ಭಾರತದಲ್ಲಿ ಬಿಡುಗಡೆಗೂ ಮುನ್ನವೇ OnePlus 10 Pro ಬೆಲೆ, ಫೀಚರ್ಸ್ ಬಹಿರಂಗ
ಹೊಸ ಸೋರಿಕೆಯ ಪ್ರಕಾರ ಭಾರತದಲ್ಲಿ OnePlus 10 Pro ಬೆಲೆ OnePlus 9 Pro ಗಿಂತ ಸ್ವಲ್ಪ ಹೆಚ್ಚಾಗಿದೆ.
OnePlus 10 Pro Launch: ಭಾರತದಲ್ಲಿ OnePlus 10 Pro ಬೆಲೆ ಬಿಡುಗಡೆಗೂ ಕೆಲವು ದಿನಗಳ ಮೊದಲೇ ಸೋರಿಕೆಯಾಗಿದೆ. ಫ್ಲ್ಯಾಗ್‌ಶಿಪ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರ್ಚ್ 31 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. OnePlus 10 Pro ಭಾರತದ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಪ್ರಕಟಿಸಲಾಗುವುದು. ಆದರೆ ಇತ್ತೀಚೆಗಿನ ವರದಿಗಳಲ್ಲಿ OnePlus 10 Pro ಬೆಲೆ ಹಾಗೂ ವಿಶೇಷತೆಗಳು ಬಹಿರಂಗಗೊಂಡಿವೆ. ಹೊಸ ವರದಿಯು OnePlus 9 Pro ಗಿಂತ OnePlus 10 Pro ಸ್ವಲ್ಪ ಹೆಚ್ಚು ದುಬಾರಿಯಾಗಿದೆ ಎಂದು ಹೇಳುತ್ತದೆ.
OnePlus 10 Pro ಕಳೆದ ವರ್ಷ ಬಿಡುಗಡೆಯಾದ OnePlus 9 Proನ ಉತ್ತರಾಧಿಕಾರಿಯಾಗಿದೆ. ಮಾರ್ಚ್ 31 ರಂದು ಭಾರತ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ 7:30 PM ISTಕ್ಕೆ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಜೊತೆಗೆ, ಟೆಕ್ ದೈತ್ಯ, ಒನ್‌ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರನ್ನು ಎಲ್ಲಾ ಮೂರು ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಿದೆ.
ಇದನ್ನೂ ಓದಿ: OnePlus Tablet: OLED ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್
OnePlus 10 Pro ಲಾಂಚ್ ಈವೆಂಟ್ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಆಗಿ ನಡೆಯುತ್ತದೆ. OnePlus 10 Pro ಭಾರತದಲ್ಲಿ Samsung Galaxy S22 Ultra, iQOO 9 Pro ಮತ್ತು iPhone 13 ಗಳ ಜತೆಗೆ ಸ್ಪರ್ಧಿಸಲಿದೆ
ಭಾರತದಲ್ಲಿ OnePlus 10 Pro ಬೆಲೆ: OnePlus 10 Pro ಎರಡು ಶೇಖರಣಾ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಟಿಪ್‌ಸ್ಟರ್ ಅಭಿಷೇಕ್ ಯಾದವ್, ಮೂಲ ಮಾದರಿಯು ರೂ 66,999 ಆರಂಭಿಕ ಬೆಲೆಯೊಂದಿಗೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಈ ರೂಪಾಂತರವು 8GB RAM ಮತ್ತು 128GB ಅಥವಾ 256GB ಆಂತರಿಕ ಸಂಗ್ರಹಣೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎರಡನೇ ಮಾದರಿಯಾಗಿ 256GB ಆಂತರಿಕ ಸಂಗ್ರಹಣೆಯೊಂದಿಗೆ 12GB RAM ಆಯ್ಕೆಯನ್ನು ಕಂಪನಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಟಿಪ್‌ಸ್ಟರ್ ಪ್ರಕಾರ ಈ ರೂಪಾಂತರದ ಬೆಲೆ 71,999 ರೂ ಆಗಿರಲಿದೆ.
ಭಾರತದಲ್ಲಿ ಬಿಡುಗಡೆಯಾದ OnePlus 9 Pro ಬೆಲೆ 64,999 ಮತ್ತು 69,999 ರೂ ಆಗಿದೆ. ಸೋರಿಕೆಯಾದ ಬೆಲೆಯಲ್ಲಿನ ಏರಿಕೆಯು ಹಾರ್ಡ್‌ವೇರ್‌ನಲ್ಲಿನ ನವೀಕರಣಗಳು, ಘಟಕಗಳ ಬೆಲೆ ಏರಿಕೆ, ಅಮೆರಿಕಾ ಡಾಲರ್‌ಗೆ ವಿರುದ್ಧವಾಗಿ ಭಾರತೀಯ ರೂಪಾಯಿಯ ಮೌಲ್ಯ ಕಡಿಮೆಯಾಗಿರುವುದು ಸೇರಿದಂತೆ ಅನೇಕ ಅಂಶಗಳಿಂದಾಗಿರಬಹುದು. ಹೀಗಾಗಿ ಬೆಲೆ ಕೊಂಚ ಹೆಚ್ಚಾಗಿದೆ. ಆದಾಗ್ಯೂ ಅಧಿಕೃತ ಬೆಲೆ ಬಹಿರಂಗವಾಗುವರೆಗೂ ಈ ವರದಿಗಳು ವದಂತಿಯಾಗಿ ಉಳಿಯಲಿವೆ.
OnePlus 10 Pro ಫೀಚರ್ಸ್: OnePlus 10 Pro 6.7-ಇಂಚಿನ LTPO 2.0 AMOLED ಡಿಸ್ಪ್ಲೇ ಜೊತೆಗೆ 2K ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು ಬದಿಗಳಲ್ಲಿ ವಕ್ರವಾಗಿಲಿದೆ (Curved) ಎಂದು ವರದಿ ತಿಳಿಸಿದೆ. 32MP ಮುಂಭಾಗದ ಕ್ಯಾಮರಾಕ್ಕಾಗಿ ಡಿಸ್ಪ್ಲೇ ಮೇಲಿನ ಎಡ ಮೂಲೆಯಲ್ಲಿ ಹೋಲ್-ಪಂಚ್ ಕಟೌಟ್ ಇದೆ.
ಇದನ್ನೂ ಓದಿ: OnePlus Nord CE 2 5G: 4,500mAh ಬ್ಯಾಟರಿ, 64MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಭಾರತದಲ್ಲಿ ಬಿಡುಗಡೆ!
ಹಿಂಭಾಗದಲ್ಲಿ, ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ. OnePlus 10 Pro ಕ್ಯಾಮೆರಾ ಸೆಟಪ್ 48MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು 80W SuperVOOC ವೇಗದ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 1 SoC ನಿಂದ ಚಾಲಿತವಾಗಿದೆ. ಇದು 12GB ವರೆಗಿನ RAM ಮತ್ತು 256GB UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು Android 12-ಆಧಾರಿತ Oxygen OS 12 ರನ್ ಮಾಡುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ವೈ-ಫೈ 6, ಬ್ಲೂಟೂತ್ 5.1, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಜಿಪಿಎಸ್ ಸೇರಿದೆ.