ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿರುವ ನೋಕಿಯಾ ಇದೀಗ ವಿಶಿಷ್ಟ ಫೀಚರ್‌ ಫೋನ್ ಮೂಲಕ ಮತ್ತೆ ಮರಳಿದೆ. ನೋಕಿಯಾ 110 4ಜಿ ಫೀಚರ್‌ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜುಲೈ 24ರಿಂದ ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ಈ ಫೋನ್ ಬೆಲೆ 2,799 ರೂಪಾಯಿ ಮಾತ್ರ.

ಮೊಬೈಲ್ ಫೋನ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದ ನೋಕಿಯಾ ಇದೀಗ ಅದ್ಭುತವಾದ ಫೀಚರ್‌ ಫೋನ್‌ನೊಂದಿಗೆ ಭಾರತೀಯ ಮಾರುಕಟ್ಟೆಗೆ ಮತ್ತೆ ಲಗ್ಗೆ ಹಾಕಿದೆ. 

ನೋಕಿಯಾ ಕಂಪನಿಯು ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿರುವ ಬೇಸಿಕ್ ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಈ ಫೋನ್ ಜುಲೈ 24ರಿಂದ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಹಾಗೂ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಸಿಗಲಿದೆ.

ನಿಮ್ಮ ಬೆಡ್‌ ಪಕ್ಕ ಇರಲೇಬೇಕು ಲೆನೋವೋ ಸ್ಮಾರ್ಟ್‌ ಕ್ಲಾಕ್ 2

ಭಾರತೀಯ ಮಾರುಕಟ್ಟೆಗೆ ನೋಕಿಯೋ ಬಿಡುಗಡೆ ಮಾಡಿರುವ ಫೋನ್- ನೋಕಿಯಾ 110 4ಜಿ. ಹೌದು ಇದು ಫೀಚರ್ ಫೋನ್ ಆದರೂ ಕೂಡ 4ಜಿ ತಂತ್ರಜ್ಞಾನಕ್ಕೆ ಬೆಂಬಲಿಸಿತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ 2,799 ರೂಪಾಯಿಯಾಗಿದೆ. ಈ ಫೋನ್‌ ಸಾಕಷ್ಟು ಹೊಸ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಕಂಪನಿಯ ಯೆಲ್ಲೋ, ಅಕ್ವಾ ಮತ್ತು ಕಪ್ಪು ಬಣ್ಣಗಳಲ್ಲಿ ಈ ಫೋನ್ ಅನ್ನು ಮಾರಾಟ ಮಾಡುತ್ತಿದೆ. 

ಕ್ಲಾಸಿಕ್ ಮತ್ತು ಹೊಸತನದ ಪರಿಪೂರ್ಣ ಸಂಗಮವಾಗಿದೆ ಈ ನೋಕಿಯಾ 110 4ಜಿ ಮೊಬೈಲ್ ಫೋನ್. ಹೊಸ ವಿನ್ಯಾಸ, ಅದ್ಭುತವಾದ ವೈಶಿಷ್ಟ್ಯಗಳು ಇರುವ ಈ ಮೊಬೈಲ್ ಫೋನ್ ಅನ್ನು ನೋಕಿಯಾ ಅಭಿಮಾನಿಗಳು ಖಂಡಿತವಾಗಿಯೂ ಇಷ್ಟಪಡುತ್ತಾರೆ. ಅವರ ವಿಶ್ವಾಸವನ್ನು ಈ ಫೋನ್‌ ಎಂದಿಗೂ ಹುಸಿ ಮಾಡುವುದಿಲ್ಲ ಎಂದು ನೋಕಿಯಾ ಬ್ರ್ಯಾಂಡ್ ಒಡೆತನ ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಉಪಾಧ್ಯಕ್ಷ ಸನ್ಮೀತ್ ಸಿಂಗ್ ತಿಳಿಸಿದ್ದಾರೆ.

ಈ ಫೀಚರ್ ಫೋನ್ ಪ್ರವೇಶ ಮತ್ತು ಬಾಳಿಕೆಗೆ ಸಂಬಂಧಿಸಿದೆ. ಇದು ಬಳಕೆಯ ಸುಲಭತೆಗೆ ತಡೆರಹಿತ ಅನುಭವವನ್ನು ನೀಡುತ್ತದು ಎಂಬುದು ಸಿಂಗ್ ಅವರು ಅಭಿಪ್ರಾಯವಾಗಿದೆ. ಅದ್ಭುತ ಬಳಕೆಯ ಅನುಭವವನ್ನು ನೀಡುವ ಇತಿಹಾಸವನ್ನು ನೋಕಿಯಾ ಫೋನ್‌ಗಳು ಹೊಂದಿವೆ. ಸ್ಮಾರ್ಟ್‌ಫೋನ್ ಜಮಾನಾ ಶುರುವಾಗುವ ಮೊದಲು ನೋಕಿಯಾ ಫೋನ್‌ಗಳು ಅವುಗಳ ಬಳಕೆಯ ವಿಶಿಷ್ಟ ಅನುಭವಕ್ಕಾಗಿ ಮತ್ತು ಬಾಳಿಕೆಯ ಕಾರಣದಿಂದಾಗಿ ಹೆಚ್ಚು ಜನಪ್ರಿಯವಾಗಿದ್ದವು. ಭಾರತದಲ್ಲಂತೂ ನೋಕಿಯಾ ಫೋನ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು.

ಜೆಡ್‌ಟಿಇ ಬ್ಲೇಡ್ ವಿ30, ಬ್ಲೇಡ್ ವಿ30 ವಿಟಾ ಸ್ಮಾರ್ಟ್‌ಫೋನ್ ಬಿಡುಗಡೆ

ಈ ಫೋನ್‌ 4ಜಿ ಕನೆಕ್ಟಿವಿಟಿಗೆ ಬೆಂಬಲ ನೀಡುತ್ತದೆ. ಎಚ್‌ಡಿ ವಾಯ್ಸ್ ಕಾಲಿಂಗ್, ವೈರ್ಡ್ ಮತ್ತು ವೈರ್‌ಲೆಸ್ ಎಫ್ಎಂ ರೆಡಿಯೋ ಮತ್ತು 13 ದಿನಗಳವರೆಗೆ ಸ್ಟ್ಯಾಂಡ್‌ಬೈ ಟೈಮ್‌ ಒದಗಿಸುವ ಬ್ಯಾಟರಿ ಸೇರಿದಂತೆ ಹಲವು ಅದ್ಭುತ ಫೀಚರ್‌ಗಳನ್ನು ಒಳಗೊಂಡಿದೆ ಈ ನೋಕಿಯಾ ಫೀಚರ್ ಫೋನ್. ಇವುಗಳ ಜತೆಗೆ 3.5 ಎಂಎಂ ಆಡಿಯೋ ಜಾಕ್, 3 ಇನ್ 1 ಸ್ಪೀಕರ್, ವಿಡಿಯೋ ಮತ್ತು ಎಂಪಿ3 ಪ್ಲೇಯರ್ ಸೌಲಭ್ಯಗಳಿದ್ದು, ಬಳಕೆದಾರರು ತಮ್ಮ ಸ್ಟೋರೇಜ್ ಸಾಮರ್ಥ್ಯವನ್ನು 32 ಜಿಬಿವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ.

ಈ ನೋಕಿಯಾ 110 4ಜಿ ಫೀಚರ್ ಫೋನ್‌ನ ಹಿಂಬದಿಯಲ್ಲಿ ಕಂಪನಿಯು 0.8 ಮೆಗಾ ಪಿಕ್ಸೆಲ್ ಕ್ಯೂವಿಜಿಎ ಕ್ಯಾಮೆರಾ ನೀಡಿದೆ. ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಕ್ಯಾಮೆರಾ ಫೋನ್ ಇದಾಗಿದೆ. ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ನೋಕಿಯಾ 110 4ಜಿ ಫೋನ್ ಅದು ತನ್ನ ಅಕ್ಸೆಸ್‌ಬಿಲಿಟಿ ಗುಣದಿಂದಾಗಿಯೇ ಹೆಚ್ಚು ಗಮನ ಸೆಳೆಯುತ್ತದೆ. 

ಅಲ್ಲದೆ, ಹೊಸ ರೀಡ್‌ ಔಟ್ ವೈಶಿಷ್ಟ್ಯದೊಂದಿಗೆ, ಪಠ್ಯವನ್ನು ಭಾಷಣವಾಗಿ ಪರಿವರ್ತಿಸಿ ಇದರಿಂದ ನಿಮ್ಮ ಕಣ್ಣುಗಳಿಗೆ ಪರದೆಯಿಂದ ವಿರಾಮ ನೀಡಲು ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಫೋನ್ ಓದಿ ಹೇಳಬಹುದು. ನೋಕಿಯಾ 110 4 ಜಿ ಉತ್ತಮವಾದ ನಿರ್ಮಾಣ ಗುಣಮಟ್ಟದೊಂದಿಗೆ ಬರುತ್ತದೆ, ಪ್ರೀಮಿಯಂ ಲುಕ್‌ಗಾಗಿ ಗಟ್ಟಿಮುಟ್ಟಾದ ಮತ್ತು ಸುಂದರವಾದ ಸ್ಪರ್ಶ ವಿನ್ಯಾಸದ ಹಿಂಭಾಗದ ಕವರ್ ಅನ್ನು ಒಳಗೊಂಡಿರುತ್ತದೆ ಮತ್ತು ಶಕ್ತಿಯುತವಾಗಿರುವ ಮತ್ತು ತೆಗೆಯಬಹುದಾದ 1020mAh ಬ್ಯಾಟರಿಯನ್ನು ಪ್ಯಾಕ್ ಈ ನೋಕಿಯಾ ಫೋನ್ ಹೊಂದಿದೆ.

ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್