OnePlus Nord CE 2 Lite ₹20,000 ಒಳಗಿನ ಮೊದಲ ನಾರ್ಡ್ ಫೋನ್? ಬಿಡುಗಡೆ ಯಾವಾಗ?

ಓನ್‌ಪ್ಲಸ್ ಈಗಾಗಲೇ  ನಾರ್ಡ್ ಸರಣಿಯಲ್ಲಿ ಹಲವಾರು ಉತ್ಪನ್ನಗಳನ್ನು ನೀಡುತ್ತದೆ, ಆದರೆ ಮುಂಬರುವ Nord CE 2 Lite ರೂ 20,000 ಬೆಲೆ ವರ್ಗದ ಅಡಿಯಲ್ಲಿ ಬಿಡುಗಡೆಯಾಗುವು ಮೊದಲ ಸ್ಮಾರ್ಟ್‌ಫೋನಾಗಿರಬಹುದು. ಮುಂಬರುವ ಒನ್‌ಪ್ಲಸ್‌ ಸ್ಮಾರ್ಟ್‌ಫೋನಿನ ಡಿಟೇಲ್ಸ್‌ ಇಲ್ಲಿದೆ

OnePlus Nord CE 2 Lite expected price under Rs 20000 specifications features mnj

OnePlus Nord CE 2 Lite ಭಾರತದಲ್ಲಿ ಏಪ್ರಿಲ್ 28 ರಂದು  OnePlus 10R ಮತ್ತು Nord Buds ಜೊತೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.  ಗ್ರಾಹಕರಲ್ಲಿ OnePlus 10R ಬಿಡುಗಡೆ ಬಗ್ಗೆ ಸಾಕಷ್ಟೂ ಉತ್ಸಾಹವಿದ್ದರೂ, Nord CE 2 Lite ಈವೆಂಟ್‌ನ ಪ್ರಮುಖ ಆಕರ್ಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೊಸ ಸ್ಮಾರ್ಟ್‌ಫೋನ್‌ ಬಜೆಟ್‌ ವಿಭಾಗದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಇದು ಹೆಚ್ಚು ಜನರ ಗಮನಸೆಳೆಯುವ ಸಾಧ್ಯತೆ ಇದೆ. ಅಲ್ಲದೇ  ಮುಂಬರುವ OnePlus Nord CE 2 ಬೆಲೆ ರೂ 20,000 ಕ್ಕಿಂತ ಕಡಿಮೆ ಇರಲಿದೆ ಎಂದು ವರದಿಗಳು ಸೂಚಿಸಿವೆ. 

ಕಳೆದ ಹಲವು ವರ್ಷಗಳಲ್ಲಿ, ಒನ್‌ಪ್ಲಸ್ ಭಾರತದಲ್ಲಿ ಪ್ರೀಮಿಯಂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಹೊಂದಿದೆ ಆದರೆ 2020 ರಲ್ಲಿ ನಾರ್ಡ್ ಸರಣಿಯ ಪರಿಚಯದೊಂದಿಗೆ ಒನ್‌ಪ್ಲಸ್ ಬಜೆಟ್‌ ಶ್ರೇಣಿಯತ್ತ ಕೂಡ ಗಮನ ಹರಿಸಿದೆ. ಓನ್‌ಪ್ಲಸ್ ಈಗಾಗಲೇ  ನಾರ್ಡ್ ಸರಣಿಯಲ್ಲಿ ಹಲವಾರು ಉತ್ಪನ್ನಗಳನ್ನು ನೀಡುತ್ತದೆ, ಆದರೆ ಮುಂಬರುವ Nord CE 2 Lite ರೂ 20,000 ಬೆಲೆ ವರ್ಗದ ಅಡಿಯಲ್ಲಿ ಬಿಡುಗಡೆಯಾಗುವ ಮೊದಲ ಸ್ಮಾರ್ಟ್‌ಫೋನಾಗಿರಬಹುದು. 

ಇದನ್ನೂ ಓದಿ: Oppo Find N ರೀತಿಯಲ್ಲೇ ಇದೆಯಾ OnePlus ಫೋಲ್ಡಬಲ್ ಫೋನ್?

ಕೈಗೆಟುಕುವ ಬೆಲೆ: ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ಕೈಗೆಟುಕುವ ಫೋನನ್ನು ಘೋಷಿಸಿ ಬಹಳ ಸಮಯವಾಗಿದೆ. ಕೊನೆಯದು 2017 ರಲ್ಲಿ OnePlus One ಆಗಿತ್ತು. ಹೆಸರೇ ಸೂಚಿಸುವಂತೆ, Nord CE 2 Lite Nord CE 2ನ ಟೋನ್ಡ್ ಆವೃತ್ತಿಯಾಗಿರಬಹುದು, ಇದು ಪ್ರಸ್ತುತ ರೂ 23,999 ರ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 

ಮುಂಬರುವ ನಾರ್ಡ್ ಫೋನ್ 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಮೂಲ ಮಾದರಿಗೆ 19,999 ರೂ.ಗಳಿಂದ ಪ್ರಾರಂಭವಾಗಲಿದೆ ಎಂದು ವರದಿಗಳು ಸೂಚಿಸುತ್ತವೆ. ಟಾಪ್-ಎಂಡ್ ಮಾಡೆಲ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ಸ್ಮಾರ್ಟ್‌ಫೋನ್‌ ಫೀಚರ್ಸ್:  OnePlus Nord CE 2 Lite ಕುರಿತು ಕಂಪನಿಯು ಹೆಚ್ಚಿನ ವಿವರಗಳನ್ನು ದೃಢೀಕರಿಸದಿದ್ದರೂ, ವದಂತಿಗಳು ಈಗಾಗಲೇ ಹಲವು ಮಾಹಿತಿಗಳನ್ನಿ ಬಹಿರಂಗಗೊಳಿಸಿವೆ. ಬೆಲೆಯನ್ನು ಪರಿಗಣಿಸಿ, ಫೋನ್ Samsung Galaxy M33 5G, Redmi Note 11 Pro Plus, Realme 9 5G ನಂತಹ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: OnePlus 10 Proಗೆ ಟಕ್ಕರ್:‌ ಏಪ್ರಿಲ್‌ 27ಕ್ಕೆ Xiaomi 12 Pro ಭಾರತದಲ್ಲಿ ಲಾಂಚ್!‌

OnePlus Nord CE 2 Lite 120Hz ರಿಫ್ರೆಶ್ ರೇಟ್ ಮತ್ತು ಪಂಚ್-ಹೋಲ್ ಕಟೌಟ್‌ನೊಂದಿಗೆ 6.58-ಇಂಚಿನ Full-HD+ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಹಬಹುದು. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್‌ನಿಂದ 8GB RAM ಮತ್ತು 128GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಚಾಲಿತಗೊಳ್ಳುವ ನಿರೀಕ್ಷೆಯಿದೆ, ಜೊತೆಗೆ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಸಂಗ್ರಹಣೆಗೆ ಬೆಂಬಲವಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಫೋನ್ Android 11-ಆಧಾರಿತ OxygenOS ಕಸ್ಟಮ್ ಸ್ಕಿನ್‌ನಲ್ಲಿ ಔಟ್‌ ಆಫ್‌ ದಿ ಬಾಕ್ಸ್‌ ರನ್ ಆಗುತ್ತದೆ.

ಕ್ಯಾಮೆರಾ ಯಾವುದು?: ಕ್ಯಾಮೆರಾಗಳ ವಿಷಯದಲ್ಲಿ, OnePlus Nord CE 2 Lite ಹಿಂಭಾಗದ ಪ್ಯಾನೆಲ್‌ನಲ್ಲಿ 64-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಮೊನೊ ಲೆನ್ಸ್‌ಗಳನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮುಂಭಾಗದಲ್ಲಿ, ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.‌

ಹೆಚ್ಚುವರಿಯಾಗಿ ಒನ್‌ಪ್ಲಸ್ OnePlus 10R ಮತ್ತು ನಾರ್ಡ್ ಸರಣಿಯ ಅಡಿಯಲ್ಲಿ ನಾರ್ಡ್ ಬಡ್ಸ್ ಎಂದು ಕರೆಯಲ್ಪಡುವ ಮೊದಲ ಆಡಿಯೊ ಉತ್ಪನ್ನವನ್ನು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾದ ಈವೆಂಟ್‌ನಲ್ಲಿ ಪ್ರಕಟಿಸಲಿದೆ. 

Latest Videos
Follow Us:
Download App:
  • android
  • ios