ಕೈಗೆಟುಕುವ ದರದಲ್ಲಿ 4 ಕ್ಯಾಮೆರಾ ಇರುವ ಪೋಕೋ ಎಕ್ಸ್3 ಪ್ರೋ ಫೋನ್ ಲಾಂಚ್
ಜಾಗತಿಕವಾಗಿ ಶಿಯೋಮಿ ಎಂ11 ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಒಂದೊಮ್ಮೆ ಶಿಯೋಮಿ ಸಬ್‌ಬ್ರ್ಯಾಂಡ್ ಆಗಿದ್ದ ಪೋಕೋ ಇದೀಗ ಭಾರತೀಯ ಮಾರುಕಟ್ಟೆಗೆ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಜಾಗತಿಕವಾಗಿ ಕಳೆದ ವಾರವಷ್ಟೇ ಬಿಡುಗಡೆ ಮಾಡಿತ್ತು. ಈ ಫೋನ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ.
ಚೀನಾ ಮೂಲದ ಶಿಯೋಮಿ ಕಂಪನಿಯ ಸಬ್ ಬ್ರ್ಯಾಂಡ್ ಆಗಿದ್ದ ಪೋಕೋ ಇದೀಗ ಸ್ವತಂತ್ರ ಬ್ರ್ಯಾಂಡ್ ಆಗಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಪೋಕೋ, ದಿಗ್ಗಜ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸವಾಲು ಎಸೆಯುತ್ತಿದೆ.
ಶಿಯೋಮಿ ಎಂ11 ಸೀರೀಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಬೆನ್ನಲ್ಲೇ ಪೋಕೋ ಕೂಡ ಭಾರತೀಯ ಮಾರುಕಟ್ಟೆಗೆ ಪೋಕೋ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಕಂಪನಿ ಜಾಗತಿಕ ಮಾರುಕಟ್ಟೆಗೆ ಕಳೆದ ವಾರವಷ್ಟೇ ಬಿಡುಗಡೆ ಮಾಡಿತ್ತು.
ಕೊರೋನಾ ಕಾಡಿದ್ರೂ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರೀ ಏರಿಕೆ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಬಿಡುಗಡೆಯಾಗಿದ್ದ ಪೋಕೋ ಎಕ್ಸ್3 ಸ್ಮಾರ್ಟ್‌ಫೋನ್‌ನ ಅಪ್‌ಗ್ರೇಡ್ ವರ್ಷನ್ ಆಗಿ ಕಂಪನಿ, ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಎಕ್ಸ್3 ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ಪೋಕೋ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಕ್ವಾಲಂಕಾಮ್ ಸ್ನ್ಯಾಪ್‌ಡ್ರಾಗನ್ 860 ಎಸ್ಒಸಿ ಆಧರಿತವಾಗಿತ್ತು. 120 ಹಜಾರ್ಡ್ಸ್ ಡಿಸ್‌ಪ್ಲೇಯೊಂದಿಗೆ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. 256 ಜಿಬಿವರೆಗೂ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಈ ಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿ, ರಿಯಲ್‌ಮಿ ಎಕ್ಸ್7 ಮತ್ತು ವಿವೋ ವಿ20 ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಏಪ್ರಿಲ್ 6ರಿಂದ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮೂಲಕ ಪೋಕೋ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಲಭ್ಯವಾಗಲಿದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ವೆರಿಯೆಂಟ್ ಬೆಲೆ 18,999 ರೂಪಾಯಿ ಇದ್ದರೆ, 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 20,999 ರೂಪಾಯಿ ಇರಲಿದೆ. ಗೋಲ್ಡನ್ ಬ್ರೌಂಜ್, ಗ್ರಾಫೈಟ್ ಬ್ಲ್ಯಾಕ್, ಸ್ಟೀಲ್ ಬ್ಲ್ಯೂ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಕಂಪನಿ ಈ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಲಿದೆ.
ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?
ಪೋಕೋ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಫರ್ ಆಗಿ ಕಂಪನಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ಮೂಲಕ ಖರೀದಿಸುವವರಿಗೆ ತಕ್ಷಣಕ್ಕೆ ಶೇ.10ರಷ್ಟು ಡಿಸ್ಕೌಂಟ್ ನೀಡಲಿದೆ. ಅಂದರೆ, ಸಾವಿರ ರೂಪಾಯಿವರೆಗೂ ರಿಯಾಯ್ತಿ ಸಿಗಬಹುದು.
ಎಂಐಯುಐ 12 ಜೊತೆಗೆ ಆಂಡ್ರಾಯ್ಡ್ 11 ಒಎಸ್ ಮೂಲಕ ರನ್ ಆಗಲಿರುವ ಈ ಪೋಕೋ ಎಕ್ಸ್3 ಪ್ರೋ ಫೋನ್, ಡುಯಲ್ ಸಿಮ್ ಮತ್ತು ಹೋಲ್-ಪಂಚ್ ಒಳಗೊಂಡಿರುವ ಡಾಟ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಕ್ರೀನ್ ಸೈಜ್ 6.67 ಇಂಚ್ ಇರಲಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ ಕೂಡ ಇರಲಿದೆ. ಅಕ್ಟಾಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 860 ಪ್ರೊಸೆಸರ್ ಒಳಗೊಂಡಿದೆ.
ಈ ಫೋನ್‌ನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳ ಸೆಟ್ ಅಪ್ ನೀಡಲಾಗಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಅಲ್ಟ್ರಾ ವೈಡ್ ಶೂಟರ್ ಆಗಿ ಕಂಪನಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಇನ್ನು ಮ್ಯಾಕ್ರೋ ಶೂಟರ್ ಹಾಗೂ ಡೆಪ್ತ್ ಶೂಟರ್‌ಗಾಗಿ ಕಂಪನಿ ಕ್ರಮವಾಗಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಇನ್ನು ಸೆಲ್ಫಿ ಕ್ಯಾಮೆರಾಗಾಗಿ ಕಂಪನಿ 20 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ.
1,19,000 ರೂ. ಬೆಲೆಯ ಲೆನೆವೋ ಯೋಗಾ ಸ್ಲಿಮ್ 7ಐ ಕಾರ್ಬನ್ ಲ್ಯಾಪ್‌ಟ್ಯಾಪ್ ಬಿಡುಗಡೆ
ಈ ಪೋಕೋ ಎಕ್ಸ್3 ಪ್ರೋ ಸ್ಮಾರ್ಟ್‌ಫೋನ್ ನಿಮಗೆ 5,160 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಜೊತೆಗೆ ಈ ಬ್ಯಾಟರಿ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಈ ಫೋನ್ 4ಜಿ ಎಲ್ಇಟಿಗೆ ಸಪೋರ್ಟ್ ಮಾಡಲಿದೆ. ಇನ್ನುಳಿದಂತೆ ಕನೆಕ್ಟಿವಿಟಿ ಫೀಚರ್‌ಗಳು ಕೂಡ ಅದ್ಭುತವಾಗಿವೆ.