ಸ್ ಸರ್ಚ್‌ಗೂ ಅವಕಾಶವಿದೆ. ಟಾಟಾ ಸ್ಕೈ ಬಿಂಜ್ ಅಪ್ಲಿಕೇಶನ್ ಎಲ್ಲಾ ಪಟ್ಟಿ ಮಾಡಲಾದ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಒಂದೇ ಸೈನ್-ಇನ್‌ನಲ್ಲಿ ಪ್ರವೇಶವನ್ನು ನೀಡುತ್ತದೆ. ಆದಾಗ್ಯೂ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಸಂದರ್ಭದಲ್ಲಿ ಇದು ಕಾರ್ಯನಿರ್ವಹಿಸುವುದಿಲ್ಲ, ಅಲ್ಲಿ ನೀವು ಬಿಂಜ್ ಅಪ್ಲಿಕೇಶನ್‌ನಲ್ಲಿ ಸೈನ್ ಇನ್ ಮಾಡಿದ ನಂತರ ಪ್ರತ್ಯೇಕವಾಗಿ ಲಾಗ್ ಇನ್ ಆಗಬೇಕು.
ಮೊಬೈಲ್ ಸಾಧನಗಳಲ್ಲಿ ಮಾತ್ರ ಬಳಕೆದಾರರು ಸೇವೆ ಪಡೆಯಲು ಇಚ್ಛಿಸಿದ್ದರೆ ಅದಕ್ಕೆ 149 ರೂ. ಪ್ಲ್ಯಾನ್ ಇದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಮೊಬೈಲ್‌ನಲ್ಲಿ ಇರೋಸ್ ನೌ, ಹಂಗಾಮಾ ಪ್ಲೇ,ಶೆಮಾರೋ, ಸೋನಿ ಲೈವ್, ವೂಟ್ ಕಿಡ್ಸ್, ವೂಟ್ ಸೆಲೆಕ್ಟ್ ಹಾಗೂ ಝೀ5 ಒಟಿಟಿ ಕಂಟೆಂಟ್ ವೀಕ್ಷಿಸಬಹುದು. ಹಾಗೆಯೇ, ಬಳಕೆದಾರರು ಮೊಬೈಲ್ ಮತ್ತು ಟಿವಿಗಳಲ್ಲಿ ಒಟಿಟಿ ಸ್ಟ್ರೀಮಿಂಗ್ ನೋಡಲು ಬಯಿಸಿದರೆ ಅಂಥವರಿಗೆ ಟಾಟಾ ಸ್ಕೈ 299 ರೂ. ಪ್ಲ್ಯಾನ್ ಇದೆ.
299 ರೂ. ಪ್ಲ್ಯಾನ್ ಹಾಕಿಸಿಕೊಂಡರೆ ಅಂಥ ಗ್ರಾಹಕರು 10 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಅಕ್ಸೆಸ್ ಪಡೆದುಕೊಳ್ಳುತ್ತಾರೆ. ಈ ಪ್ಲ್ಯಾನ್ ಪ್ರಕಾರ ಟಿವಿ ಹಾಗೂ ಮೂರು ಮೊಬೈಲ್ ಸಾಧನಗಳಲ್ಲಿ ಒಟಿಟಿ ಕಂಟೆಂಟ್ ವೀಕ್ಷಿಸಬಹದಾಗಿದೆ. 2019ರಲ್ಲಿ ಟಾಟಾ ಸ್ಕೈ ಅಮೆಜಾನ್ ಜತೆಗೂಡಿ ಈ ಬಿಂಜ್ ಸೇವೆಯನ್ನು ಪರಿಚಯಿಸಿತ್ತು.
ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?