ಬಿಎಸ್ಸೆನ್ನೆಲ್ ಬಳಕೆದಾರರಿಗ ಖುಷಿಯ ಸುದ್ದಿ ಇದು. ಬಿಎಸ್ಸೆನ್ನೆಲ್ ತನ್ನ ದೀರ್ಘಾವಧಿಯ ಎರಡು ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡುತ್ತಿದೆ. ಪರಿಷ್ಕರಣೆ ಅನ್ವಯ ಈ ಪ್ಲ್ಯಾನ್‌ಗಳ ವ್ಯಾಲಿಡಿಟಿ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.

1,999 ರೂ. ಪ್ರಿಪೇಡ್ ಪ್ಲ್ಯಾನ್ ವ್ಯಾಲಿಡಿಟಿ ಅವಧಿಯನ್ನು 21 ದಿನಗಳವರೆಗೆ ಹೆಚ್ಚಿಸಿದೆ. ಅಂದರೆ, ನೀವು ಈ ಪ್ಲ್ಯಾನ್ ಖರೀದಿಸಿದರೆ ವ್ಯಾಲಿಡಿಟಿಯು 386 ದಿನಗಳವರೆಗೂ ಇರಲಿದೆ. ಇದೊಂದು ಸೀಮಿತ ಅವಧಿಯ ಆಫರ್ ಆಗಿದ್ದು, ಜನವರಿ 10ರಿಂದ ಆರಂಭವಾಗಿ, ಜನವರಿ 31ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ, ಹೆಚ್ಚುವರಿ 21 ದಿನಗಳ ವ್ಯಾಲಿಡಿಟಿ  ಬೇಕಿದ್ದರೆ ಈ ಪ್ಲ್ಯಾನ್ ಖರೀದಿಗೆ ತ್ವರೆ ಮಾಡಿದೆ.

New Sensation: ವಾಟ್ಸಾಪ್ ಹಿಂದಿಕ್ಕುವ ಸಿಗ್ನಲ್

ಇಷ್ಟು ಮಾತ್ರವಲ್ಲದೇ 2,399 ರೂಪಾಯಿಯ ಲಾಂಗ್ ಟರ್ಮ್ ಪ್ಲ್ಯಾನ್ ಕೂಡ ಪರಿಷ್ಕರಣೆಯಾಗಿದೆ. ಸದ್ಯಕ್ಕೆ ಈ ಪ್ಲ್ಯಾನ್ ನಿಮಗೆ 600 ದಿನಗಳ ವ್ಯಾಲಿಡಿಟಿ ಸಿಗುತ್ತಿದೆ. ಒಮ್ಮೆ ಪರಿಷ್ಕೃತ ಪ್ಲ್ಯಾನ್ ಸಕ್ರಿಯಗೊಂಡರೆ, ನಿಮಗೆ ಕೇವಲ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ. 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಬಿಎಸ್ಸೆನ್ನೆಲ್ ಹೆಚ್ಚುವರಿ 72 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಅಂದರೆ ಒಟ್ಟು 437 ದಿನಗಳ ವ್ಯಾಲಿಡಿಟಿಯೊಂದಿಗೆ 2,399 ರೂ. ಹೆಚ್ಚುವರಿ 72 ದಿನಗಳು ಪ್ರಚಾರದ ಆಫರ್ ಆಗಿದೆ. ಈ ಆಫರ್ ಕೂಡ ಜನವರಿ 31ರವರೆಗ ಮಾತ್ರವೇ ಇರಲಿದೆ.

1999 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ನಿತ್ಯ 3ಜಿಬಿ ಡೇಟಾ, ಎಲ್ಲ ನೆಟ್ವರ್ಕ್‌ಗಳಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್, ನಿತ್ಯ 100 ಎಸ್ಸೆಮ್ಮೆಸ್ ದೊರೆಯುತ್ತವೆ. ಜೊತೆಗೆ, ಬಿಎಸ್ಸೆನ್ನೆಲ್ ಟ್ಯೂನ್‌ಗಳನ್ನು ಪಡೆಯಬಹುದು ಮತ್ತು ಎಷ್ಟು ಬಾರಿಯಾದರೂ ಸಕ್ರಿಯಗೊಳಿಸಬಹುದು. 365 ದಿನಗಳಿಗೆ ಇರೋಸ್ ನೌ ಸಬ್ಸ್‌ಕ್ರಿಪ್ಷನ್ ಹಾಗೂ ಎರಡು ತಿಂಗಳವರೆಗೆ ಲಾಕ್‌ಡುನ್ ಪಡೆದುಕೊಳ್ಳಬಹುದು.

ಇನ್ನು 2,399 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ಬಿಎಸ್ಸೆನ್ನೆಲ್ ಗ್ರಾಹಕರು ಎಲ್ಲ ನೆಟ್ವರ್ಕ್‌ಗಳಿಗೆ ಅನಿಯಂತ್ರಿತ ವಾಯ್ಸ್ ಕಾಲ್ ಜೊತೆಗೆ ಎಫ್‌ಯುಪಿ ಮಿತಿ ಇರುವುದಿಲ್ಲ ಎಂದು ಹಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ.

ಜೊತೆಗೆ ನಿತ್ಯ 3 ಜಿಬಿ ಡೇಟಾ ದೊರೆಯುತ್ತದೆ. ಒಂದೊಮ್ಮೆ ಡೇಟಾ ಕೋಟಾ ಖಾಲಿಯಾದರೆ ಇಂಟರ್ನೆಟ್ ಸ್ಪೀಡ್ 80ಕೆಬಿಪಿಎಸ್‌ಗೆ ಕುಗ್ಗುತ್ತದೆ. ನಿತ್ಯ 100 ಎಸ್ಸೆಮ್ಮೆಸ್ ಉಚಿತವಾಗಿ ಸಿಗುತ್ತವೆ.

ಎಫ್‌ಯುಪಿ ಕೈ ಬಿಟ್ಟ ಬಿಎಸ್ಸೆನ್ನೆಲ್
ಪ್ರತಿಸ್ಪರ್ಧಿ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವಿಐಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಬಿಎಸ್ಸೆನ್ನೆಲ್‌ ಬಳಕೆದಾರರನ್ನು ಸೆಳೆಯಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಘೋಷಿಸುತ್ತಿದೆ. ಇದೀಗ ಕಂಪನಿ ಎಫ್‌ಯುಪಿ ಮಿತಿಯನ್ನು ಕೈ ಬಿಡಲು ಮುಂದಾಗಿದ್ದು, 398 ರೂ. ಪ್ರಿಪೇಡ್ ಪ್ಲ್ಯಾನ್ ಜಾರಿಗೆ ತರುತ್ತಿದೆ. ಟೆಲಿಕಾಂ ವಲಯದಲ್ಲಿ ತೀವ್ರ ಪೈಪೋಟಿಯೊಡುತ್ತಿರುವ ರಿಲಯನ್ಸ್‌ನ ಜಿಯೋ ಇತ್ತೀಚೆಗಷ್ಟೇ, ಜಿಯೋದಿಂದ ಯಾವುದೇ ನೆಟ್‌ವರ್ಕ್‌ಗೆ ಮಾಡಲಾಗುವ ಕರೆಗಳನ್ನು ಉಚಿತವಾಗಿಸಿತ್ತು. ಇದೀಗ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್ಸೆನ್ನೆಲ್), ನ್ಯಾಯಯುತ ಬಳಕೆಯ ನೀತಿ(ಫೇರ್ ಯೂಸೇಜ್ ಪಾಲಿಸಿ-ಎಫ್‌ಯುಪಿ) ಮಿತಿಯನ್ನು ಕೈಬಿಡಲು ಮುಂದಾಗಿದೆ.

ಲಾವಾದಿಂದ ಜಗತ್ತಿನ ಮೊದಲ ಕಸ್ಟಮೈಸಡ್ ಸ್ಮಾರ್ಟ್‌ಫೋನ್

ಇಷ್ಟು ಮಾತ್ರವಲ್ಲದೇ,  ಇದೇ ಜನವರಿ 10 ರಿಂದ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯಗಳೊಂದಿಗೆ ಪ್ಲಾನ್ ವೋಚರ್‌ಗಳು, ಎಸ್‌ಟಿವಿಗಳು ಮತ್ತು ಕಾಂಬೊ ವೋಚರ್‌ಗಳಿಗೆ ಅನಿಯಮಿತ ಕರೆಗಳನ್ನು ಲಭ್ಯಗೊಳಿಸುತ್ತಿದೆ ಎಂದು ಬಿಎಸ್ಸೆನ್ನೆಲ್ ಘೋಷಿಸಿದೆ. ಸದ್ಯ, ಎಫ್‌ಯುಪಿ ಮಿತಿಯನ್ನು  ಮೀರುವ ಗ್ರಾಹಕರಿಗೆ ಮೂಲ ಟ್ಯಾರಿಫ್ ಪ್ಲ್ಯಾನ್ ಶುಲ್ಕವಿಧಿಸಲಾಗುತ್ತದೆ. ಇತ್ತೀಚೆಗಷ್ಟೇ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ(ಟ್ರಾಯ್)ವು ಅಂತರ್‌ಸಂಪರ್ಕಿತ ಬಳಕೆಯ ಶುಲ್ಕವನ್ನು ರದ್ದುಗೊಳಿಸಿದ  ಬೆನ್ನಲ್ಲೇ, ಜಿಯೋ ದೇಶಿಯ ಕರೆಗಳನ್ನು ಉಚಿತ ಮಾಡಿದ್ದರೆ, ಬಿಎಸ್ಸೆನ್ನೆಲ್ ಎಫ್‌ಯಪಿ ಮಿತಿಯನ್ನುತೆಗೆದು ಹಾಕುತ್ತಿದೆ.

ಯಾವುದೇ ಎಫ್‌ಯುಪಿ ಮಿತಿ ಇಲ್ಲದೇ ಅನಿಯಮತಿ ಕರೆಗೆ ಅವಕಾಶ ನೀಡುವ 398 ರೂ. ಸ್ಪೇಷಲ್ ಟಾರಿಫ್ ವೋಚರ್(ಎಸ್‌ಟಿವಿ) ಪ್ಲ್ಯಾನ್ ಅನ್ನು ಬಿಎಸ್ಸೆನ್ನೆಲ್ ಶೀಘ್ರವೇ ಜಾರಿಗೆ ತರಲಿದೆ. ಈ ಪ್ಯಾನ್‌ನಡಿ ಬಳಕೆದಾರರು ಅನಿಯಮಿತ ಡೇಟಾ ಕೂಡ  ಬಳಸಬಹುದು ಎಂದು ಹಲವು ಸುದ್ದಿ ಜಾಲತಾಣಗಳು ವರದಿ ಮಾಡಿವೆ. ಪ್ರಿಪೇಡ್ ವೋಚರ್‌ನಲ್ಲಿ ಬಳಕೆದಾರರಿಗೆ 30 ದಿನಗಳ ವ್ಯಾಲಿಡಿಟಿಯಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್ ಉಚಿತವಾಗಿ ದೊರೆಯಲಿವೆ.

ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌‌ಫುಲ್ ಬ್ಯಾಟರಿ