Lenovo ThinkPad X1 ಮಡಿಚಿಟ್ಟರೆ ಲ್ಯಾಪ್‌ಟ್ಯಾಪ್, ಬಿಚ್ಚಿಟ್ಟರೆ ಟ್ಯಾಬ್ಲೆಟ್!
ಕಳೆದ ಜನವರಿಯಲ್ಲಿ ಅಮೆರಿಕ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್ ಫೋಲ್ಡ್ ಲ್ಯಾಪ್‌ಟ್ಯಾಪ್ ಈಗ ಭಾರತೀಯ ಮಾರುಕಟ್ಟೆಗೂ ಕಾಲಿಟ್ಟಿದೆ. ಈ ಲ್ಯಾಪ್‌ಟ್ಯಾಪ್ ಅನ್ನು ಬಳಕೆದಾರರು ಟ್ಯಾಬ್ಲೆಟ್ ರೀತಿಯಲ್ಲೂ ಬಳಸಿಕೊಳ್ಳಬಹುದು. ಅತ್ಯಾಧುನಿಕ ಫೀಚರ್‌ಗಳನ್ನ ನೀವು ಇದರಲ್ಲಿ ಕಾಣಬಹುದು.
ಲ್ಯಾಪ್‌ಟ್ಯಾಪ್ ಉತ್ಪಾದನೆಯಲ್ಲಿ ಅಗ್ರಗಣ್ಯ ಎನಿಸಿರುವ ಚೀನಾ ಮೂಲದ ಲೆನೊವೊ ಭಾರತೀಯ ಮಾರುಕಟ್ಟೆಗೆ ಫೋಲ್ಡಿಂಗ್ ಡಿಸ್‌ಪ್ಲೇ ಹೊಂದಿರುವ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್1 ಫೋಲ್ಡ್ ಬಿಡುಗಡೆ ಮಾಡಿದೆ. ಇದು ಕಂಪನಿಯ ಮೊದಲ ಫೋಲ್ಡಿಂಗ್ ಡಿಸ್‌ಪ್ಲೇ ಲ್ಯಾಪ್‌ಟ್ಯಾಪ್ ಆಗಿದೆ. ಕಂಪನಿಯು ಈ ಲ್ಯಾಪ್‌ಟ್ಯಾಪ್ ಅನ್ನು ಕಳೆದ ಜನವರಿಯಲ್ಲಿ ಅಮೆರಿಕದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್1 ನೋಡಲು ಥೇಟ್ ಟ್ಯಾಬ್ಲೆಟ್. ಆದರೆ ಅದನ್ನು ನೀವು ಫೋಲ್ಡ್ ಮಾಡಿದರೆ ಲ್ಯಾಪ್‌ಟ್ಯಾಪ್ ಆಗಿ ಕನ್ವರ್ಟ್ ಆಗುತ್ತದೆ. ಕಂಪನಿಯು ಬ್ಲೂಟೂತ್ ಮಿನಿ ಫೋಲ್ಡ್ ಕೀ ಬೋರ್ಡ್ ಒದಗಿಸುತ್ತದೆ ಮತ್ತು ಫೋಲ್ಡ್ ಒಳಗಡೆಯೇ ಅದು ಇರುತ್ತದೆ. ಹಾಗೆಯೇ ವೈರ್‌ಲೆಸ್ ಆಗ ಚಾರ್ಜ್ ಆಗುತ್ತದೆ. ಈ ಲ್ಯಾಪ್‌ಟ್ಯಾಪ್ ಮಲ್ಟಿಲಿಂಕ್ ಟಾರ್ಕ್ ಹಿಂಜ್(ಕೀಲು) ಒಳಗೊಂಡಿದ್ದು, ಇದರಿಂದ ಫೋಲ್ಡ್‌ಗೆ ಅನುಕೂಲವಾಗುತ್ತದೆ. ಈ ಲ್ಯಾಪ್‌ಟ್ಯಾಪ್ ಅನ್ನು ಬಿಚ್ಚಿಟ್ಟಾಗ ಅದು ಟ್ಯಾಬ್ಲೆಟ್ ಆಗಿ ಕನ್ವರ್ಟ್ ಆಗುತ್ತದೆ. ಬಿಲ್ಟ್ ಇನ್ ಕಿಕ್‌ಸ್ಟ್ಯಾಂಡ್ ಬಳಸಿಕೊಂಡು ಟೇಬಲ್ ಮೇಲೂ ಸರಾಗವಾಗಿ ಇಡಬಹುದು.
ಐಕ್ಯೂ ಜೆಡ್3 5ಜಿ: ಇದು ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಸ್ಮಾರ್ಟ್‌ಫೋನ್!
ಲೆನೊವೊ ಥಿಂಕ್ ಪ್ಯಾಂಡ್ ಎಕ್ಸ್1 ಫೋಲ್ಡ್ ಲ್ಯಾಪ್‌ಟ್ಯಾಪ್ ಬೆಲೆ 3,29,000 ರೂ. ಇದೆ. ಆದರೆ, ಆರಂಭಿಕ ಬೆಲೆಯಾಗಿ ಕಂಪನಿಯು 2,48,508 ರೂ.ಗೆ ಮಾರಾಟ ಮಾಡುತ್ತಿದೆ. ಬಳಕೆದಾರರು ಈ ಲ್ಯಾಪ್‌ಟ್ಯಾಪ್ ಅನ್ನು ಲೆನೆವೋ ಇಂಡಿಯಾ ವೆಬ್‌ಸೈಟ್ ಮೂಲಕ ಖರೀದಿಸಬಹುದು.
ಈ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್1 ಫೋಲ್ಡ್ ಲ್ಯಾಪ್‌ಟ್ಯಾಪ್ 13.3 ಇಂಚ್ 2ಕೆ pOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಬಹುದ್ದೇಶಕ್ಕೆ ಬಳಕೆಯಾಗುವ ರೀತಿಯಲ್ಲಿ ಫೋಲ್ಡ್ ಮಾಡಬಹುದಾದ ಈ ಡಿಸ್‌ಪ್ಲೆಯನ್ನು ಎಲ್‌ಜಿ ತಯಾರಿಸಿದೆ. ಫೋಲ್ಡಿಂಗ್‌ಗೆ ನೆರವಾಗುವುದಕ್ಕೆ ಮೆಕಾನಿಕಲ್ ಹಿಂಜ್(ಕೀಲು)ಗಳನ್ನು ಬಳಸಲಾಗಿದೆ. ಇದರಿಂದಾಗಿ ಬಳಕೆದಾರರು ಸಾಮಾನ್ಯ ಲ್ಯಾಪ್‌ಟ್ಯಾಪ್‌ನಂತೆ ಈ ಥಿಂಕ್‌ಪ್ಯಾಡ್ ಅನ್ನು ಕೂಡ ಬಳಸಲು ಸಾಧ್ಯವಾಗುತ್ತದೆ.
ಬಳಕೆದಾರರು ನಿಯಮಿತ ಲ್ಯಾಪ್‌ಟಾಪ್‌ನಂತೆ ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಥಿಂಕ್‌ಪ್ಯಾಡ್ ಎಕ್ಸ್ 1 ಬಳಸಬಹುದು ಅಥವಾ ಅದನ್ನು ನೋಟ್‌ಬುಕ್‌ನಂತೆ ಬಳಸಬಹುದು. ಭಾವಚಿತ್ರ ಬಿಡಿಸಲು ಮತ್ತು ಟಿಪ್ಪಣಿಗಳನ್ನು ಮಾಡಿಕೊಳ್ಳಬಹುದು. ಅಥವಾ ಲೆನೊವೊನ ಆಕ್ಟಿವ್ ಪೆನ್ ಬಳಸಿ ರೇಖಾಚಿತ್ರಗಳನ್ನು ಬಿಡಿಸಬಹುದು. ಲೆನೊವೊ ಮೇಜಿನ ಮೇಲೆ ಸುಲಭವಾದ ಭಾವಚಿತ್ರ ಅಥವಾ ಲ್ಯಾಂಡ್‌ಸ್ಕೇಪ್ ನಿಯೋಜನೆಗಾಗಿ ತನ್ನ ಸುಲಭ ಸ್ಟ್ಯಾಂಡ್ ಮತ್ತು ಥಿಂಕ್‌ಪ್ಯಾಡ್ ಎಕ್ಸ್ 1 ಸಾಂಪ್ರದಾಯಿಕ ಲ್ಯಾಪ್‌ಟಾಪ್‌ನಂತೆ ಕೆಲಸ ಮಾಡಲು ಬ್ಲೂಟೂತ್ ಮಿನಿ ಫೋಲ್ಡ್ ಕೀಬೋರ್ಡ್ ಅನ್ನು ಕೂಡ ಒದಗಿಸಿದೆ.
65 ಇಂಚಿನ ಸೋನಿ ಬ್ರಾವಿಯಾ ಎಕ್ಸ್ಆರ್ ಎ80ಜೆ ಒಎಲ್ಇಡಿ 4ಕೆ ಟಿವಿ ಬಿಡುಗಡೆ
ವಿಂಡೋಸ್ 10 ಪ್ರೋ ಒಳಗೊಂಡಿರುವ ಈ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್1 ಫೋಲ್ಡ್, ಪ್ರೀಲೋಡೆಡ್ ಲೆನೊವೊ ಸ್ವಿಚರ್ ಆಪ್‌ನೊಂದಿಗೆ ಬರುತ್ತದೆ. ಈ ಆಪ್‌ನಿಂದಾಗಿ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಬಳಕೆದಾರರು ಸ್ಕ್ರೀನ್ ಅನ್ನು ಎರಡು ಭಾಗಗಳಾಗಿ ಮಾಡಬಹುದು ಇಲ್ಲವೇ ಇಡಿಯಾಗಿ ಬಳಸಿಕೊಳ್ಳಬಹುದು.
ಮತ್ತೊಂದು ವಿಶೇಷ ಏನೆಂದರೆ, ಬ್ಲೂಟೂತ್ ಕೀಬೋರ್ಡ್ ಸಕ್ರಿಯ ಇಲ್ಲದಿದ್ದಾಗ ಈ ಲ್ಯಾಪ್‌ಟ್ಯಾಪ್ ಸ್ವಯಂ ಆಗಿ, ಆನ್ ಸ್ಕ್ರೀನ್ ಕೀಬೋರ್ಡ್ ಅನ್ನು ಅನ್ನು ಡಿಸ್‌ಪ್ಲೇಸ್ ಹೊಂದಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಬಹಳ ಬೇಗ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ, ಈ ಫೋಲ್ಡೇಬಲ್ ಲ್ಯಾಪ್‌ಟ್ಯಾಪ್ ಹಾಗಿಲ್ಲ. ಇದು ತುಂಬ ಗಟ್ಟಿಮುಟ್ಟಾಗಿದೆ.
ಈ ಲ್ಯಾಪ್‌ಟ್ಯಾಪ್ ಇಂಟೆಲ್ ಕೋರ್ಸ್ ಐ5 ಪ್ರೊಸೆಸರ್ ಆಧರಿತವಾಗಿದೆ ಇದರ ಜೊತೆಗೆ 11ನೇ ಜನರೇಷನ್ ಇಂಟೆಲ್ ಯುಎಚ್‌ಡಿ ಗ್ರಾಫಿಕ್ಸ್, 8 ಜಿಬಿ ರ್ಯಾಮ್ ಮತ್ತು 1 ಟಿಬಿ ಸ್ಟೋರೇಜ್ ಕೂಡ ಇದರಲ್ಲಿದೆ. ವೈಫೈ 6, ಬ್ಲೂಟೂಥ್ ವಿ5.1, ಎರಡು ಯುಎಸ್‌ಬಿ ಟೈಪ್ ಸಿ 3.2 ಜೆನ್ 2 ಪೋರ್ಟ್‌ಗಳಿವೆ. ಈ ಲ್ಯಾಪ್‌ಟ್ಯಾಪ್ 5ಜಿ ಮತ್ತು 4ಜಿ ಎಲ್‌ಟಿಇಗೂ ಸಪೋರ್ಟ್ ಮಾಡುತ್ತದೆ.
ಆಗಸ್ಟ್ 3ಕ್ಕೆ ಹಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಲಾಂಚ್?
ತಂತ್ರಜ್ಞಾನ ದೃಷ್ಟಿಯಂದ ಅತ್ಯುದ್ಭುತವಾಗಿರುವ ಈ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್1 ಪೋಲ್ಡ್ ಲ್ಯಾಪ್‌ಟ್ಯಾಪ್, ಅಷ್ಟೇ ದಕ್ಷವಾಗಿಯೂ ಕಾರ್ಯನಿರ್ವಹಿಸುತ್ತದೆ. ನಿಮ್ಮೆಲ್ಲ ಅಗತ್ಯಗಳನ್ನು ಪೂರೈಸುವ ಎಲ್ಲ ಗುಣಗಳು ಈ ಲ್ಯಾಪ್‌ಟಾಪಿನಲ್ಲಿವೆ.