Oppo K10 5G ಮತ್ತು ಪ್ರೋ ಸ್ಮಾರ್ಟ್‌ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳು?

*ಚೀನಾ ಮಾರುಕಟ್ಟೆಗೆ ಮತ್ತೆ ಎರಡು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಒಪ್ಪೋ
*ಒಪ್ಪೋ ಕೆ10 5ಜಿ ಮತ್ತು ಒಪ್ಪೋ ಕೆ10 5ಜಿ ಪ್ರೋ ಬಿಡುಗಡೆಯಾದ ಫೋನ್‌ಗಳು
*ಈ ಎರಡೂ ಫೋನ್‌ಗಳು ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ, ಸೌಲಭ್ಯಗಳನ್ನು ಹೊಂದಿವೆ.

Oppo K10 5G and Pro smartphones launched in China and check details

ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿರುವ ಒಪ್ಪೋ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಚೀನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಪ್ಪೋ ಕೆ10 5ಜಿ (Oppo K10 5G) ಮತ್ತು ಒಪ್ಪೋ ಕೆ10 ಪ್ರೋ 5ಜಿ (Oppo K10 Pro 5G) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಎರಡೂ ಫೋನು ಸಾಕಷ್ಟು ಗಮನಾರ್ಹ ಹಾಗೂ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿವೆ. ಡೈಮಂಡ್ ವಿಸಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್, ಹೈಪರ್ ಬೂಸ್ಟ ಫುಲ್ ಲಿಂಕ್ ಗೇಮ್ ಫ್ರೇಮ್ ಸ್ಟೇಬಿಲಿಷನ್ ಟೆಕ್ನಾಲಜಿ ಸೇರಿದಂತೆ ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯನ್ನು ಈ ಫೋನುಗಳಲ್ಲಿ ಕಾಣಬಹುದಾಗಿದೆ. ಜತೆಗೆ, ಪ್ರೊ ರೂಪಾಂತರವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ನಿಂದ ಚಾಲಿತವಾಗಿದ್ದರೆ, ವೆನಿಲ್ಲಾ ಮಾದರಿಯು  ಮೀಡಿಯಾ ಟೆಕ್ ಡೈಮೆನ್ಸಿಟಿ 8000-ಮ್ಯಾಕ್ಸ್ ಚಿಪ್‌ಸೆಟ್ ಹೊಂದಿದೆ. ಈ ಎರಡೂ ಫೋನ್‌ಗಳು 5,000mAh ಬ್ಯಾಟರಿಗಳಿವೆ. ಒಪ್ಪೋ ಕೆ10 5ಜಿ ಸ್ಮಾರ್ಟ್ ಫೋನ್ ಬೆಲೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 23,400 ರೂ.ನಿಂದ 29,200 ರೂ.ವರೆಗೂ ಇದೆ. ಅದೇ ರೀತಿ ಒಪ್ಪೋ ಕೆ10 ಪ್ರೋ 5ಜಿ ಸ್ಮಾರ್ಟ್‌ಫೋನ್ ಬೆಲೆ 29,200ರಿಂದ ಆರಂಭವಾಗಿ 37,500 ರೂ.ವರೆಗೂ ಇರಲಿದೆ. ಈ ಎರಡೂ  ಭಾರತೀಯ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಮೇ 11ರಿಂದ ಆಂಡ್ರಾಯ್ಡ್ ಫೋನ್‌ಗಳಲ್ಲಿ Call Recording ಇರಲ್ವಾ?

ಹೇಗಿದೆ ಒಪ್ಪೋ ಕೆ10 5ಜಿ?
ಒಪ್ಪೋ ಕೆ10 5ಜಿ ಸ್ಮಾರ್ಟ್‌ಫೋನ್ ಸಾಕಷ್ಟು ಅತ್ಯಾಧುನಿಕ ಫೀಚರ್ಸ್, ಸೌಲಭ್ಯಗಳನ್ನುಹೊಂದಿವೆ. ಎಂದಿನಂತೆ ಈ ಫೋನ್ ಕೂಡ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಈ ಫೋನ್ ಆಂಡ್ರಾಯ್ಡ್ 12 ಬೇಸ್ಡ್ ಕಲರ್ಒಎಸ್ 12.1 ಸ್ಕಿನ್‌ ಒಎಸ್ ಮೂಲಕ ಚಾಲನೆಗೊಳಗಾಗುತ್ತದೆ. ಈ  ಫೋನು 120Hz ವೇರಿಯಬಲ್ ರಿಫ್ರೆಶ್ ದರದೊಂದಿಗೆ 6.59-ಇಂಚಿನ ಪೂರ್ಣ-HD+ (1,080x2,412 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8000-ಮ್ಯಾಕ್ಸ್ SoC ಯಿಂದ ಚಾಲಿತವಾಗಿದ್ದು, 12 GB ವರೆಗೆ LPDDR5 RAM ನೊಂದಿಗೆ ಜೋಡಿಸಲಾಗಿದೆ. ಆಪ್ಟಿಮೈಸ್ಡ್ ಗೇಮಿಂಗ್‌ಗಾಗಿ ಹೈಪರ್‌ಬೂಸ್ಟ್ ಫುಲ್ ಲಿಂಕ್ ಗೇಮ್ ಫ್ರೇಮ್ ಸ್ಟೆಬಿಲೈಸೇಶನ್ ಟೆಕ್ನಾಲಜಿ ಮತ್ತು ಡೈಮಂಡ್ ವಿಸಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಇನ್ನೂ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಈ ಪೈಕಿ ಮೊದಲನೆಯ  ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನುಳಿದ ಎರಡು ಕ್ಯಾಮೆರಾಗಳು 8 ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಅದೇ ರೀತಿ, ಫೋನ್ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಕಂಪನಿಯು 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಿದೆ. 

Oppo K10 5G 256GB ವರೆಗೆ ಅಂತರ್ಗತ UFS 3.1 ಸ್ಟೋರೇಜ್ ನೀಡುತ್ತದೆ. ಅದನ್ನು ವಿಸ್ತರಿಸಲಾಗುವುದಿಲ್ಲ. ಸ್ಮಾರ್ಟ್‌ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6, 5G, 4G LTE, ಬ್ಲೂಟೂತ್ v5.3, NFC, ಮತ್ತು GPS/ A-GPS, USB ಟೈಪ್-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. 67W ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ನೋಡಬಹುದಾಗಿದೆ. 

Apple iPhone 11 ಹಂತ ಹಂತವಾಗಿ ಸ್ಥಗಿತ, ಏನು ಕಾರಣ?

ಅದೇ ರೀತಿಯಲ್ಲಿ ಒಪ್ಪೋ ಕೆ10 ಪ್ರೋ 5ಜಿ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಫೋನ್ ಕೂಡ ಡುಯಲ್ ಸಿಮ್‌ಗೆ ಬೆಂಬಲ ನೀಡುತ್ತದೆ. ಈ ಸ್ಮಾರ್ಟ್‌ಫೋನ್ 120Hz ವೇರಿಯಬಲ್ ರಿಫ್ರೆಶ್ ರೇಟ್‌ನೊಂದಿಗೆ 6.62-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್‌ಗಳು) AMOLED E4 ಡಿಸ್‌ಪ್ಲೇ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಯಿಂದ ಚಾಲಿತವಾಗಿದ್ದು, 12GB ವರೆಗೆ LPDDR5 RAM ನೊಂದಿಗೆ ಜೋಡಿಸಲಾಗಿದೆ.

Latest Videos
Follow Us:
Download App:
  • android
  • ios