ಹಲವು ಉತ್ತಮ ಫಿಚರ್ಸ್‌ಗಳೊಂದಿಗೆ Oppo A ಸರಣಿಯ 2 ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?

ಓಪ್ಪೋ A76 ಮತ್ತು A96, ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ, ಇವು ಹೆಚ್ಚಿನ ರಿಫ್ರೆಶ್ ದರದೊಂದಿಗೆ ದೊಡ್ಡ ಡಿಸ್ಪ್ಲೇಗಳನ್ನು ಹೊಂದಿದ್ದು, ಡ್ಯುಯಲ್ ಕ್ಯಾಮೆರಾಗಳು ಜತೆಗೆ 20,000 ರೂ. ಅಡಿಯಲ್ಲಿ ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿವೆ. 

Oppo A76 A96 price in India Rs17499 Rs19999 with dual camera specifications mnj

Tech Desk: ಓಪ್ಪೋ ಭಾರತದಲ್ಲಿ ಎರಡು ಹೊಸ A-ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ, A76 ಮತ್ತು A96. ಓಪ್ಪೋ ಮಾರ್ಚ್ 23 ರಂದು ಭಾರತದಲ್ಲಿ ಹೊಚ್ಚಹೊಸ K-ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ ಒಂದು ದಿನದ ನಂತರ ಹೊಸ ಫೋನ್‌ಗಳ ಬಿಡುಗಡೆ ಅಮಡಿದೆ. ಎರಡೂ ಫೊನ್‌ಗಳಲ್ಲಿ Oppo A76  ಅಗ್ಗದ ಫೋನಾಗಿದ್ದು, 90Hz ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಒಳಗೊಂಡಿದೆ . Oppo A96, ಮತ್ತೊಂದೆಡೆ, AMOLED ಡಿಸ್ಪ್ಲೇ ಮತ್ತು 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

Oppo A76 ಸ್ಮಾರ್ಟ್‌ಫೋನನ್ನು  ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಹೊಸ ಸ್ಮಾರ್ಟ್‌ಫೋನ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ Oppo A74ನ ಉತ್ತರಾಧಿಕಾರಿಯಾಗಿದೆ. ಭಾರತದಲ್ಲಿ Oppo A76, Oppo A96 ಬೆಲೆ: Oppo A76 ಒಂದೇ ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ, ಇದರ ಬೆಲೆ 17,499 ರೂ. ಅದೇ ರೀತಿ, A96 ಕೇವಲ ಒಂದು ಶೇಖರಣಾ ರೂಪಾಂತರವನ್ನು ಹೊಂದಿದೆ, ಇದರ ಬೆಲೆ 19,999 ರೂ. ಎರಡೂ ಹೊಸ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳು ಮತ್ತು ರಿಟೇಲ್ ಅಂಗಡಿಗಳಲ್ಲಿ ಮಾರಾಟವಾಗಲಿವೆ.

ಇದನ್ನೂ ಓದಿ: 4,500mAh ಬ್ಯಾಟರಿಯೊಂದಿಗೆ Redmi K40S ಲಾಂಚ್: ಏನೆಲ್ಲಾ ವಿಶೇಷತೆಗಳಿವೆ?

Oppo A76 ಫೀಚರ್ಸ್:‌ Oppo A76 4G ಫೋನ್ ಆಗಿದ್ದು ಇದು Qualcomm Snapdragon 680 ಪ್ರೊಸೆಸರನ್ನು ಬಳಸುತ್ತದೆ, ಇದನ್ನು ನೀವು Redmi 10 ಮತ್ತು Realme 9i ನಂತಹ ಫೋನ್‌ಗಳಲ್ಲಿಯೂ ಕಾಣಬಹುದು. ಫೋನ್‌ನಲ್ಲಿ 6GB RAM ಮತ್ತು 128GB ಸಂಗ್ರಹವಿದೆ, ಆದರೆ ಅದು ನಿಮಗೆ ಸಾಕಾಗದೇ ಇದ್ದರೆ ನೀವು ಮೈಕ್ರೋ SD ಕಾರ್ಡನ್ನು ಸೇರಿಸಬಹುದು. 

ಫೋನ್ 6.56-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಡಿಸ್ಪ್ಲೇ ಮೇಲ್ಭಾಗದಲ್ಲಿ ಪಂಚ್-ಹೋಲನ್ನು  ಹೊಂದಿದೆ, ಅದರೊಳಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದೆ, ಇದು 13-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಒಳಗೊಂಡಿದೆ.  ಫೋನ್ Android 11-ಆಧಾರಿತ ColorOS 11.1  ರನ್ ಮಾಡುತ್ತದೆ ಮತ್ತು 33W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಬಳಸುತ್ತದೆ.

ಇದನ್ನೂ ಓದಿRedmi K50 Pro, Redmi K50 ಲಿಕ್ವಿಡ್ ಕೂಲಿಂಗ್, ಟ್ರಿಪಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಲಾಂಚ್!‌

Oppo A96 ಫೀಚರ್ಸ್: ‌ Oppo A76 ಗಿಂತ ದುಬಾರಿಯಾದ A96 Full-HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದೊಂದಿಗೆ 6.59-ಇಂಚಿನ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇಯಲ್ಲಿ ಪಾಂಡ ಗ್ಲಾಸ್ (Panda Glass protection) ರಕ್ಷಣೆಯೂ ಇದೆ. ಈ ಫೋನ್ ಕೂಡ ಮೇಲಿನ ಎಡ ಮೂಲೆಯಲ್ಲಿ ಪಂಚ್-ಹೋಲನ್ನು ಹೊಂದಿದೆ ಮತ್ತು ಅದರೊಳಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಹಿಂಭಾಗದಲ್ಲಿ, Oppo A96 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಜತೆಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ. ಫೋನ್ 5000mAh ಬ್ಯಾಟರಿಯನ್ನು ಸಹ ಹೊಂದಿದೆ ಅದು 33W ವರೆಗೆ ಚಾರ್ಜ್ ಆಗುತ್ತದೆ. ಈ ಫೋನ್ 8.5mm ದಪ್ಪ ಮತ್ತು 191 ಗ್ರಾಂ ತೂಗುತ್ತದೆ.

Latest Videos
Follow Us:
Download App:
  • android
  • ios