Wikipediaಗೆ ಹೊಸ ಫೀಚರ್ಸ್, ಬಳಕೆದಾರರಿಗೆ ಹೊಸ ಅನುಭವ
*ಮಾಹಿತಿ ಕಣಜವಾಗಿರುವ ವಿಕಿಪೀಡಿಯಾಗೆ ಹೊಸ ಹೊಸ ಫೀಚರ್ಸ್ ಸೇರ್ಪಡೆ
*ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ವಿಕಿಪೀಡಿಯಾವನ್ನು ಬಳಸುತ್ತಾರೆ
* ಮುಕ್ತ ವೇದಿಕೆಯಾಗಿರುವುದರಿಂದ ತಕ್ಷಣಕ್ಕೆ ಎಲ್ಲ ಮಾಹಿತಿಯು ಅಪ್‌ಡೇಟ್
ಮಾಹಿತಿಯ ಕಣಜ ಎನಿಸಿಕೊಂಡಿರುವ ವಿಕಿಪಿಡೀಯಾಕ್ಕೆ ಹೊಸ ಫೀಚರ್ ಅಳವಡಿಸಲಾಗಿದೆ. ಹೊಸ ಬಳಕೆದಾರರ ಉತ್ತಮ ಅನುಭವಕ್ಕಾಗಿ ವಿಕಿಮೀಡಿಯಾ (Wikimedia) ಕಂಪನಿಯು ವಿಕಿಪೀಡಿಯಾ (Wikipedia)ಗೆ ಈ ವೈಶಿಷ್ಟ್ಯಗಳನ್ನು (New Features) ಪರಿಚಯಿಸುತ್ತಿದೆ. 2019 ರಿಂದ ಹೊಸ ಬಳಕೆದಾರರಿಗೆ ಹೊಸ ಸಾಮರ್ಥ್ಯಗಳನ್ನು ಪರೀಕ್ಷಿಸಿದ ನಂತರ ಕಂಪನಿ, ಪ್ಲಾಟ್ಫಾರ್ಮ್-ವೈಡ್ ಆಧಾರದ ಮೇಲೆ ಮತ್ತಷ್ಟು ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ. ತಮ್ಮ ವಿಕಿಪೀಡಿಯಾ ಖಾತೆಗಳಿಗೆ ಸೈನ್ ಇನ್ ಮಾಡಿದವರು ಹೊಸ ಸಂಪಾದಕರಿಗೆ (ಎಡಿಟರ್ಸ್) ಲ್ಯಾಂಡಿಂಗ್ ಪುಟವನ್ನು ನೋಡಬಹುದು. ಸಲಹೆಯನ್ನು ನೀಡಬಹುದಾದ ಹೆಚ್ಚು ಅನುಭವಿ ಸೈಟ್ ಪರಿಣತರ ಗುಂಪಿನಿಂದ ಅವರಿಗೆ ಮಾರ್ಗದರ್ಶಕರನ್ನು ನಿಯೋಜಿಸಲಾಗುವುದು.
ಹೆಚ್ಚುವರಿಯಾಗಿ, ಲ್ಯಾಂಡಿಂಗ್ ಪುಟದ ಮೂಲಕ ಸ್ವಲ್ಪ ಸುಧಾರಣೆಗಳನ್ನು ಮಾಡಲು ಪ್ರಾರಂಭಿಸಲು ಬಳಕೆದಾರರನ್ನು ಪ್ರೋತ್ಸಾಹಿಸಲಾಗುತ್ತದೆ. ಬಹುಶಃ ವಿಕಿಮೀಡಿಯಾದಿಂದ ರಚಿಸಲಾದ ಯಂತ್ರ ಕಲಿಕೆ ವ್ಯವಸ್ಥೆಯಿಂದ ಶಿಫಾರಸುಗಳನ್ನು ನೀಡಲಾಗುತ್ತದೆ. ಎಡಿಟರ್ಸ್ ಮಾಡುತ್ತಿರುವ ಪ್ರಭಾವವನ್ನು ಅಳೆಯಲು, ಬಳಕೆದಾರರು ಹೊಸಬರ ಪುಟದ "ಪರಿಣಾಮ" ವಿಭಾಗದಲ್ಲಿ ಸ್ವೀಕರಿಸಿದ ಲೇಖನಗಳನ್ನು ಮಾರ್ಪಡಿಸಿದ ಪುಟವೀಕ್ಷಣೆಗಳ ಸಂಖ್ಯೆಯನ್ನು ಪರಿಶೀಲಿಸಬಹುದಾಗಿದೆ. ಬಳಕೆದಾರರ ಅನುಭವವನ್ನು ಸುಧಾರಿಸಲು, ವಿಕಿಮೀಡಿಯಾ ವಿಕಿಪೀಡಿಯಾಕ್ಕೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸಿದೆ. ಪ್ರಸ್ತುತ, ವಿಶ್ವಾದ್ಯಂತ ವಿಕಿಪೀಡಿಯ ಸಮುದಾಯದಲ್ಲಿ 584 ವ್ಯಕ್ತಿಗಳು ಹೊಸ ಲೇಖಕರಿಗೆ ಮಾರ್ಗದರ್ಶನ ನೀಡಲು ನೋಂದಾಯಿಸಿಕೊಂಡಿದ್ದಾರೆ.
Nothing Phone (1) ಭಾರತದಲ್ಲಿ Jio 5G ಬೆಂಬಲಿತ ಮೊದಲ ಫೋನ್
ವಿಕಿಮೀಡಿಯಾದಲ್ಲಿ, "ರಚನಾತ್ಮಕ ಕಾರ್ಯಗಳು" ಆಯ್ಕೆಯನ್ನು ಈಗ ಪ್ರವೇಶಿಸಬಹುದಾಗಿದೆ. ಇದು ಪುಟಗಳಿಗೆ ಸಂಬಂಧಿತ ಫೋಟೋಗಳು ಮತ್ತು ಕ್ರಾಸ್-ವಿಕಿ ಸಂಪರ್ಕಗಳನ್ನು ಸೇರಿಸುವುದು ಮತ್ತು ಕಾಪಿ- ಎಡಿಟಿಂಗ್‌ನಂಥ ಸಲಹೆಯ ಹೊಸ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ವರದಿಯ ಪ್ರಕಾರ, ಹೊಸ ವಿಕಿಮೀಡಿಯಾ ವ್ಯವಸ್ಥೆಯು ವಿವಿಧ ಇಂಟರ್ಫೇಸ್-ಆಧಾರಿತ ಪ್ರಯೋಜನಗಳನ್ನು ನೀಡಲು ಉದ್ದೇಶಿಸಿದೆ.
ವಿಕಿಮೀಡಿಯಾದಲ್ಲಿ ಗ್ರೂಪ್ ಪ್ರಾಡಕ್ಟ್ ಮ್ಯಾನೇಜರ್ ಮಾರ್ಷಲ್ ಮಿಲ್ಲರ್ ಪ್ರಕಾರ, ಹೊಸ ಸಂಪಾದಕರನ್ನು ಉಳಿಸಿಕೊಳ್ಳುವಲ್ಲಿ ತೊಂದರೆಗಳಿವೆ ಎಂದು ವಿಕಿಮೀಡಿಯಾ ಫೌಂಡೇಶನ್ ಗಮನಿಸುತ್ತಿದೆ. ಅಂದರೆ ಬಹಳಷ್ಟು ವ್ಯಕ್ತಿಗಳು ಸಂಪಾದನೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಆದರೆ ವಿಫಲರಾಗುತ್ತಾರೆ. ಬಳಿಕ ಅವರು ಮತ್ತೆ ಅವರು ಇತ್ತ ಕಡೆ ವಾಲುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಕಿಪೀಡಿಯಾ ಸದ್ಯಕ್ಕೆ ಮಾಹಿತಿಯನ್ನು ಒದಗಿಸುವ ವಿಶ್ವದ ಬೃಹತ್ ಮಾಹಿತಿ ಕಣಜವಾಗಿದೆ. ನಿಮಗೆ ಬೇಕಾಗುವ ಎಲ್ಲ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನಿಮಗೆ ಒದಗಿಸುತ್ತದೆ. ಹಾಗಾಗಿ, ಬಹಳಷ್ಟು ಜನರು ವಿಕಿಪೀಡಿಯಾದಿಂದ ಗರಿಷ್ಠ ಲಾಭವನ್ನು ಪಡೆದುಕೊಳ್ಳುತ್ತಾರೆ. ಜಗತ್ತಿನಲ್ಲಿ ನಡೆಯುವ ಯಾವುದೇ ಘಟನೆಗಳನ್ನು ಕ್ಷಣಾರ್ಧದಲ್ಲಿ ವಿಕಿಪೀಡಿಯಾದಲ್ಲಿ ಅಪ್‌ಡೇಟ್ ಆಗುತ್ತವೆ. ಮೂಲಕ ಜನರಿಗೆ ರಿಯಲ್‌ಟೈಮ್‌ನಲ್ಲಿ ನಿಖರ ವಾಗಿರುವ ಮಾಹಿತಿಯನ್ನು ನೀಡುವಲ್ಲಿ ವಿಕಿಪೀಡಿಯಾ ಯಶಸ್ವಿಯಾಗುತ್ತಿದೆ. ಕಠಿಣಾತೀಕಠಿಣ ವಿಷಯಗಳ ಬಗ್ಗೆಯೂ ಪುಟಗಟ್ಟಲೇ ಮಾಹಿತಿಯನ್ನು ನೀವು ಈ ವಿಕಿಪೀಡಿಯಾದಿಂದ ಪಡೆದುಕೊಳ್ಳಬಹುದು. ವಿಕಿಪೀಡಿಯಾ ಬಳಿ ಇರದ ಮಾಹಿತಿಯೇ ಇಲ್ಲ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಅದು ಸರ್ವವ್ಯಾಪಿಯಾಗಿದೆ.
12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್!
ಎಲ್ಲರಿಗೂ ಎಡಿಟ್ ಮಾಡಲು ಮುಕ್ತವಾಗಿರುವುದರಿಂದ ವಿಕಿಪೀಡಿಯಾ ಪುಟದಲ್ಲಿ ರಿಯಲ್‌ಟೈಮ್‌ನಲ್ಲಿ ಪುಟಗಳನ್ನು ಎಡಿಟ್ ಮಾಡಿ, ನಿಖರ ಮಾಹಿತಿಯನ್ನು ಸೇರಿಸಲು ಸಾಧ್ಯವಾಗುತ್ತಿದೆ. ಹಾಗಂತ ವಿಕಿಪೀಡಿಯಾದಲ್ಲಿ ಲೋಪಲಗಳೇ ಇಲ್ಲ ಎಂದೇನೂ ಇಲ್ಲ. ಇದೊಂದು ಮುಕ್ತವಾಗಿ ವೇದಿಕೆಯಾಗಿರುವುದರಿಂದ ಸಾಕಷ್ಟು ಬಾರಿ ತಪ್ಪು ಮಾಹಿತಿಗಳು ಕೂಡ ನುಸುಳುತ್ತವೆ. ಹಾಗಾಗಿ, ಕೆಲವೊಮ್ಮೆ ಬಾರಿ ಅನುಮಾನಗಳು ಬಂದಾಗ ಕ್ರಾಸ್‌ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಈ ದೋಷವನ್ನು ಬಿಟ್ಟು ನೋಡಿದರೆ, ವಿಕಿಪೀಡಿಯಾ ಮಾತ್ರ ಎಲ್ಲ ರೀತಿಯ ಜ್ಞಾನದ ದಾಹಗಳನ್ನು ನೀಗಿಸುವ ಮುಕ್ತ ವೇದಿಕೆಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನಗಳೇ ಇಲ್ಲ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ನಾವೆಲ್ಲ ವಿಕಿಪೀಡಿಯಾ ಪೀಡಿತರಾಗಿದ್ದೇವೆ ಎಂದರೆ ತಪ್ಪೇನೂ ಇಲ್ಲ.