ನವದೆಹಲಿ(ಸೆ.07):  ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡ ಬಳಿಕ ಭಾರತದ ವ್ಯವಹಾರಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಮೊಬೈಲ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಕಳದ ವಾರ ನವದೆಹಲಿ ಒಪ್ಪೊ  F17 ಹಾಗೂ Oppo F17 Pro ಮೊಬೈಲ್ ಬಿಡಗಡೆಯಾಗಿದೆ. ಇದೀಗ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಆನ್‌ಲೈನ್ ಮೂಲಕ ನೂತನ ಫೋನ್ ಖರೀದಿಸುವ ಅವಕಾಶ ನೀಡಲಾಗಿದೆ.

Google ಉದ್ಯೋಗಿಗಳಿಗೆ ಇನ್ಮುಂದೆ 4 ದಿನ ಕೆಲಸ, 3 ದಿನ ರಜಾ! 

Oppo F17 Pro ಸ್ಮಾರ್ಟ್‌ಫೋನ್‌ನಲ್ಲಿ ಒಂದು ವೇರಿಯೆಂಟ್ ಲಭ್ಯವಿದೆ. ಇದರ ಬೆಲೆ 22,990 ರೂಪಾಯಿ. ಮ್ಯಾಜಿಕ್ ಬ್ಲಾಕ್, ಮ್ಯಾಜಿಕ್ ಬ್ಲೂ ಹಾಗೂ ಮೆಟಾಲಿಕ್ ವೈಟ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. Oppo F17 Pro ಮೊಬೈಲ್ ಫೋನ್‌ಗೆ 1,500 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರ ಜೊತಗೆ ಇತರ ಕೆಲ ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ.

ಪಬ್‌ಜಿ ಅಕ್ಷಯ್‌ ಸಡ್ಡು: ಫೌ-ಜಿ ಆ್ಯಪ್‌ ಅಭಿವೃದ್ಧಿ!.

164 ಗ್ರಾಂ ತೂಕ ಹೊಂದಿದ್ದು, ಬಳಕೆಗೆ ಸುಲಭವಾಗಿದೆ. 6.43 ಇಂಚಿನ ಫುಲ್ HD+ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ.  P95 ಪ್ರೊಸೆಸರ್, 8GB RAM ಹಾಗೂ 128 GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಒಪ್ಪೋ F17 Pro ಆಂಡ್ರಾಯ್ಡ್ 11 ಅಪ್‌ಡೇಟ್ ಪಡೆದ ಮೊದಲ ಫೋನ್ ಆಗಿದೆ. 

48 ಮೆಗಾಪಿಕ್ಸಲ್ ಕ್ವಾಡ್ ಕ್ಯಾಮಾರ ಹಾಗೂ ಪ್ರೈಮರಿ ಸೆನ್ಸಾರ್, 9 ಮೆಗಾಪಿಕ್ಸಲ್ ವೈಡ್ ಆ್ಯಂಗಲ್ ಲೆನ್ಸ್, 2 ಮೆಗಾಪಿಕ್ಸಲ್ ಮೋನೊ ಕ್ಯಾಮರ ಹಾಗೂ 2 ಮೆಗಾಪಿಕ್ಸಲ್ ಮೊನೊ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ ಡ್ಯುಯೆಲ್ ಕ್ಯಾಮರಾ ಲಭ್ಯವಿದೆ. 16 ಮೆಗಾಪಿಕ್ಸಲ್ ಪ್ರೈಮರಿ ಹಾಗೂ 2 ಮೆಗಾಪಿಕ್ಸಲ್ ಡೆಪ್ತ್ ಸೆನ್ಸಾರ್ ಲಭ್ಯವಿದೆ. ಒಪ್ಪೊ F17 ಮಾಹಿತಿಯನ್ನು ಒಪ್ಪೋ ಬಹಿರಂಗ ಪಡಿಸಿಲ್ಲ.