Asianet Suvarna News Asianet Suvarna News

RealMe 10 Launch: ನವೆಂಬರ್‌ನಲ್ಲಿ ರಿಯಲ್‌ಮಿ 10 ಸರಣಿ ಫೋನು ಬಿಡುಗಡೆ

*ಬಹುನಿರೀಕ್ಷೆಯ ರಿಯಲ್‌ಮಿ 10 ಸರಣಿ ಫೋನ್ ಬಿಡುಗಡೆಗೆ ಮುಹೂರ್ತ
*ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡ ರಿಯಲ್‌ಮಿ ಇಂಡಿಯಾ ಸಿಇಒ
*ವಿಶೇಷ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬರಲಿವೆ ಈ ಫೋನುಗಳು

Realme 10 series will launch in November 2022 and check details
Author
First Published Oct 30, 2022, 10:58 AM IST

ರಿಯಲ್ (Realme) ಕಂಪನಿಯು ತನ್ನ ಮುಂದಿನ ತಲೆಮಾರಿನ Realme 10 ಸರಣಿ ಫೋನುಗಳನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದನ್ನು ದೃಢೀಕರಿಸಿದೆ. ಹೊಸ ಸ್ಮಾರ್ಟ್‌ಫೋನ್ ಮೊದಲು ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ,  ಕೆಲವು ವಾರಗಳ ನಂತರ ಭಾರತವೂ ಸೇರಿದಂತೆ ವಿಶ್ವದ ಇತರ ಮಾರುಕಟ್ಟೆಗೆ ಈ ಫೋನ್ ಲಾಂಚ್ ಆಗಲಿದೆ. ಕಂಪನಿಯ ಇತ್ತೀಚಿನ 10 ಸರಣಿ ಫೋನ್ ರಿಲೀಸ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅದೇ ರೀತಿ ನಿರೀಕ್ಷೆಯಂತೆ, ಬಿಡುಗಡೆಯಾಗಲಿರುವ ಫೋನ್ ಗಳ ಪಟ್ಟಿಯಲ್ಲಿ ರೆಗ್ಯುಲರ್ ಮಾಡೆಲ್ ಜತೆಗೆ 10 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಕೂಡ ನಿರೀಕ್ಷಿಸಬಹುದು. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಸಾಮಾನ್ಯ ಮಾದರಿ ಫೋನುಗಳು 10 ಸರಣಿಯ ಹೆಚ್ಚಿನ ರೂಪಾಂತ ಕೆಟಗರಿಗೆ ಸೇರಿಕೊಳ್ಳುತ್ತಿವೆ. ಬಹುಶ ಈ ಫೋನ್‌ ಅನ್ನು Realme 10 Pro+ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ನವೆಂಬಂರ್ ತಿಂಗಳಲ್ಲಿ 10 ಸರಣಿ ಫೋನ್ ಬಿಡುಗಡೆಯು ಖಚಿತವಾಗಿದ್ದರೂ ನಿರ್ದಿಷ್ಟ ದಿನಾಂಕವನ್ನು ರಿಯಲ್ ಮಿ ಕಂಪನಿ ನೀಡಿಲ್ಲ. ಹಾಗಾಗಿ, ಖಚಿತ ದಿನಾಂಕವನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೊಸ Realme 10 ಸರಣಿಯ ಬಗ್ಗೆ Realme India CEO ಮಾಧವ್ ಶೇಟ್ ಟ್ವೀಟ್ ಮಾಡಿದಾಗಲೇ, ಬಿಡುಗಡೆಯ ಮಾಹಿತಿಯು ಹೊರ ಜಗತ್ತಿಗೆ ಗೊತ್ತಾಗಿದೆ. ಅವರ ಟ್ವೀಟ್‌ನಲ್ಲಿ ಯಾವುದೇ ಬ್ರ್ಯಾಂಡಿಂಗ್ ಇಲ್ಲದ ಚಿಪ್‌ಸೆಟ್‌ನ ಚಿತ್ರವನ್ನು ಕಾಣಬಹುದಾಗಿದೆ. ಆದರೆ ಮೂಲಗಳ ಪ್ರಕಾರ, ಇದು ಫ್ಲಾಟ್-ಎಡ್ಜ್ ವಿನ್ಯಾಸದೊಂದಿಗೆ ಆಕ್ಟಾ-ಕೋರ್ ಚಿಪ್‌ಸೆಟ್‌ನಂತೆ ಕಂಡುಬರುತ್ತದೆ. "ನೀವು ಕೇಳಿದಂತಹ ಅತ್ಯಾಕರ್ಷಕ ಸಂಗತಿಯನ್ನು ನಾವು ಪಡೆದುಕೊಂಡಿದ್ದೇವೆ, ಶೀಘ್ರದಲ್ಲೇ ಬರಲಿದೆ" ಎಂದು ಮಾಧವ್ ಟ್ವೀಟ್ ಮಾಡಿದ್ದಾರೆ. ದೊಡ್ಡ ಬಹಿರಂಗ ಏನೆಂದು ನೀವು ಊಹಿಸಬಲ್ಲಿರಾ?  #realme10Series ಫೋನುಗಳಲ್ಲಿ ಮೂರು ಪ್ರಮುಖ ತಾಂತ್ರಿಕ ಬೆಳವಣಿಗೆಗಳನ್ನು ಕಾಣಬಹುದಾಗಿದೆ.

Wikipediaಗೆ ಹೊಸ ಫೀಚರ್ಸ್, ಬಳಕೆದಾರರಿಗೆ ಹೊಸ ಅನುಭವ

ವರದಿಗಳ ಪ್ರಕಾರ, ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಳಿಗೇ ಅಂಟಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಟ್ವಿಟರ್‌ನಲ್ಲಿ ಕಂಪನಿಯ ಹಿರಿಯ ಕಾರ್ಯನಿರ್ವಾಹಕರು ಪೋಸ್ಟ್ ಮಾಡಿದ ಟೀಸರ್‌ನಿಂದ ಗೊತ್ತಾಗಿರುವುದು ಏನೆಂದರೆ, Realme 10 Pro+ (ಅಥವಾ Pro) ಕರ್ವ್ಡ್ ಡಿಸ್‌ಪ್ಲೇಯನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಮುಂಬರುವ ಹೊಸ Realme ಫೋನ್ Realme 10 Pro+ ಅನ್ನು ಇತ್ತೀಚೆಗೆ ಚೀನಾದ TENAA ಪ್ರಮಾಣೀಕರಣ ಸೈಟ್‌ನಲ್ಲಿ ಕಂಡು ಬಂತು. ಆ ವೇಳೆ ಫೋನ್‌ನ ವೈಶಿಷ್ಟ್ಯಗಳು, ಪ್ರಮುಖ ವಿಶೇಷತೆಗಳು, ವಿನ್ಯಾಸವನ್ನು ಬಹಿರಂಗಪಡಿಸಲಾಗಿತ್ತು. Realme 10 ಸರಣಿ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ನಿಂದ ಚಾಲಿತವಾಗಿದೆ ಎಂದು ವದಂತಿಗಳಿವೆ. ಇದು ಎರಡು ವೆರಿಯೆಂಟ್‌ಗಳಲ್ಲಿ ದೊರೆಯಲಿವೆ. 6 GB RAM + 128 GB ಸಂಗ್ರಹಣೆ ಮತ್ತು 8 GB RAM + 128 GB ಸಂಗ್ರಹಣೆ ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಸಾಧನವು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,890mAh ಬ್ಯಾಟರಿಯಿಂದ ಚಾಲಿತವಾಗುತ್ತದೆ.

ಮುಂಬರುವ Realme 10 ಸರಣಿಯು (Realme + 10 Pro ಎಂದು ಕರೆಯಲಾಗುವ ಹೈಯರ್ ವೆರಿಯೆಂಟ್) ಕಳೆದ ವರ್ಷ ಬಿಡುಗಡೆಯಾದ Realme 9 Pro+ ನಂತೆಯೇ ಉತ್ತಮ ಮತ್ತು ಹೆಚ್ಚು ವಿವರವಾದ ಚಿತ್ರದ ಗುಣಮಟ್ಟಕ್ಕಾಗಿ OIS- ಸಕ್ರಿಯಗೊಳಿಸಲಾದ ಮುಖ್ಯ ಹಿಂಬದಿಯ ಕ್ಯಾಮೆರಾವನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗುತ್ತದೆ. 

Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್

Realme 10 ಅನ್ನು ಮೂಲ ಮಾದರಿ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದು MediaTek Helio G92 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ, ಮೂಲ ಮಾದರಿಯು AMOLED ಡಿಸ್‌ಪ್ಲೇಗಿಂತ 120Hz LCD ಅನ್ನು ಹೊಂದಿರುತ್ತದೆ ಎಂದು ಮೂಲಗಳು ಹೇಳುತ್ತವೆ. ಈ ಫೋನುಗಳ ಬೆಲೆಯ ಮಾಹಿತಿ ಇನ್ನೂ ಬಹಿರಂಗವಾಗಿಲ್ಲವಾದರೂ,  15,000 ರೂ.ನಿಂದ 20,000 ರೂ.ವರೆಗಿನ ಬೆಲೆಯಲ್ಲಿ  ದೊರೆಯಬಹುದು ಎಂದು ಹೇಳಲಾಗುತ್ತಿದೆ. ನವೆಂಬರ್‌ನಲ್ಲಿ ರಿಲೀಸ್ ಆಗಲಿರುವ ಈ ಫೋನುಗಳ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ.

Follow Us:
Download App:
  • android
  • ios