ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್
ಚೀನಾ ಮೂಲದ ಮತ್ತೊಂದು ಕಂಪನಿ ಟಿಸಿಎಲ್ ಭಾರತೀಯ ಮಾರುಕಟ್ಟೆಗೆ ನಾಲ್ಕು ಟ್ಯಾಬ್ಲೆಟ್‌ಗಳೊಂದಿಗೆ ಲಗ್ಗೆ ಹಾಕಿದೆ. ಟಿಸಿಎಲ್ 10 ಟ್ಯಾಬ್ 4ಜಿ, ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್(ವೈಫೈ), ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಮತ್ತು ಟಿಸಿಎಲ್ ಟ್ಯಾಬ್ 10ಎಸ್(ವೈಫೈ) ಟ್ಯಾಬ್ಲೆಟ್‌ಗಳು ಲಾಂಚ್ ಮಾಡಲಾಗಿದೆ. ಈ ಟ್ಯಾಬ್ಲೆಟ್‌ಗಳು ತೀರಾ ದುಬಾರಿಯೇನೂ ಆಗಿಲ್ಲ, ಬಳಕೆದಾರರಿಗೆ ಕೈಗೆಟುಕುವ ದರಲ್ಲೇ ಇವೆ.
ಇತ್ತೀಚಿನ ದಿನಗಳಲ್ಲಿ ಟ್ಯಾಬ್ಲೆಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿಯೇ ಹಲವು ಕಂಪನಿಗಳು ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿರುವ ಟಿಸಿಎಲ್ ಟೆಕ್ನಾಲಜಿ ಏಕಕಾಲಕ್ಕೆ ಭಾರತೀಯ ಮಾರುಕಟ್ಟೆಗೆ ನಾಲ್ಕು ಟ್ಯಾಬ್ಲೆಟ್‌ಗಳನ್ನು ಬಿಡುಗುಡೆ ಮಾಡಿದೆ.
ಟಿಸಿಎಲ್ 10 ಟ್ಯಾಬ್ 4ಜಿ, ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್(ವೈಫೈ), ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಮತ್ತು ಟಿಸಿಎಲ್ ಟ್ಯಾಬ್ 10ಎಸ್(ವೈಫೈ) ಟ್ಯಾಬ್ಲೆಟ್‌ಗಳನ್ನು ಕಂಪನಿ ಬಿಡುಗಡೆ ಮಾಡುತ್ತಿದೆ. ಈ ನಾಲ್ಕು ಟ್ಯಾಬ್ಲೆಟ್‌ಗಳ ಪೈಕಿ ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್ 4ಜಿ ಕಳೆದ ಸೆಪ್ಟೆಂಬರ್ ಐಎಫ್‌ಎ 2020ಯಲ್ಲಿ ಲಾಂಚ್ ಆಗಿತ್ತು. ಟಿಸಿಎಲ್ ಟ್ಯಾಬ್10ಎಸ್ ಜನವರಿಯಲ್ಲಿ ನಡೆದ ಸಿಇಎಸ್‌ನಲ್ಲಿ ಅನಾವರಣಗೊಂಡಿತ್ತು. ಈ ಟ್ಯಾಬ್‌ಗಳ ಜತೆಗೆ ಭಾರತೀಯ ಮಾರುಕಟ್ಟೆಗೆ ಇದೀಗ ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಟ್ಯಾಬ್ಲೆಟ್ ಕೂಡ ಬಿಡುಗಡೆಯಾಗುತ್ತಿದೆ.
ಈ ಟ್ಯಾಬ್ಲೆಟ್‌ಗಳ ಬೆಲೆ ಕೂಡ ತೀರಾ ತುಟ್ಟಿಯಾಗೇನೂ ಇಲ್ಲ. ಟಿಸಿಎಲ್ ಟ್ಯಾಬ್ 10ಎಸ್(ವೈಫೈ) ಬೆಲೆ 15,999 ರೂಪಾಯಿಯಾದರೆ, ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಬೆಲೆ 16,999 ರೂಪಾಯಿ. ಇನ್ನು ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್ 4ಜಿ ಬೆಲೆ 20,999 ರೂಪಾಯಿ ಇದ್ದರೆ, ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್ 4ಜಿ(ವೈಫೈ) ಬೆಲೆ 18,999 ರೂಪಾಯಿಯಾಗಿದೆ. ಈ ಬೆಲೆಗಳನ್ನು ಗಮನಿಸಿದರೆ ತೀರಾ ದುಬಾರಿಯೇನೂ ಅನ್ನಿಸುವುದಿಲ್ಲ. ಹಾಗಾಗಿ, ಇವು ಗ್ರಾಹಕರಿಗ ಕೈಗೆಟುಕುವ ದರದಲ್ಲಿ ಎನ್ನಬಹುದು.
ಆಪಲ್ ಹಿಂದಿಕ್ಕಿರುವ ಶಿಯೋಮಿ, ಈಗ ಜಗತ್ತಿನ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ
ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್ 4ಜಿ ಮತ್ತು ಇದರದ್ದೇ ಆದ ವೈಫೈ ಆವೃತ್ತಿಗಳ ವಿಶೇಷತೆಗಳಲ್ಲಿ ಅಂಥ ವ್ಯತ್ಯಾಸಗಳೇನೂ ಇಲ್ಲ. ಎರಡೂ ಟ್ಯಾಬ್ಲೆಟ್‌ಗಳು ಒಂದೇ ತೆರನಾದ ವಿಶೇಷತೆಗಳನ್ನು ಹೊಂದಿವೆ.ಆಂಡ್ರಾಯ್ಡ್ 10 ಓಎಸ್ ಆಧರಿತವಾಗಿರುವ ಈ ಎರಡೂ ಟ್ಯಾಬ್‌ಗಳು, 10.36 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿವೆ.
ಟಿಸಿಎಲ್ ಮ್ಯಾಕ್ಸ್ ಟ್ಯಾಬ್‌ನಲ್ಲಿ ಅಕ್ಟಾ ಕೋರ್ ಪ್ರೊಸೆಸರ್ ಇದ್ದು, ಇದು 4ಜಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ. ಬಳಕೆದಾರರಿಗೆ ಹೆಚ್ಚಿನ ಸ್ಟೋರೇಜ್ ಬೇಕು ಎಂದಾದರೆ, ಕಂಪನಿಯು ಈ ಟ್ಯಾಬ್ಲೆಟ್‌ಗೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಒದಗಿಸಿದೆ. ಆ ಮೂಲಕ ಬಳಕೆದಾರರು ತಮ್ಮ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್ 4ಜಿ ಮತ್ತು ವೈಫೈ ಮಾಡೆಲ್‌ಗಳು 13 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿವೆ. ಇನ್ನು ಫ್ರಂಟ್‌ನಲ್ಲಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. ವೈಫೈ, ಬ್ಲೂಟೂಥ್ ವಿ5, ಯುಎಸ್‌ಬಿ ಟೈಪ್-ಸಿ ಪೋರ್ಟ್, ಪ್ರಾಕ್ಮಿಸಿಟಿ ಸೆನ್ಸರ್, ಆಂಬಿಯೆಂಟ್ ಲೈಟ್ ಸೆನ್ಸರ್, ಜಿಪಿಎಸ್/ಎಜಿಪಿಎಸ್ ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿವೆ.
ಆಗಸ್ಟ್ 8ಕ್ಕೆ CAPF ಅಸಿಸ್ಟಂಟ್ ಕಮಾಂಡೆಂಟ್ಸ್ ಎಕ್ಸಾಂ: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ
ಈ ಟ್ಯಾಬ್‌ಗಳ ವಿಶೇಷತೆ ಏನೆಂದರೆ, ಅದರಲ್ಲಿರುವ ಬ್ಯಾಟರಿಗಳು. ಕಂಪನಿಯ 10 ವಾಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 8000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಹಾಗಾಗಿ, ಈ ಟ್ಯಾಬ್ಲೆಟ್‌ಗಳು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಬಹುದು.
ಅದೇ ರೀತಿ, ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಹಾಗೂ ಟಿಸಿಎಲ್ ಟ್ಯಾಬ್ 10ಎಸ್ ವೈಫೈ ಟ್ಯಾಬ್‌ಗಳು ಹಲವು ವಿಶಿಷ್ಟವಾದ ವೈಶಿಷ್ಟ್ಯಗಳನ್ನು ಹೊಂದಿವೆ. ಟಿಸಿಎಲ್ ಟ್ಯಾಬ್ 104ಜಿ ಎಫ್‌ಎಚ್‌ಡಿ ಆಂಡ್ರಾಯ್ಡ್ 10 ಒಎಸ್ ಆಧರಿತವಾಗಿದ್ದು, 10.1 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.
ಈ ಟ್ಯಾಬ್‌ನಲ್ಲಿ ಅಕ್ಟಾಕೋರ್ ಮಡೀಯಾ ಟೆಕ್ ಎಂಟಿ8768ಇ ಪ್ರೊಸೆಸರ್ ಇದ್ದು, 3 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್‌ನೊಂದಿಗೆ ಸಂಯೋಜಿತಗೊಂಡಿದೆ. ಜೊತೆಗೆ ಬಳಕೆದಾರರು ಈ ಟ್ಯಾಬ್ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಕಂಪನಿಯ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಿದ್ದು, 256 ಜಿಬಿವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.
ಆಗಸ್ಟ್ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?
ಕಂಪನಿಯು ಈ ಟ್ಯಾಬ್‌ನಲ್ಲಿ 5,500ಎಂಎಚ್ ಬ್ಯಾಟರಿಯನ್ನು ನೀಡಿದೆ. ಈ ಬ್ಯಾಟರಿ ಕೂಡ 10 ವಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಟ್ಯಾಬ್‌ನ ಹಿಂಬದಿ ಮತ್ತು ಮುಂಬದಿಯಲ್ಲಿ 5 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದ್ದು, ವೈಫೈ , ಜಿಪಿಎಸ್, ಹೆಡ್‌ಫೋನ್ ಜಾಕ್ ಸೇರಿದಂತೆ ಹಲವು ಕನೆಕ್ಟಿವಿಟಿ ಆಪ್ಷನ್‌ಗಳೂ ಇಲ್ಲಿವೆ.