ಮೊಬೈಲ್ ಬಳಕೆದಾರರಿಗೆ ಕಹಿ ಸುದ್ದಿ! ಇನ್ಮುಂದೆ ಸಿಗಲ್ಲ ಅಚ್ಚುಮೆಚ್ಚಿನ ಆಫರ್

ಟೆಲಿಕಾಂ ಕಂಪನಿಗಳು ಮೊಬೈಲ್‌ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಬಳಕೆದಾರರಿಗೆ ಮತ್ತೊಂದು ಕಹಿಸುದ್ದಿ ಹೊರಬಿದ್ದಿದೆ. ಈವರೆಗೆ ಎಂಜಾಯ್ ಮಾಡುತ್ತಿದ್ದ ಸೌಲಭ್ಯ ಇನ್ಮುಂದೆ ಸಿಗಲ್ಲ! ಏನದು? ಇಲ್ಲಿದೆ ವಿವರ... 
 

No More Free Calls TRAI To Fix Floor Price for Telecom Tariffs

ನವದೆಹಲಿ (ಡಿ. 18): ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ಮೊಬೈಲ್‌ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಸಂಸ್ಥೆ- ಟ್ರಾಯ್‌ ಉಚಿತ ಮೊಬೈಲ್‌ ಕರೆಗಳಿಗೆ ಕಡಿವಾಣ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 

ಇದರಿಂದ ಉಚಿತ ಮೊಬೈಲ್‌ ಕರೆಗಳ ಜಮಾನಕ್ಕೆ ಸಂಪೂರ್ಣ ತೆರೆ ಬೀಳಲಿದೆ. ಮೊಬೈಲ್‌ ಪೋನ್‌ ಕರೆಗಳಿಗೆ ಕನಿಷ್ಠ ಮೂಲ ದರ ನಿಗದಿಗೊಳಿಸುವ ಕುರಿತಂತೆ ಸಮಾಲೋಚನೆ ಆರಂಭಿಸಿದೆ.

ಇದನ್ನೂ ಓದಿ | ಭಾರತದ ರೀತಿ ಯುಪಿಐ ಹಣ ವರ್ಗಾವಣೆ ಜಾರಿಗೆ ಅಮೆರಿಕಕ್ಕೆ ಗೂಗಲ್‌ ಶಿಫಾರಸು!

ಜಿಯೋದ ಉಚಿತ ಕರೆ ಮತ್ತು ಅಗ್ಗದ ಡೇಟಾ ಸ್ಪರ್ಧೆಯಿಂದಾಗಿ ಟೆಲಿಕಾಂ ವಲಯದ ಕಾರ್ಯಸಾಧ್ಯತೆ ಕ್ಷೀಣಿಸುತ್ತಿದೆ. ಹೀಗಾಗಿ ಮೂಲ ದರವನ್ನು ನಿಗದಿಪಡಿಸಬೇಕು ಎಂದು ಭಾರ್ತಿ ಏರ್ಟೆಲ್‌ ಬೇಡಿಕೆ ಇಟ್ಟಿತ್ತು. 

ಈ ಬೇಡಿಕೆಗೆ ಸ್ಪಂದಿಸಿರುವ ಟ್ರಾಯ್‌, ನಿರ್ದಿಷ್ಟ ದರವನ್ನು ನಿಗದಿಪಡಿಸದೇ ಇರುವ ತನ್ನ ನಿಲುವನ್ನು ಪರಿಷ್ಕರಿಸಿದೆ.

ಇತ್ತೀಚೆಗೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಕಾಲ್ ಮತ್ತು ಡೇಟಾ ದರಗಳನ್ನು ಪರಿಷ್ಕರಿಸಿವೆ.  

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios