Moto G51 5G: Motorolaದ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ!
*Motorolaದ Moto G51 5G ಬಿಡುಗಡೆ
*12 ಜಾಗತಿಕ 5G ಬ್ಯಾಂಡ್‌ಗಳಿಗೆ ಸಪೋರ್ಟ್
*ಡಿಸೆಂಬರ್ 16 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ
ನವದೆಹಲಿ(ಡಿ. 11): ಮೊಟೊರೊಲಾ (Motorola) ಒಂದಾದ ಮೇಲೊಂದು ಹೊಸ ಸ್ಮಾರ್ಟ್‌ಫೋನ್ (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ Moto G31 ಅನ್ನು ಅಧಿಕೃತ ಬಿಡುಗಡೆ ನಂತರ ಲೆನೋವೋ (Lenevo) ಮಾಲೀಕತ್ವದ ಸ್ಮಾರ್ಟ್‌ಫೋನ್ ಕಂಪನಿಯು Moto G51 ಈಗ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಭಾರತದಲ್ಲಿ ಕಂಪನಿಯ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದೆ. Moto G51 5G 12 ಜಾಗತಿಕ 5G ಬ್ಯಾಂಡ್‌ಗಳಿಗೆ (5G Bands) ಸಪೋರ್ಟ್ ಮಾಡಲಿದೆ. Moto G51 5G ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 ಪ್ಲಸ್ ಚಿಪ್ಸೆಟ್ನಿಂದ ಹಾಗೂ 120Hz ಡಿಸ್ಪ್ಲೇ ಹೊಂದಿದೆ. ಮೊಟೊರೊಲಾದ ಹೊಸ 5G ಸ್ಮಾರ್ಟ್‌ಫೋನ್ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ.
Moto G51 5G: Specificatons
*Android 11 MyUX : ಡ್ಯುಯಲ್-ಸಿಮ್ (Dual Sim)
*Qualcomm Snapdragon 480 Plus (octa-core) ಪ್ರೊಸೆಸರ್
*4GB RAM : 64GB ಸ್ಟೋರೆಜ್
Moto G51 5G ಕ್ಯಾಮೆರಾ ವಿಶೇಷತೆಗಳು
*Tripple Rear Camera: f/1.8 ಲೆನ್ಸ್
*50MP ಪ್ರೈಮರಿ : 8MP ಅಲ್ಟ್ರಾ-ವೈಡ್ : 2MP ಮ್ಯಾಕ್ರೋ ಕ್ಯಾಮೆರಾ
*13MP ಸೆಲ್ಫೀ ಕ್ಯಾಮೆರಾ: f/2.2 ಲೆನ್ಸ್
Moto G51 5G ಬ್ಯಾಟರಿ ಹಾಗೂ ಡಿಸ್ಪ್ಲೇ
*5,000mAh ಬ್ಯಾಟರಿ: 20W ವೇಗದ ಚಾರ್ಜಿಂಗ್
*170.47×76.54×9.13mm ಅಳತೆ: 208 ಗ್ರಾಂ ತೂಕ
*6.8-ಇಂಚಿನ FHD+ (1,080 x 2,400 Pixels) ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ (Max Vision display)
*20:9 Aspect Ratio ಹಾಗೂ 120Hz ಸ್ಕ್ರೀನ್ ರಿಫ್ರೆಶ್ ರೇಟ್
Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!
Moto G51 5G Connectivity
*5G, 4G LTE, Wi-Fi 802.11ac, ಬ್ಲೂಟೂತ್ v5.1, GPS/ A-GPS, NFC ಇತ್ಯಾದಿ
Moto G51 5G: ಬೆಲೆ ಮತ್ತು ಲಭ್ಯತೆ
*Moto G51 5G 4GB RAM 64GB ಭಾರತದಲ್ಲಿ ಬೆಲೆ: 14,999 ರೂ.
*ಡಿಸೆಂಬರ್ 16 ರಂದು : ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಸೇಲ್
*ಬಣ್ಣಗಳು : ಆಕ್ವಾ ಬ್ಲೂ (Aqua Blue) ಮತ್ತು ಇಂಡಿಗೊ ಬ್ಲೂ (Indigo Blue)
ಕೊರೋನಾ ಕಾರಣದಿಂದಾಗಿ ಆನ್‌ಲೈನ್ ಮೊಬೈಲ್ ಖರೀದಿಯಲ್ಲಿ ಭಾರೀ ಏರಿಕೆ!
2021ರ ಆರಂಭದಲ್ಲಿ ಕೊರೋನಾ ಮಹಾಮಾರಿ (Corona 2nd Wave) ಎರಡನೇ ಅಲೆ ದೇಶಾದ್ಯಂತ ಆರ್ಥಿಕತೆಗೆ (Economy) ಮಾರಕವಾಗಿ ಪರಿಣಮಿಸಿತ್ತು. ಕೊರೋನಾ ಲಾಕ್‌ಡೌನ್‌ನಿಂದಾಗಿ (Lock Down) ಸಾಕಷ್ಟು ಉದ್ಯಮಗಳು ನಷ್ಟವನ್ನು ಅನುಭವಿಸಿದ್ದವು. ಕೊರೋನಾ ನಿಯಮಗಳು ಜಾರಿಯಲ್ಲಿ ಇದ್ದ ಕಾರಣ ಗ್ರಾಹಕರು ಆನಲೈನ್ ಶಾಪಿಂಗ್ (Online Shopping) ಮೊರೆ ಹೋಗಿದ್ದರು. ಹೀಗಾಗಿ ಆನ್‌ಲೈನ್ ಮಾರುಕಟ್ಟೆ ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಈ ಬೆನ್ನಲ್ಲೇ 2021 ರಲ್ಲಿ ಭಾರತದಲ್ಲಿ ಮಾರಾಟವಾದ 50 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳನ್ನು (Smarth Phone Sale) ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ವರದಿಯೊಂದು ಹೇಳಿದೆ.
ಕಳೆದ ವರ್ಷ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮೊಬೈಲ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿದ್ದವು. ಆದರೆ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಆನಲೈನ್ ಖರೀದಿ ಮೊರೆ ಹೋಗಿದ್ದರಿಂದ ಈ ವರ್ಷ 50% ಕ್ಕೂ ಹೆಚ್ಚು ಮಾರಾಟ ಅನ್‌ಲೈನ್‌ನಲ್ಲಿಯೇ ಆಗಿದೆ. ಕೊರೋನಾ ಪ್ರಭಾವ ಹಾಗೂ 2021 ರಲ್ಲಿ ಅದರ ಎರಡನೇ ಅಲೆಯ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಂದ ಈ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ. ಗ್ರಾಹಕರು ಕಳೆದ ವರ್ಷಕ್ಕೆ ಹೋಲಿಸಿದರೆ 2021 ರಲ್ಲಿ ರೂ. 30,000 ಮತ್ತು ಹೆಚ್ಚಿನ ಬೆಲೆಯ ಪ್ರೀಮಿಯಂ (Premium) ವಿಭಾಗಗಳಿಗೆ ಸೇರಿದ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು (15 ಪ್ರತಿಶತ) ಖರೀದಿಸಿದ್ದಾರೆ ಎಂದು ವರದಿ ಹೇಳಿದೆ.