ಭಾರತದಲ್ಲಿ OnePlus Nord 2T 5G ಲಾಂಚ್, ಏನೆಲ್ಲ ಫೀಚರ್ಸ್ ಇವೆ?
*ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಒನ್‌ಪ್ಲಸ್ ನಾರ್ಡ್ 2ಟಿ 5ಜಿ ಬಿಡುಗಡೆಗೆ ಸಾಧ್ಯ
*ಭಾರತದಲ್ಲಿ ಬಿಡುಗಡೆ ದಿನಾಂಕ ಮಾಹಿತಿ ಇಲ್ಲ, ಆದರೆ, ಸದ್ಯದಲ್ಲೇ ಬಿಡುಗಡೆ ಖಂಡಿತ
*ಈ ಫೋನ್ ತನ್ನ ವಿಶಿಷ್ಟ ಫೀಚರ್‌ಗಳಿಂದ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.
ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಒನ್ ಪ್ಲಸ್ ನಾರ್ಡ್ 2ಟಿ 5ಜಿ (OnePlus Nord 2T 5G) ಸ್ಮಾರ್ಟ್‌ಫೋನ್, ಕೊನೆಗೂ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲು ಸಜ್ಜಾಗಿದೆ. ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ಕುತೂಹಲಗಳು, ಸುದ್ದಿಗಳು ಹರಿದಾಡಿದ್ದವು. ಹಾಗಾಗಿ ಬಳಕೆದಾರಲ್ಲೂ ಒನ್‌ಪ್ಲಸ್ ನಾರ್ಡ್ 2ಟಿ 5ಜಿ ಸ್ಮಾರ್ಟ್‌ಫೋನ್ ಕುತೂಹಲ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಈಗ OnePlus Nord 2T 5G ಮೈಕ್ರೋಸೈಟ್‌ಗಳು ಈಗ Amazon ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಒನ್‌ಪ್ಲಸ್ ನಾರ್ಡ್ 2ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗೆಗಿನ ನಿಖರವಾದ ದಿನಾಂಕ ಯಾವುದು ಎಂದು ಗೊತ್ತಾಗಿಲ್ಲ. ಆದರೆ, ಖಂಡಿತವಾಗಿಯೂ ಈ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವುದು ಪಕ್ಕಾ ಎಂಬ ಸಂಗತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಲಾಗಿರುವ ಟೀಸರ್‌ಗಳು (Teasser) ಹೇಳುತ್ತಿವೆ. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಎಷ್ಟಿರಬಹುದು ಎಂಬ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ.
ಈ ಹೊಸ ತನ್ನ ವಿಶಿಷ್ಟ ಫೀಚರ್‌ಗಳಿಂದಾಗಿಯೂ ಗಮನ ಸೆಳೆಯುತ್ತಿದೆ. OnePlus Nord 2T 5G 4,500 mAh ಬ್ಯಾಟರಿಯನ್ನು ಹೊಂದಿದ್ದು ಅದು 80W Super VOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 50 MP ಸೋನಿ IMX766 ಸೆನ್ಸರ್, ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC, ಮತ್ತು OxygenOS 12.1.1. ಆಪರೇಟಿಂಗ್ ಸಾಫ್ಟ್ ವೇರ್ ಹೊಂದಿದೆ ಎಂದು ಹೇಳಲಾಗುತ್ತಿದೆ.
OnePlus Nord 2T 5G 6.43 - ಇಂಚಿನ FullHD + AMOLED ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್‌ಫೋನ್‌ನ ಪ್ರೊಸೆಸರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಎಂದು ತಿಳಿದುಬಂದಿದೆ. ಇದು 6 GB RAM ಮತ್ತು 256 GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಊಹಿಸಲಾಗುತ್ತಿದೆ. ಆದರೆ, ಯಾವುದೇ ನಿಖರವಾದ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ.
Apple Watchನಲ್ಲಿ YouTube ವೀಡಿಯೊ ವೀಕ್ಷಿಸಲು ಹೀಗ್ ಮಾಡಿ
ಟೀಸರ್ ಪ್ರಕಾರ ಸ್ಮಾರ್ಟ್‌ಫೋನ್ ಹಸಿರು (Green) ಮತ್ತು ಕಪ್ಪು (Black) ಬಣ್ಣಗಳಲ್ಲಿ ಲಭ್ಯವಿರುತ್ತದೆ. OnePlus ಈಗಾಗಲೇ 50 MP ಸೋನಿ IMX766 ಮುಖ್ಯ ಸಂವೇದಕವನ್ನು ಒಳಗೊಂಡಂತೆ ಸ್ಮಾರ್ಟ್‌ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ. ಈ ಹಿಂದಿನ ವರದಿಗಳ ಪ್ರಕಾರ, ಈ ಹಿಂಬದಿಯ ಕ್ಯಾಮರಾ ಕಾನ್ಫಿಗರೇಶನ್ 8 MP ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಏಕವರ್ಣದ ಸಂವೇದಕವನ್ನು ಸಹ ಸಂಯೋಜಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32 MP ಪಂಚ್ ಹೋಲ್ ಕ್ಯಾಮೆರಾ ಅಳವಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 4k ವೀಡಿಯೊವನ್ನು ಸೆರೆಹಿಡಿಯಬಹುದು ಮತ್ತು ಸ್ಟಿಲ್ ಶಾಟ್‌ಗಳಿಗಾಗಿ HDR ಮತ್ತು ವಿಹಂಗಮ ಆಯ್ಕೆಗಳನ್ನು ನೀಡುತ್ತದೆ. ಅಂಡರ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ ಮತ್ತು ದಿಕ್ಸೂಚಿ ಸಂವೇದಕಗಳಲ್ಲಿ ಸೇರಿವೆ.
Nothing Phone 1 ಖರೀದಿಸಬೇಕಾ? ಸ್ಪೇಷಲ್ ಆಮಂತ್ರಣ ಬೇಕು!
ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ವೇಗವು ಅದರ ಪ್ರಮುಖ ಮಾರಾಟದ ಅಂಶಗಳಲ್ಲಿ ಒಂದಾಗಿದೆ. OnePlus Nord 2T 5G 80W SuperVOOC ಕ್ಷಿಪ್ರ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,500 mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ. OnePlus 10 Pro 5G, ನಿರ್ದಿಷ್ಟವಾಗಿ, 80W ಕ್ಷಿಪ್ರ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಸ್ಮಾರ್ಟ್‌ಫೋನ್ ಭಾರತದಲ್ಲಿ ಜುಲೈ 1 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಜುಲೈ 5 ರಂದು ಮಾರಾಟವಾಗಲಿದೆ. ಆದರೆ, ಇದರ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲ.