Asianet Suvarna News Asianet Suvarna News

ಸರ್ಕಾರಿ ನಿರ್ಮಿತ ‘ಸಂದೇಶ್’ ಆಪ್ ಲಾಂಚ್, ಇದು ದೇಶಿ ವಾಟ್ಸಾಪ್!

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಬಳಕೆಗೆ ಮಾತ್ರವೇ ಸೀಮಿತವಾಗಿದ್ದ ಸಂದೇಶ್ ಆಪ್ ಅನ್ನು ಇದೀಗ ಸಾರ್ವಜನಿಕ ಬಳಕೆಗೂ ಬಿಡುಗಡೆ ಮಾಡಲಾಗಿದೆ. ಈ ಆಪ್ ಅನ್ನು ನಿಮ್ಮ ಫೋನ್ ನಂಬರ್ ಇಲ್ಲವೇ ಸರ್ಕಾರಿ ಇ ಮೇಲ್ ಐಡಿಯ ಮೂಲಕ ನೋಂದಣಿ ಮಾಡಿಕೊಂಡು ಬಳಸಿಕೊಳ್ಳಬಹುದಾಗಿದೆ. ಮೊನ್ನೆಯಷ್ಟೇ ಕೂ ಆಪ್ ದೇಶಿ ಟ್ವಿಟರ್ ಎಂಬ ಖ್ಯಾತಿ ಪಡೆದ ಬೆನ್ನಲ್ಲೇ ಇದೀಗ ದೇಶಿ ವಾಟ್ಸಾಪ್ ಸಂದೇಶ್ ಹವಾ ಶುರುವಾಗಿದೆ.

NIC launches WhatsApp like app SANDES for all
Author
Bengaluru, First Published Feb 19, 2021, 1:26 PM IST

ದೈತ್ಯ ಮೈಕ್ರೊಬ್ಲಾಗಿಂಗ್ ತಾಣ ಟ್ವಿಟರ್ ಬದಲಿಗೆ ದೇಶೀಯ ಕೂ ಬಳಸುವಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಕ್ರಿಕೆಟ್ ತಾರೆಗಳು, ಸಿನಿಮಾ ತಾರೆಗಳು ಕರೆಕೊಟ್ಟ ಬೆನ್ನಲ್ಲೇ, ಇದೀಗ ಭಾರತ ಸರ್ಕಾರವೇ ವಾಟ್ಸಾಪ್‌ಗೆ ಪರ್ಯಾಯವಾದ ಮೆಸೆಜಿಂಗ್ ಆಪ್ ಸಂದೇಶ್ ಆಪ್‌ಗೆ ಚಾಲನೆ ನೀಡಿದೆ. ಸಂದೇಶ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ.

ದಿ ನ್ಯಾಷನಲ್ ಇನ್ಫಾರ್ಮೇಟಿಕ್ ಸೆಂಟರ್(National Informatics Centre) ಈ ಆಪ್ ಅಭಿವೃದ್ಧಿಪಡಿಸಿದೆ. ನೀವು ಇದನ್ನು ದೇಸಿ ವಾಟ್ಸಾಪ್ ಎಂದು ಬೇಕಾದರೂ ಕರೆಯಬಹುದು. ವಾಟ್ಸಾಪ್ ರೀತಿಯಲ್ಲಿ ಬಳೆಕದಾರರು ತಮ್ಮ ಮೊಬೈಲ್ ನಂಬರ್ ಅಥವಾ ಇ ಮೇಲ್ ಐಡಿ ಬಳಸಿಕೊಂಡ ಎಲ್ಲ ರೀತಿಯ ಸಂವಹನಕ್ಕೆ ಈ ದೇಸಿ ವಾಟ್ಸಾಪ್ ಬಳಸಿಕೊಳ್ಳಬಹುದು.

ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?

ದೇಸಿ ವಾಟ್ಸಾಪ್ ಸಂದೇಶ ಆಪ್ ಅಭಿವೃದ್ಧಿಗೂ ಒಂದು ಹಿನ್ನೆಲೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಲಾಯಿತು. ಈ ವೇಳೆ, ಮನೆಯಿಂದ ಕೆಲಸ ಮಾಡುತ್ತಿರುವ ತನ್ನ ನೌಕರರ ಮಧ್ಯೆ ಸಂವಹನಕ್ಕೆ ವೇದಿಕೆಯನ್ನು ರೂಪಿಸುವ ಅಗತ್ಯವನ್ನು ಸರ್ಕಾರ ಕಂಡುಕೊಂಡಿತು.

ಜೂತೆಗೆ ಸುರಕ್ಷಿತವಾದ ಸಂಹವನದ ಅಗತ್ಯವೂ ಇತ್ತು. ಸರ್ಕಾರಿ ಉದ್ಯೋಗಿಗಳಿಗಾಗಿಯೇ ಮೀಸಲಾಗಿರುವ ಕಮ್ಯುನಿಕೇಷನ್ ನೆಟ್ವರ್ಕ್‌ವೊಂದನ್ನು ರೂಪಿಸುವ ಐಡಿಯಾ ಕಳೆದ ನಾಲ್ಕು ವರ್ಷಗಳಿಂದಲೂ ಇತ್ತು ಮತ್ತು ಲಾಕ್‌ಡೌನ್ ವೇಳೆ ಈ ಐಡಿಯಾವನ್ನು ಅನುಷ್ಠಾನಗೊಳಿಸುವ ಅನಿವಾರ್ಯತೆ ಸೃಷ್ಟಿಯಾಯಿತು.

NIC launches WhatsApp like app SANDES for all

ಕಳೆದ ಆಗಸ್ಟ್‌ನಲ್ಲಿ ಎನ್ಐಸಿ ಸಂದೇಶ ಆಪ್‌ನ ಮೊದಲನೇ ಆವೃತ್ತಿಯನ್ನು ಬಿಡುಗಡೆ ಮಾಡಿತು. ಈ ಆಪ್ ಅನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೌಕರರು ಬಳಸಬಹುದು ಎಂದು ಸೂಚಿಸಲಾಗಿತ್ತು. ಈ ಸಂದೇಶ ಆಪ್‌ಗೆ ಮೊದಲು ಅಂತರ್ ಮತ್ತು ಅಂತಾ-ಸಾಂಸ್ಥಿಕ ಸಂಹವನ(intra and inter-organisation communication) ಎಂದು ಕರೆಯಲಾಗುತ್ತಿತ್ತು.

ಈಗ ಸಂದೇಶ ಎಂಬ ಹೆಸರಲ್ಲಿ ಸಾರ್ವಜನಿಕ ಬಳಕೆಗೂ ಸರ್ಕಾರ ಬಿಡುಗಡೆ ಮಾಡಿದೆ. ಆ ಮೂಲಕ ದೇಶಿಯ ಸಂಹವನ ವ್ಯವಸ್ಥೆಯೊಂದನ್ನು ಸರ್ಕಾರ ಹುಟ್ಟು ಹಾಕಿದಂತಾಗಿದೆ.

ಈಗಾಗಲೇ ಹೇಳಿರುವಂತೆ ವಾಟ್ಸಾಪ್‌ಗೆ ಪರ್ಯಾಯವಾದ ಈ ಸಂದೇಶ್ ಆಪ್ ಅನ್ನು ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಲಾಂಚ್ ಮಾಡಿದೆ. ಈಗಾಗಲೇ ಚಾಲ್ತಿಯಲ್ಲಿದ್ದ ಜಿಐಎಂಎಸ್(Government Instant Messaging System) ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಿ ಈ ಆಪ್ ರೂಪಿಸಲಾಗಿದೆ.

249 ರೂ. Vi ಪ್ಲ್ಯಾನ್‌: ರಾತ್ರಿ 12ರಿಂದ ಬೆಳಗಿನ 6ರ ತನಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿ

ನೀವು ಮೊದಲು ಸಂದೇಶ್ ಆಪ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಎಪಿಕೆ ಫೈಲ್‌ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಲು ಇದು ದೊರೆಯುತ್ತದೆ.  ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಮೇಲ್ಪಟ್ಟ ಒಎಸ್ ಆಧರಿತ ಆಂಡ್ರಾಯ್ಡ್ ಸಾಧನಗಳಲ್ಲಿ ಎಪಿಕೆ ಫೈಲ್ ಮೂಲಕ ಬಳಸಿಕೊಳ್ಳಬಹುದು. ಐಒಎಸ್ ಬಳಕೆದಾರರಿಗೆ ಆಪ್ ಸ್ಟೋರ್‌ನಲ್ಲಿ ಸಂದೇಶ್ ಆಪ್ ದೊರೆಯುತ್ತದೆ ಮತ್ತು ಐಫೋನ್, ಐಪ್ಯಾಡ್ ಮತ್ತು ಐಪೋಡ್‌ಗಳಿಗೆ ಇದು ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ ಬಳಕೆದಾರರೂ ಈ ಆಪ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಆಪ್ ಡೌನ್‌ಲೋಡ್ ಆದ ಬಳಿಕ ನಿಮ್ಮ ಮೊಬೈಲ್ ನಂಬರ್ ಅಥವಾ ಇ ಮೇಲ್ ಐಡಿ ಮೂಲಕ ಸೈನ್ ಅಪ್ ಮಾಡಿಕೊಳ್ಳಬೇಕಾಗುತ್ತದೆ. ಆಗ ಆಪ್ ನಿಮಗೆ 6 ಅಂಕಿಯ ಒಟಿಪಿ ಕಳುಹಿಸುತ್ತಿದೆ. ಅದನ್ನು ನಮೂದಿಸಬೇಕಾಗುತ್ತದೆ. ಸರ್ಕಾರಿ ಐಡಿಗಳಿಗೆ ಮಾತ್ರವೇ ಇ ಮೇಲ್‌ ಐಡಿಗಳು ಈ ನಿರ್ಬಂಧಿತವಾಗಿದ್ದು, ಬೇರೆ ಯಾವುದೇ ಡೊಮೈನ್ ಮೇಲ್ ಐಡಿಯನ್ನು ಇದು ಸ್ವೀಕರಿಸುವುದಿಲ್ಲ. ಹಾಗಾಗಿ ನೀವು ಫೋನ್ ನಂಬರ್ ಬಳಸಿಕೊಂಡು ಬಳಸಬಹುದು.

ಈ ಸರ್ಕಾರಿ ಮೆಸೆಜಿಂಗ್ ಆಪ್ ಸಂದೇಶ್ ಹಾಗೂ ವಾಟ್ಸಾಪ್ ಮಧ್ಯೆ ಸಾಕಷ್ಟು ಹೋಲಿಕೆಗಳಿದ್ದರೂ ಒಂದಿಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಸಂದೇಶ್ ಆಪ್‌ನಲ್ಲಿ ನೀವು ಸರ್ಕಾರಿ ಐಡಿ ಇರುವ ಮೇಲ್ ಐಡಿಯನ್ನು ಬಳಸಿಕೊಂಡು ಸೈನ್ ಅಪ್ ಮಾಡಿಕೊಳ್ಳಬೇಕಾಗುತ್ತದೆ. ಇದು ಪ್ರಮುಖ ವ್ಯತ್ಯಾಸವಾಗಿದೆ. ವಾಟ್ಸಾಪ್‌ನಲ್ಲಿ ಇದರ ಅಗತ್ಯವಿಲ್ಲ. ಸರ್ಕಾರಿ ನೌಕರರ ಅಧಿಕೃತ ಖಾತೆಗಳಿಗಾಗಿ ಸಪೋರ್ಟ್ ಮಾಡುತ್ತದೆ. ವಾಟ್ಸಾಪ್‌ನಲ್ಲಿ ಯಾವುದೇ ವ್ಯಕ್ತಿಯ ಖಾತೆಗೆ ದೃಢೀಕರಣ ಬೇಕಿಲ್ಲ ಈ ರೀತಿಯ ಕೆಲವು ಗಮನಾರ್ಹ ವ್ಯತ್ಯಾಸಗಳನ್ನು ನಾವು ಸಂದೇಶ್ ಮತ್ತು ವಾಟ್ಸಾಪ್ ಮಧ್ಯೆ ಕಾಣಬಹುದಾಗಿದೆ.

ಲೆನೆವೋ ಟ್ಯಾಬ್ ಪಿ11 ಪ್ರೊ ಟ್ಯಾಬ್ಲೆಟ್ ಬಿಡುಗಡೆ, ಭರಪೂರ ಫೀಚರ್‌ಗಳು

Follow Us:
Download App:
  • android
  • ios