ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ರಿಯಲ್‌ಮಿ ಸಿ 11 ಸ್ಮಾರ್ಟ್‌ಫೋನ್‌ನ ಮತ್ತೊಂದು ಮಾದರಿಯಲೇ ಈಗ ಬಿಡುಗಡೆಯಾಗಿದೆ. ಈ ಫೋನ್ ಬೆಲೆ ಕೇವಲ 6,999 ರೂ. ಆಗಿದೆ. ಎರಡೂ ಫೋನ್‌ಗಳ ವಿನ್ಯಾಸದಲ್ಲಿ ಅಂಥ ವ್ಯತ್ಯಾಸಗಳಿಲ್ಲ.

ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಪ್ರಸಿದ್ಧಿಯಾಗಿರುವ ರಿಯಲ್‌ಮಿ, ಭಾರತೀಯ ಮಾರುಕ್ಟಟೆಗೆ ಮತ್ತೊಂದು ಬಜೆಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಬೆಲೆ ಕೇವಲ 6,999 ರೂಪಾಯಿ ಮಾತ್ರ.

ಈಗ ಬಿಡುಗಡೆಯಾಗಿರುವ ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್, ಕಳೆದ ವರ್ಷ ಕಂಪನಿ ಬಿಡುಗಡೆ ಮಾಡಿದ್ದ ಸಿ11ನ ಮತ್ತೊಂದು ವೆರಿಯೆಂಟ್ ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಅಂಥ ವ್ಯತ್ಯಾಸಗಳೇನೂ ಇಲ್ಲ. ಆದರೆ, ಕೆಲವೊಂದಿಷ್ಟು ಫೀಚರ್‌ಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ರಿಯಲ್‌ಮಿ ಸಿ11 2021 ಸ್ಮಾರ್ಟ್‌ಫೋನ್‌ನಲ್ಲಿ ನೀವು ಸಿಂಗಲ್ ರಿಯರ್ ಕ್ಯಾಮೆರಾ, 5000 ಎಂಎಎಚ್ ಬ್ಯಾಟರಿ, ಅಕ್ಟಾಕೋರ್ ಎಸ್ಒಸಿ, 2ಜಿಬಿ ರ್ಯಾಮ್ ಇದ್ದು ಸ್ಟೋರೇಜ್ ಬಳಕೆದಾರರು ಮೆಮೋರಿಯನ್ನು 256 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಕೂಲ್ ಬ್ಲೂ ಮತ್ತು ಕೂಲ್ ಗ್ರೇ ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆ ಸಿಗಲಿದೆ.

ಸಾಕಷ್ಟು ಫೀಚರ್‌ಗಳಿದ್ದರೂ ಬೆಲೆ ತುಂಬ ಕಡಿಮೆ ಇದೆ ಈ ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್‌ಗೆ. 2 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ ಕೇವಲ 6,999 ರೂಪಾಯಿ ಮಾತ್ರ. ಬಳಕೆದಾರರು ಈ ಸ್ಮಾರ್ಟ್‌ಫೋನನ್ನು ರಿಯಲ್‌ಮಿ ಡಾಟ್ ಕಾಮ್ ಜಾಲತಾಣದಲ್ಲಿ ಖರೀದಿಸಬಹುದು. ಈ ಸೆಗ್ಮೆಂಟ್‌ನಲ್ಲಿ ಇಷ್ಟೊಂದು ಕಡಿಮೆ ಬೆಲೆಗೆ ಬಹಳಷ್ಟು ಫೀಚರ್‌ಗಳಿರುವ ಫೋನ್‌ಗಳು ವಿರಳವಾಗಿವೆ.

Lenovo ThinkPad X1 ಮಡಿಚಿಟ್ಟರೆ ಲ್ಯಾಪ್‌ಟ್ಯಾಪ್, ಬಿಚ್ಚಿಟ್ಟರೆ ಟ್ಯಾಬ್ಲೆಟ್!

ಏನೇನು ವಿಶೇಷತೆಗಳಿವೆ?

ಭಾರತದಲ್ಲಿ ಬಿಡುಗಡೆಯಾಗಿರುವ ರಿಯಲ್‌ಮಿ ಸಿ 11 ಸ್ಮಾರ್ಟ್‌ಫೋನ್, ರಿಯಲ್‌ಮಿ 2.0ನೊಂದಿಗೆ ಆಂಡ್ರಾಯ್ಡ್ 11 ಒಎಸ್ ಆಧರಿತವಾಗಿದ್ದು, 6.5 ಇಂಚ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಅಕ್ಟಾಕೋರ್ ಎಸ್ಒಸಿ ಇದರಲ್ಲಿದ್ದು, 2 ಜಿಬಿ ರ್ಯಾಮ್ ಕೊಡಲಾಗಿದೆ. ಇನ್ನು ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಎಲ್ಇಡಿ ಫ್ಲ್ಯಾಶ್ ಕೂಡ ಇದೆ. ಕಳೆದ ವರ್ಷ ಬಿಡುಗಡೆಯಾಗಿದ ಫೋನ್‌ನಲ್ಲಿ ಕಂಪನಿ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಒದಗಿಸಿತ್ತು. ಈ ವಿಷಯದಲ್ಲಿ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಇನ್ನು ಸೆಲ್ಫಿಗಾಗಿ ಕಂಪನಿ ಮುಂಬದಿಯಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. 

ಈ ರಿಯಲ್‌ಮಿ ಸ್ಮಾರ್ಟ್‌ಫೋನ್ 32 ಜಿಬಿ ಸ್ಟೋರೇಜ್ ಒಳಗೊಂಡಿದ್ದು, ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 256 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಸ್ಮಾರ್ಟ್‌ಫೋನ್‌ನಲ್ಲಿ ಪ್ರತ್ಯೇಕವಾದ ಸ್ಲಾಟ್ ನೀಡಲಾಗಿದೆ.

Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?

ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, ಈ ವರ್ಷ ಬಿಡುಗಡೆಯಾಗಿರುವ ರಿಯಲ್‌ಮಿ ಸಿ 11 ಫೋನ್, 4ಜಿ ಎಲ್‌ಟಿಇ, ವೈ ಫೈ, ಬ್ಲೂಟೂತ್, ಮೈಕ್ರೋ ಯುಎಸ್‌ಬಿ, 3.5ಎಂಎಂ ಹೆಡ್‌ಫೋನ್ ಜಾಕ್‌ಗೆ ಸಪೋರ್ಟ್ ಮಾಡುತ್ತದೆ. ಇದರಲ್ಲಿ 5,000 ಎಂಎಎಚ್ ಬ್ಯಾಟರಿ ನೀಡಲಾಗಿದ್ದು, ಇದು ರಿವರ್ಸ್ ಚಾರ್ಜಿಂಗ್‌ಗೂ ಸಪೋರ್ಟ್ ಮಾಡುತ್ತದೆ.

ಚೀನಾ ಮೂಲದ ರಿಯಲ್‌ಮಿ ಕಂಪನಿ ಒಪ್ಪೋ ಕಂಪನಿಯ ಸಬ್‌ಬ್ರ್ಯಾಂಡ್ ಆಗಿತ್ತು. ನಾಲ್ಕು ವರ್ಷಗಳ ಹಿಂದೆಯಷ್ಟೇ ಸ್ಥಾಪನೆಯಾಗರುವ ರಿಯಲ್ ಮಿ ಕಂಪನಿಯು, ತನ್ನ ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ವೇಗದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಬಹಳ ಬೇಗ ಜನಪ್ರಿಯವಾಗಿವೆ. ಕಡಿಮೆ ಬೆಲೆಯಲ್ಲಿ ಗರಿಷ್ಠ ಫೀಚರ್‌ಗಳನ್ನು ಒದಗಿಸುವ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇದಕ್ಕೆ ಮಾರು ಹೋಗಿದ್ದಾರೆಂದು ಹೇಳಬಹುದು.

ಐಕ್ಯೂ ಜೆಡ್3 5ಜಿ: ಇದು ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಸ್ಮಾರ್ಟ್‌ಫೋನ್!

ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಕಂಪನಿ ಈಗ 20 ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಒಪ್ಪೋ ಕಂಪನಿಯ ಸಬ್‌ಬ್ರ್ಯಾಂಡ್ ಆಗಿದ್ದ ರಿಯಲ್‌ಮಿ, 2018ರರಲ್ಲಿ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಅಲ್ಲಿಂದ ಕಂಪನಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.