Oppo Reno 8 ಸರಣಿ ಮೇ 23ರಂದು ಬಿಡುಗಡೆ: ನಿರೀಕ್ಷಿತ ಫೀಚರ್‌ಗಳೇನು?

ಓಪ್ಪೋ ಈ ಬಾರಿ ಮತ್ತೆ ಮೂರು ಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. Reno 8, Reno 8 Pro ಮತ್ತು Reno 8 SE ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಬಹುದು ಎಂದು ವರದಿಗಳು ಸೂಚಿಸಿವೆ

Oppo Reno 8 PRO SE launch date May 23 Specifications Features and More mnj

Oppo Reno 8 Series Launch: Oppo Reno 8 ಸರಣಿಯ ಬಿಡುಗಡೆ ದಿನಾಂಕ ಅಂತಿಮವಾಗಿ ದೃಡಪಟ್ಟಿದೆ. ಕಂಪನಿಯು ತನ್ನ ಜನಪ್ರಿಯ ರೆನೋ ಸರಣಿಯಲ್ಲಿ ಹೊಸ ಫೋನ್‌ಗಳನ್ನು ಪರಿಚಯಿಸಲು ಮೇ 23 ರಂದು ಕಾರ್ಯಕ್ರಮವನ್ನು ನಡೆಸುವುದಾಗಿ ಘೋಷಿಸಿದೆ. Reno 8 ಸರಣಿಯು ಹೇಗಿರುತ್ತದೆ ಎಂಬುದರ ಕುರಿತು ಓಪ್ಪೋ  ಹೆಚ್ಚಿನ ಮಾಹಿತಿ ನೀಡಿಲ್ಲವಾದೂ, Reno 8, Reno 8 Pro ಮತ್ತು Reno 8 SE ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಬಹುದು ಎಂದು ವರದಿಗಳು ಸೂಚಿಸಿವೆ.  ಈ ಫೋನ್‌ಗಳಲ್ಲಿ ಒಂದು ಕ್ವಾಲ್‌ಕಾಮ್ ಪ್ರೊಸೆಸರ್  ಬಳಸಲಿದೆ ಮತ್ತು ಇದನ್ನು ಚೀನಾದಲ್ಲಿ ಮೇ 20 ರಂದು ಘೋಷಿಸಲಾಗುವುದು.

ರೆನೋ 8 ಸರಣಿಯ ಎಲ್ಲಾ ಮೂರು ಮಾದರಿಗಳ ಪ್ರಮುಖ ವಿಶೇಷಣಗಳು ಈಗಾಗಲೇ ಸೋರಿಕೆಯಾಗಿವೆ. ಮತ್ತು Qualcomm ಮೇ 20 ರಂದು ಚೀನಾದಲ್ಲಿ ಈವೆಂಟ್ ನಿಗದಿಪಡಿಸಿದೆ ಎಂಬ ಅಂಶವು ಹೊಸ Snapdragon 8 Gen 1 Plus ಮತ್ತು Snapdragon 7 Gen 1 ಪ್ರೊಸೆಸರ್‌ಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂಬ ಅಂಶವು ಈ ವದಂತಿಗಳನ್ನು ದೃಢೀಕರಿಸುತ್ತದೆ.

Oppo Reno 8 Pro ಫೀಚರ್ಸ್:‌ Oppo Reno 8 Pro ಈ ಸರಣಿಯಲ್ಲಿ ಅತ್ಯಂತ ದುಬಾರಿ ಫೋನ್ ಆಗಿರುತ್ತದೆ ಎಂದು ವರದಿಗಳು ತಿಳಿಸಿವೆ . Reno 8 Pro ಮೀಡಿಯಾ ಟೆಕ್ ಡೈಮೆನ್ಸಿಟಿ 8100-MAX ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ಡಿಜಿಟಲ್ ಚಾಟ್ ಸ್ಟೇಷನ್ ವರದಿ ಹೇಳಿದೆ. ಇದಲ್ಲದೆ, Reno 8 Pro 6.62-ಇಂಚಿನ FullHD OLED ಡಿಸ್ಪ್ಲೇಯೊಂದಿಗೆ 120Hz ನಲ್ಲಿ ರಿಫ್ರೆಶ್ ದರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. 

ಫೋನ್ ಎನ್‌ಎಫ್‌ಸಿ (NFC) ಬೆಂಬಲ ಮತ್ತು ಹ್ಯಾಪ್ಟಿಕ್ ಪ್ರತಿಕ್ರಿಯೆಗಾಗಿ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್‌ನೊಂದಿಗೆ ಬರುವ ಸಾಧ್ಯತೆಯಿದೆ. ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಬಳಸಬಹುದು. 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ Reno 8 Pro ಒಳಗೆ 4500mAh ಬ್ಯಾಟರಿ ಇರಬಹುದು.

ಇದನ್ನೂ ಓದಿOppo K10 5G ಮತ್ತು ಪ್ರೋ ಸ್ಮಾರ್ಟ್‌ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳು?

ಇತ್ತೀಚಿನ ರೆಂಡರ್‌ಗಳು Reno 8 Pro ಕಂಪನಿಯ ಪೋರ್ಟ್‌ಫೋಲಿಯೊಗೆ ಸಂಪೂರ್ಣವಾಗಿ ಹೊಸ ನೋಟವನ್ನು ತರುತ್ತದೆ ಎಂದು ತೋರಿಸಿದೆ, ಆದರೆ ವಿನ್ಯಾಸವು OnePlus 10 Pro ನಂತೆಯೇ ಕಾಣುತ್ತದೆ. Reno 8 Pro Xiaoyao ಗ್ರೀನ್, ರೋಮಿಂಗ್ ಗ್ರೇ ಮತ್ತು ಡಾರ್ಕ್ ಬ್ಲಾಕ್ ಬಣ್ಣಗಳಲ್ಲಿ ಬರಲಿದೆ ಎಂದು ವರದಿಗಳು ಸೂಚಿಸುತ್ತವೆ̤ 

Oppo Reno 8 ಫೀಚರ್ಸ್:‌ Reno 8, Reno 8 Pro ಗಿಂತ ಸ್ವಲ್ಪ ಕಡಿಮೆ ಶಕ್ತಿಯುತವಾಗಿದೆ, ಆದರೆ ಅದರ ಬೆಲೆಗೆ ಜನರಿಗೆ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಲಿದೆ. ವದಂತಿಗಳ ಪ್ರಕಾರ, Reno 8 Qualcomm Snapdragon 7 Gen 1 ಪ್ರೊಸೆಸರ್‌ನೊಂದಿಗೆ ಬರುತ್ತದೆ, ಅದು ಮೇ 20 ರಂದು ಆಗಮಿಸಲಿದೆ.  Reno 8  ಕ್ವಾಲ್ಕಾಮ್‌ನ ಹೊಸ ಪ್ರೊಸೆಸರ್‌ನೊಂದಿಗೆ ಬಹುಶಃ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ.

ಫೋನ್ 179 ಗ್ರಾಂ ತೂಕವಿರಬಹುದು ಮತ್ತು ಸುಮಾರು 7.67mm ದಪ್ಪವಾಗಿರಬಹುದು. ರೆನೋ 8 ರ ಉಳಿದ ವಿಶೇಷಣಗಳು ಸದ್ಯಕ್ಕೆ ಸ್ಪಷ್ಟವಾಗಿಲ್ಲ. Reno 8 ನ ಕ್ಯಾಮೆರಾ ಮತ್ತು ಬ್ಯಾಟರಿ ವಿಶೇಷಣಗಳು Reno 8 Pro ನಂತೆಯೇ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರಬಹುದು - ಸ್ಲೈಟ್ಲಿ ಡ್ರಂಕ್, ಎನ್‌ಕೌಂಟರ್ ಬ್ಲೂ ಮತ್ತು ನೈಟ್ ಟೂರ್ ಬ್ಲ್ಯಾಕ್.

Oppo Reno 8 SE ಫೀಚರ್ಸ್:‌ Reno 8 SE ಸರಣಿಯಲ್ಲಿ ಅಗ್ಗದ ಫೋನ್ ಆಗಿರುತ್ತದೆ ಮತ್ತು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್  ಒಳಗೊಂಡಿರಬಹುದು, ಇದನ್ನು ಸುಮಾರು ಒಂದು ತಿಂಗಳ ಹಿಂದೆ ಪ್ರಾರಂಭಿಸಲಾಯಿತು. ಇದು ಡೈಮೆನ್ಸಿಟಿ 1200 ಪ್ರೊಸೆಸರ್‌ಗೆ ಅಪ್‌ಗ್ರೇಡ್ ಆಗಿದ್ದು ಅದು ಹಲವಾರು ಮಧ್ಯಮ ಶ್ರೇಣಿಯ ಫೋನ್‌ಗಳಿಗೆ ಶಕ್ತಿ ನೀಡುತ್ತದೆ. 

ಇದನ್ನೂ ಓದಿ: ನಥಿಂಗ್ ಫೋನ್ (1) ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ: ಸುಳಿವು ನೀಡಿದ ಸಂಸ್ಥಾಪಕ ಕಾರ್ಲ್ ಪೀ?

ಇದು 6.43-ಇಂಚಿನ OLED ಡಿಸ್ಪ್ಲೇ ಜೊತೆಗೆ FullHD ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿರಬಹುದು. ಈ ಫೋನ್ 80W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರಬಹುದು ಮತ್ತು ಸ್ಲೈಟ್ಲಿ ಡ್ರಂಕ್, ಕ್ಲಿಯರ್ ಸ್ಕೈ ಬ್ಲೂ ಮತ್ತು ನೈಟ್ ಟೂರ್ ಕಪ್ಪು ಬಣ್ಣಗಳಲ್ಲಿ ಬರಬಹುದು.

Latest Videos
Follow Us:
Download App:
  • android
  • ios