Poco M4 Pro 5G ಕೈಗೆಟುಕುವ ದರದ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ, ಇದರಲ್ಲಿದೆ ಹಲವು ವಿಶೇಷತೆ!
* ಈ ಮೊದಲೇ ಘೋಷಿಸಿದಂತೆ ಭಾರತದಲ್ಲಿ ಫೋನ್ ಲಾಂಚ್ ಮಾಡಿದ ಪೋಕೋ
* ಅಕ್ಟಾಕೋರ್ ಮೀಡಿಯಾ ಟೆಕ್ ಡಿಮೆನ್ಸಿಟ್ 810 ಪ್ರೊಸೆಸರ್ ಇದೆ
* ಡುಯಲ್ ಕ್ಯಾಮೆರಾಗಳಿದ್ದು, ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ
ಈ ಮೊದಲೇ ಘೋಷಿಸಿದಂತೆ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಪೋಕೋ (POCO) ತನ್ನ ಪೋಕೋ ಎಂ 4 ಪ್ರೋ 5ಜಿ (Poco M4 Pro 5G) ಸ್ಮಾರ್ಟ್‌ಫೋನ್ ಅನ್ನು ಮಂಗಳವಾರ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಬಿಡಗುಡೆಯಾಗಿ, ಸಕ್ಸೆಸ್ ಆಗಿದ್ದ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಮಾಡೆಲ್ ಆಗಿ ಎಂ 4 ಪ್ರೋ ಬಿಡುಗಡೆ ಮಾಡಲಾಗಿದೆ. ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಹೊಸ ಫೋನ್, ಅಕ್ಟಾಕೋರ್ ಮೀಡಿಯಾ ಟೆಕ್ ಡಿಮೆನ್ಸಿಟ್ 810 ಚಿಪ್, 33 ವ್ಯಾಟ್ ಫಾಸ್ಟ್ ಚಾರ್ಜಿಂಗ್, 50 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8 ಜಿಬಿ RAM ಜೊತೆಗೆ ಟರ್ಬೊ RAM ಸೌಲಭ್ಯ ಇರಲಿದೆ. ಅಂದರೆ ಬಳಕೆದಾರ ವರ್ಚುವಲ್ ಆಗಿ RAM ಅನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಪೋಕೋ ತನ್ನದೇ ಆದ ಪಾಲನ್ನು ಹೊಂದಿದೆ. ತನ್ನ ವಿಶಿಷ್ಟ ಹಾಗೂ ಅತ್ಯಾಧುನಿಕ ಫೋನ್‌ಗಳ ಮೂಲಕ ಪೋಕೋ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಂಪನಿಯು ವಾರದ ಹಿಂದೆ ಟೀಸರ್ ಷೇರ್ ಮಾಡಿಕೊಂಡು ಈ ಹೊಸ ಫೋನ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿತ್ತು.
ಈಗ ಭಾರತೀಯ ಮಾರುಕಟ್ಟೆಗೆ ಬಿಡಗುಡೆಯಾಗಿರುವ ಪೋಕೋ ಎಂ 4 ಪ್ರೋ 5 ಜಿ ಸ್ಮಾರ್ಟ್‌ಫೋನ್, ವಿವೋ ಟಿ1 5ಜಿ, ರಿಯಲ್ ಮಿ ನಾರ್ಜೊ 30 ಪ್ರೋ, ಒಪ್ಪೋ ಎ74 5ಜಿ ಮತ್ತು ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಚೀನಾ ಮೂಲದ ಈ ಬ್ರ್ಯಾಂಡ್ ತನ್ನ ವಿಶಿಷ್ಟ ಸ್ಮಾರ್ಟ್‌ಫೋನುಗಳ ಮೂಲಗ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹೇಗಿದೆ ಪೋಕೋ ಎಂ4 ಪ್ರೋ 5ಜಿ?
ಈಗಾಗಲೇ ಹೇಳಿದಂತೆ ಈ ಫೋನು ಹಲವು ವಿಶೇಷತೆಗಳೊಂದಿಗೆ ಗ್ರಾಹಕರಿಗೆ ಸಿಗಲಿದೆ. ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ, ಪೋಕೋ ಎಂ 4 ಪ್ರೋ 5ಜಿ (POCO M4 Pro 5G) ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 11 ಆಧರಿತ MIUI 12.5 ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ರನ್ ಆಗಲಿದೆ. 6.6 ಫುಲ್ ಎಚ್‌ಡಿ ಡಾಟ್ ಡಿಸ್‌ಪ್ಲೇ ಅನ್ನು ಹೊಂದಿರುವ ಈ ಫೋನ್, ಅಕ್ಟಾಕೋರ್ ಮೀಡಿಯಾ ಟೆಕ್ ಡಿಮೆನ್ಸಿಟಿ 810 (octa-core MediaTek Dimensity 810 SoC) ಪ್ರೊಸೆಸರ್ ಒಳಗೊಂಡಿದೆ. ಇದಕ್ಕೆ LPDDR4X RAM ಜತೆಗೆ 8 ಜಿಬಿ RAM ಸಂಯೋಜಿಸಲಾಗಿದೆ.
Google Duo Milestone: ಪ್ಲೇ ಸ್ಟೋರ್‌ನಲ್ಲಿ ವೀಡಿಯೋ ಕಾಲಿಂಗ್ ಆ್ಯಪ್ 500 ಕೋಟಿ ಡೌನ್‌ಲೋಡ್!
ಕ್ಯಾಮೆರಾ ಚೆನ್ನಾಗಿದೆಯಾ?
ಪೋಕೋ ಎಂ 4 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಳಸಲಾಗಿರುವ ಕ್ಯಾಮೆರಾ ಕೂಡ ಚೆನ್ನಾಗಿದೆ. ಈ ಮೊದಲೇ ಹೇಳಿದಂತೆ ಕಂಪನಿಯು ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾಗಳನ್ನು ಒದಗಿಸಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದು, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಾಗಿ ಕಂಪನಿಯು ಫೋನ್ ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಹಿಂಬದಿ ಮತ್ತು ಮುಂಬದಿ ಕ್ಯಾಮೆರಾಗಳು ಈ ಸೆಗ್ಮೆಂಟ್ ಫೋನುಗಳಿಗೆ ಹೋಲಿಸಿದರೆ ಚೆನ್ನಾಗಿಯೇ ಇವೆ ಎಂದು ಹೇಳಬಹುದು.
ಪೋಕೋ ಎಂ 4 ಪ್ರೋ 5ಜಿ ಸ್ಮಾರ್ಟ್‌ಫೋನ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಬಳಕೆದಾರರು ಈ ಮೆಮೋರಿಯನ್ನು microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. 5ಜಿ, 4ಜಿ ಎಲ್‌ಟಿಇ, ಬ್ಲೂಟೂಥ್ ವಿ5.1, GPS/ A-GPS, ಇನ್ಫ್ರಾರೆಡ್ ಬ್ಲಾಸ್ಟರ್, ಯುಎಸ್‌ಬಿ ಟೈಪ್ ಸಿ, 3.5 ಹೆಡ್‌ಫೋನ್ ಜಾಕ್ ಸೇರಿದಂತೆ ಇತರ ಕನೆಕ್ಟಿವಿ ಆಪ್ಷನ್‌ಗಳನ್ನು ಈ ಫೋನಿನಲ್ಲಿ ಕಾಣಬಹುದು.
Micromax In 2: ಸ್ವದೇಶಿ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತೊಂದು ಫೋನ್? ಏನೆಲ್ಲ ವಿಶೇಷತೆ?
ಈ ಫೋನ್ ಖರೀದಿಗೆ ಎಷ್ಟು ದುಡ್ಡು ಕೊಡಬೇಕು?
ಪೋಕೋ ಎಂ5 ಪ್ರೋ 5ಜಿ ಸ್ಮಾರ್ಟ್‌ಫೋನ್ 14,999 ರೂ.ನಿಂದ ಆರಂಭವಾಗಿ 18,999 ರೂ.ವರೆಗೂ ಇದೆ. RAM ಮತ್ತು ಸ್ಟೋರೇಜ್ ಸಾಮರ್ಥ್ಯ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಾಗುತ್ತದೆ. ಈ ಫೋನ್ 4 ಜಿಬಿ, 6 ಜಿಬಿ ಮತ್ತು 8 ಜಿಬಿ ಮಾದರಿಗಳಲ್ಲಿ ದೊರೆಯಲಿದೆ.