Asianet Suvarna News Asianet Suvarna News

ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಹೆಚ್ಚಿದ ಕುತೂಹಲ

ಕಳೆದ ಅಕ್ಟೋಬರ್ ಒನ್‌ಪ್ಲಸ್ 8ಟಿ ಬಿಡುಗಡೆಯಾದ ಬೆನ್ನಲ್ಲೇ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಬಗ್ಗೆ ಕುತೂಹಲ ಇತ್ತು. ಆಗಾಗ ಈ ಫೋನ್‌ ಬಗ್ಗೆ ಮಾಹಿತಿ ಸೋರಿಕೆಯಾಗುತ್ತಲೇ ಇರುತ್ತದೆ. ಇದೀಗ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಈ ಸ್ಮಾರ್ಟ್‌ಫೋನ್ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರಲಿದೆ. ಜೊತೆಗೆ ಕಂಪನಿ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

OnePlus 9 smartphone specifications have leaked
Author
Bengaluru, First Published Feb 22, 2021, 4:04 PM IST

ಒನ್‌ಪ್ಲಸ್‌ನ ನಿರೀಕ್ಷಿತ ಮತ್ತೊಂದು ಸ್ಮಾರ್ಟ್‌ಫೋನ್ ಒನ್‌ಪ್ಲಸ್ 9 ಬಗ್ಗೆ ಒಂದಿಷ್ಟು ಮಾಹಿತಿಗಳು ಸೋರಿಕೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈ ಫೋನಿನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮಾಹಿತಿಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಒನ್‌ಪ್ಲಸ್ 9 ಪ್ರೋ, ಒನ್‌ಪ್ಲಸ್ 9 ಲೈಟ್ ಜೊತೆಗೆ ಈ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಕೂಡ ಈ ಮಾರ್ಚ್ ತಿಂಗಳ ಮಧ್ಯೆದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಎನ್ನಲಾಗುತ್ತಿದೆ. ಈಗಾಗಲೇ ಒನ್‌ಪ್ಲಸ್ ಸ್ಮಾರ್ಟ್‌ವಾಚ್‌ ಕೂಡ ಇದೇ ಸಮಯದಲ್ಲಿ ಬಿಡುಗಡೆಯಾಗಬಹುದು ಎಂಬ ಸುದ್ದಿ ಕೂಡ ಇದೆ.

ಪಾಸ್‌ಪೋರ್ಟ್‌ಗೆ ಅಗತ್ಯ ದಾಖಲೆ ನೀಡಲು ಡಿಜಿಲಾಕರ್ ಸಾಕು!

TechDroider ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿ ಪ್ರಕಾರ, ಫೋನ್‌ನಲ್ಲಿ ಚಾಲನೆಯಲ್ಲಿರುವ ಎಐಡಿಎ 64 ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್‌ಗಳ ಮೂಲಕ ಒನ್‌ಪ್ಲಸ್ 9ನ ಪ್ರಮುಖ ವಿಶೇಷತೆಗಳು ಬಹಿರಂಗವಾಗಿವೆ. ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಬಗ್ಗೆ ಈ ಹಿಂದೆಯೂ ಹಲವು ಮಾಹಿತಿ ಸೋರಿಕೆಯಾಗಿದ್ದವು. ಈಗ ಸೋರಿಕೆಯಾಗಿರುವ ಮಾಹಿತಿಯು ಈ ಹಿಂದಿನ ಮಾಹಿತಿಯನ್ನು ದೃಢಿಕರಿಸುತ್ತದೆ.

ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್‌ನಲ್ಲಿ 6.55 ಇಂಚು ಅಮೋಎಲ್‌ಇಡಿ ಸ್ಕ್ರೀನ್ ಇರಲಿದೆ ಮತ್ತು ಇದು 120Hz ರಿಫ್ರೆಶ್‌ ರೇಟ್‌ಗೆ ಸಪೋರ್ಟ್ ಮಾಡುತ್ತದೆ ಮತ್ತು ಇದು ಒನ್‌ಪ್ಲಸ್ 8ಟಿ ರೀತಿಯಲ್ಲಿ ಪ್ಯಾನೆಲ್‌ ಹೊಂದಿರಲಿದೆ.

OnePlus 9 smartphone specifications have leaked

ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಇರಲಿದೆ. ಜೊತೆಗೆ ಈ ಫೋನ್‌ನಲ್ಲಿ ಪ್ರೈಮರಿ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಇರಲಿದ್ದು, ಫೋನ್‌ನ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಇರಲಿದೆ ಎಂದು ಹೇಳಲಾಗುತ್ತಿದೆ.

4,500ಎಎಂಎಚ್ ಬ್ಯಾಟರಿ ಇರಲಿದ್ದು, 65 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೂಡ ಫೋನ್‌ ಬಾಕ್ಸ್‌ನಲ್ಲಿ ಇರಲಿದೆ. ಅದರರ್ಥ ಈ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜರ್ ಸೌಲಭ್ಯವನ್ನು ಹೊಂದಿರುವುದಿಲ್ಲ. ಒನ್‌ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್‌ಗೆ ಬಹುಶಃ ಈ ಸೌಲಭ್ಯ ಸಿಗಬಹುದು ಎನ್ನಲಾಗುತ್ತಿದೆ. ಈ ಹಿಂದೆ ಸೋರಿಕೆಯಾದ ಮಾಹಿತಿಗಳು ಕೂಡ ಇದೇ ವಿಷಯವನ್ನು ಹೇಳಿದ್ದವು.

ರೆಡ್‌ಮಿ ನೋಟ್ 10 ಸೀರೀಸ್ ಹೊಸ ಫೋನ್‌ಗಳು ಶೀಘ್ರ ಮಾರುಕಟ್ಟೆಗೆ, ಏನೇನಿವೆ ವಿಶೇಷತೆ?

ಇದೇ ವೇಳೆ, ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್‌ ಗಳು ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಆಧರಿತವಾಗಿರಲಿವೆ. ಹಾಗೆಯೇ ಒನ್‌ಪ್ಲಸ್ 9  ಲೈಟ್‌ ಸ್ಮಾರ್ಟ್ ಫೋನ್‌ನಲ್ಲಿ ಮಾತ್ರ ಸ್ನ್ಯಾಪ್ ಡ್ರಾಗನ್ 870 ಪ್ರೊಸೆಸರ್ ಇರಬಹುದು ಎಂಬ ಸುದ್ದಿ ಇದೆ. ಆದರೆ, ಕಂಪನಿ ಈವರೆಗೂ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಇವೆಲ್ಲವೂ ಸೋರಿಕೆಯಾದ ಮಾಹಿತಿಗಳಷ್ಟೇ.

ಫುಲ್ ಎಚ್‌ಡಿ ಪ್ಲಸ್ 6.55 ಇಂಚ್ ಡಿಸ್‌ಪ್ಲೇ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್‌ನಲ್ಲಿ ಇದ್ದರೆ, ಒನ್‍ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕೊಂಚ ದೊಡ್ಡದಿರಲಿದೆ. ಅಂದರೆ ಈ ಫೋನ್‌ ಡಿಸ್‌ಪ್ಲೇ 6.7 ಇಂಚ್ ಇರಲಿದ್ದು, ಕ್ಯೂಎಚ್‌ಡಿ ಪ್ಲಸ್ ಸ್ಕ್ರೀನ್ ಇರಲಿದೆ. ಈ ಎರಡೂ ಫೋನ್‌ಗಳು ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ಕಟ್‌ಔಟ್ ಹೊಂದಿರಬಹುದಾಗಿದೆ. ಇನ್ನು ಒನ್‌ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಈ ಮೂರು ಕ್ಯಾಮೆರಾಗಳ ಪೈಕಿ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಜೊತೆಗೆ 20 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಮತ್ತು 12 ಮೆಗಾ ಪಿಕ್ಸೆಲ್ ಟೆಲೆಫೋಟೋ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ.

ಕಂಪನಿ ಕಳೆದ ಅಕ್ಟೋಬರ್‌ನಲ್ಲಿ ಒನ್‌ಪ್ಲಸ್ 8ಟಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಇದಾದ ನಂತರ ಒನ್‌ಪ್ಲಸ್ 9 ಸೀರೀಸ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಬಳಕೆದಾರರಲ್ಲಿ ಕುತೂಹಲ ಮೂಡಿದೆ. ಆಗಾಗ ಸೋರಿಕೆಯಾಗಿರುವ ಮಾಹಿತಿಯು ಈ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಬಹುದು.

ಸರ್ಕಾರಿ ನಿರ್ಮಿತ ‘ಸಂದೇಶ್’ ಆಪ್ ಲಾಂಚ್, ಇದು ದೇಶಿ ವಾಟ್ಸಾಪ್!

Follow Us:
Download App:
  • android
  • ios