Asianet Suvarna News Asianet Suvarna News

ಬಹುನೀರಿಕ್ಷಿತ OnePlus 10 Pro ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು?

OnePlus ಈ ವರ್ಷದ ಆರಂಭದಲ್ಲಿ OnePlus 10 Pro ಮತ್ತು OnePlus 10 ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿತು.

OnePlus 10 Pro Launching in India Soon official teaser reveals key specifications mnj
Author
Bengaluru, First Published Mar 21, 2022, 11:40 AM IST | Last Updated Mar 21, 2022, 11:50 AM IST

Tech Desk: ಬಹುನೀರಿಕ್ಷಿತ   OnePlus 10 Pro ಬಗ್ಗೆ  ಕಂಪನಿಯು ಟ್ವಿಟರ್‌ನಲ್ಲಿ ಕಿರು ಟೀಸರ್‌ಗಳ ಮೂಲಕ ಮಾಹಿತಿ ನೀಡುತ್ತಿದ್ದೂ ಭಾರತದಲ್ಲಿ OnePlus 10 Pro ಬಿಡುಗಡೆ ಶೀಘ್ರದಲ್ಲೇ ನಡೆಯಲಿದೆ. ಕಂಪನಿಯು ಟೀಸರ್‌ಗಳ ಸರಣಿಯ ಮೂಲಕ OnePlus 10 Pro ಸುತ್ತಲೂ ಹೈಪ್  ನಿರ್ಮಿಸುತ್ತಿದೆ, ಇದು ಮುಂಬರುವ ಫೋನ್‌ನ ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. OnePlus ಈ ವರ್ಷದ ಆರಂಭದಲ್ಲಿ OnePlus 10 Pro ಮತ್ತು OnePlus 10 ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿತು. OnePlus 10 Pro ನ ಭಾರತೀಯ ಬಿಡುಗಡೆ ಶಿಘ್ರದಲ್ಲೇ ನಡೆಯಲಿದೆ ಎಂದು ಕಂಪನಿಯ ವೆಬ್‌ಸೈಟ್ ತಿಳಿಸಿದೆ. ನಿರ್ದಿಷ್ಟ ದಿನಾಂಕವು ಸ್ಪಷ್ಟವಾಗಿಲ್ಲದಿದ್ದರೂ, OnePlus ಈಗಾಗಲೇ ಫೋನ್ ಮಾಹಿತ ಬಹಿರಂಗಪಡಿಸಲು ಪ್ರಾರಂಭಿಸಿದೆ. 

ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಫೋನ್‌ ಬಿಡುಗಡೆಯಾಗಬಹುದು ಎಂದು ವರದಿಗಳು ತಿಳಿಸಿವೆ. ಈ ವರದಿಗಳು ನಿಗವಾಗಿದ್ದಲ್ಲಿ OnePlus 10 Pro ನ ಬಿಡುಗಡೆಯು Realme GT 2 Pro ನ ಭಾರತೀಯ ಬಿಡುಗಡೆ ಜೊತೆಜೊತೆಯಲ್ಲೇ ಆಗುವ ಸಾಧ್ಯತೆಯಿದೆ. 

ಒನ್‌ಪ್ಲಸ್ ಇಂಡಿಯಾದ ಟ್ವೀಟರ್ ಖಾತೆಯಿಂದ ಹಂಚಿಕೊಂಡ ಅನೇಕ ಟೀಸರ್‌ಗಳಲ್ಲಿ OnePlus 10 Pro ಕಳೆದ ವರ್ಷದಿಂದ ಐಕಾನಿಕ್ ಕ್ಯಾಮೆರಾ ತಯಾರಕರೊಂದಿಗೆ ಕಂಪನಿಯ ಪಾಲುದಾರಿಕೆಯನ್ನು ಅನುಸರಿಸಿ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾಗಳೊಂದಿಗೆ ಬರುತ್ತದೆ ಎಂದು ಹೇಳುತ್ತದೆ. 

ಇದನ್ನೂ ಓದಿOnePlus Nord CE 2 5G: 4,500mAh ಬ್ಯಾಟರಿ, 64MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆ!

OnePlus 9 ಸರಣಿಯು Hasselblad-ಟ್ಯೂನ್ಡ್ ಕ್ಯಾಮೆರಾಗಳನ್ನು ತಂದ ಮೊದಲನೆ ಫೋನಾಗಿದ್ದು ಇದು OnePlus ನ ಹಿಂದಿನ-ಪೀಳಿಗೆಯ ಫೋನ್‌ಗಳ ಕ್ಯಾಮೆರಾಗಳಿಗಿಂತ ದೊಡ್ಡ ಅಪ್‌ಗ್ರೇಡ್ ಆಗಿತ್ತು. OnePlus 10 Pro ಭಾರತದಲ್ಲಿ ವಲ್ಕಾನಿಕ್ ಬ್ಲ್ಯಾಕ್ ಮತ್ತು ಎಮರಾಲ್ಡ್ ಫಾರೆಸ್ಟ್ ಬಣ್ಣಗಳಲ್ಲಿ ಬರಲಿದೆ ಎಂದು ಟೀಸರ್ ದೃಢಪಡಿಸುತ್ತದೆ.‌

OnePlus 10 Pro ಭಾರತದಲ್ಲಿ Samsung Galaxy S22 Ultra, iQOO 9 Pro ಮತ್ತು iPhone 13 ಗಳ ಜತೆಗೆ ಸ್ಪರ್ಧಿಸಲಿದೆ.  ಫ್ಲ್ಯಾಗ್‌ಶಿಪ್ Snapdragon 8 Gen 1 ಪ್ರೊಸೆಸರನ್ನು ಹೊಂದಿದ್ದು, ಇದು ಇಲ್ಲಿಯವರೆಗೆ OnePlus ನ ಅತ್ಯಂತ ಶಕ್ತಿಶಾಲಿ ಫೋನಾಗಿದೆ. OnePlus 10 Pro ಈಗಾಗಲೇ ಚೀನಾದಲ್ಲಿ ಲಭ್ಯವಿರುವುದರಿಂದ, ಅದರ ವಿಶೇಷಣಗಳು ಮಾತ್ರವಲ್ಲದೆ ಅದರ ಬೆಲೆಯೂ ಬಹಿರಂಗಗೊಡಿದೆ. 

ಚೀನಾದಲ್ಲಿ, OnePlus 10 Pro CNY 4,699 ರಿಂದ ಪ್ರಾರಂಭವಾಗುತ್ತದೆ, ಇದು ಸರಿಸುಮಾರು 56,200 ರೂ. ಕಳೆದ ವರ್ಷ, ಒನ್‌ಪ್ಲಸ್ OnePlus 9 Pro ಅನ್ನು ರೂ 64,999 ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ನಾವು ಟ್ರೆಂಡ್‌ ಪ್ರಕಾರ  OnePlus 10 Pro ನ ಬೆಲೆ ಸುಮಾರು 60,000 ರೂ ಇರಬಹುದು ಎಂದು ನಿರೀಕ್ಷಿಸಬಹುದು

ಇದನ್ನೂ ಓದಿOneplus 9RT 5G Review: ನಂಬರ್‌ ಒಂಬತ್ತರಲ್ಲಿ ಇದೇ ಕೊನೆಯ ಸ್ಮಾರ್ಟ್‌ಫೋನ್!

OnePlus 10 Pro ಫೀಚರ್ಸ್:‌ OnePlus 10 Pro ಫ್ಲ್ಯಾಗ್‌ಶಿಪ್ ಫೋನಾಗಿದ್ದು  ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. Snapdragon 8 Gen 1 ಪ್ರೊಸೆಸರ್ ಜತೆಗೆ OnePlus 10 Pro 2022 ರಲ್ಲಿ ನೀವು ಖರೀದಿಸಬಹುದಾದ ವೇಗದ ಫೋನ್‌ಗಳಲ್ಲಿ ಒಂದಾಗಿದೆ, ಆದರೆ ವಿನ್ಯಾಸವು ಹೊಸ ಮತ್ತು ಹಳೆಯ ವಸ್ತುಗಳ ಮಿಶ್ರಣವಾಗಿದೆ. ಉದಾಹರಣೆಗೆ, OnePlus 10 Pro ನಲ್ಲಿನ ಕ್ಯಾಮೆರಾ ಬಂಪ್ OnePlus 9 Pro ಗಿಂತ ಭಿನ್ನವಾಗಿದೆ, ಆದರೆ, ಅದೇ ಸಮಯದಲ್ಲಿ, ಸ್ಯಾಂಡ್‌ಸ್ಟೋನ್ ಫಿನಿಶ್ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ OnePlus One ನಂತೆಯೇ ಇದೆ.

6.7-ಇಂಚಿನ LTPO 2.0 AMOLED ಡಿಸ್ಪ್ಲೇ ಜೊತೆಗೆ 2K ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು. 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಇದೆ. OnePlus 10 Pro ಚೀನಾದಲ್ಲಿ Android 12.1-ಆಧಾರಿತ ColorOS 12.1 ರನ್‌ ಮಾಡುತ್ತದೆ, ಆದರೆ ಭಾರತೀಯ ರೂಪಾಂತರವು OxygenOS 12 ನೊಂದಿಗೆ ಬರುವ ಸಾಧ್ಯತೆಯಿದೆ.

OnePlus 10 Pro ನಲ್ಲಿನ ಮೂರು ಕ್ಯಾಮೆರಾಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 48-ಮೆಗಾಪಿಕ್ಸೆಲ್ ಅಗಲದ ಕ್ಯಾಮೆರಾ, 150-ಡಿಗ್ರಿ ಕ್ಷೇತ್ರದ ವೀಕ್ಷಣೆಯೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 3.3x ಆಪ್ಟಿಕಲ್ ಜೂಮ್‌ನೊಂದಿಗೆ 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿವೆ. 

ಸೆಲ್ಫಿಗಳಿಗಾಗಿ, ಡಿಸ್ಪ್ಲೇನಲ್ಲಿ ಪಂಚ್-ಹೋಲ್ ಒಳಗೆ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. OnePlus ತನ್ನ ಪಾಲುದಾರಿಕೆಯನ್ನು Hasselblad ಜೊತೆಗೆ ಮುಂದುವರಿಸಿದೆ OnePlus 10 Pro ವೈಶಿಷ್ಟ್ಯಗಳಾದ Hasselblad ಕಲರ್ ಕ್ಯಾಲಿಬ್ರೇಶನ್, ಇದು ಬಳಕೆದಾರರನ್ನು ಆಕರ್ಷಿಸುವ ಸಾಧ್ಯತೆಯಿದೆ. OnePlus 10 Pro 5000mAh ಬ್ಯಾಟರಿಯೊಂದಿಗೆ 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೇಗದ ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ.

Latest Videos
Follow Us:
Download App:
  • android
  • ios