ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸ್ಯಾಮ್ಸಂಗ್
ಚೀನಾ ಮೂಲದ ಶಿಯೋಮಿ ಕಂಪನಿಯ ಕಳೆದ ಮೂರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನಿಯಾಗಿತ್ತು. ಇದೀಗ ಆ ಪಟ್ಟವನ್ನು ಸ್ಯಾಮ್ಸಂಗ್ ಪಡೆದುಕೊಂಡಿದೆ ಎನ್ನುತ್ತಿವೆ ವರದಿಗಳು. ಶಿಯೋಮಿ ಮುಂಚೆಯೂ ಸ್ಯಾಮ್ಸಂಗ್ ನಂಬರ್ 1 ಸ್ಥಾನದಲ್ಲಿತ್ತು.
ಕಳೆದ ಮೂರು ವರ್ಷಗಳಿಂದ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೇಲವವಾಗಿ ಕಾಣುತ್ತಿದ್ದ ಸ್ಯಾಮ್ಸಂಗ್ ಈ ವರ್ಷ ಮತ್ತೆ ಪುಟಿದಿದ್ದಿದೆ. ಚೀನಾ ಮತ್ತು ಭಾರತ ನಡುವಿನ ಸಂಘರ್ಷದಿಂದಾಗಿ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನವೂ ಕೊಂಚ ಮಟ್ಟಿಗೆ ಇದು ಕಾರಣವಾಗಿರಬಹುದಾದ ಸಾಧ್ಯತೆಗಳಿವೆ.
ಸತತ ಮೂರು ವರ್ಷಗಳಿಂದ ಶಿಯೊಮೀ ಭಾರತೀಯ ಸ್ಮಾರ್ಟ್ ಫೋನ್‌ಗಳ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಇದೀಗ ತನ್ನ ಸ್ಥಾನವನ್ನು ಪ್ರತಿಸ್ಪರ್ಧಿ ಸ್ಯಾಮ್ಸಂಗ್‌ಗೆ ಬಿಟ್ಟುಕೊಟ್ಟಿದೆ. ಅರ್ಥಾತ್, ಸ್ಯಾಮ್ಸಂಗ್ ಭಾರತೀಯ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಶಿಯೋಮಿಗಿಂತಲೂ ಮೊದಲು ಸ್ಯಾಮ್ಸಂಗ್‌ನದ್ದೇ ಕಾರುಬಾರು ಇತ್ತು. ಆದರೆ, ಚೀನಾ ಮೂಲದ ಶಿಯೋಮಿ ಕಂಪನಿಯ ಅಗ್ಗದ ಬೆಲೆಗೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ಗ್ರಾಹಕರನ್ನು ಗೆದ್ದು, ಸ್ಯಾಮ್ಸಂಗ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು.
ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್!
ಸ್ಯಾಮ್ಸಂಗ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೆ ನಂಬರ್ 1 ಸ್ಥಾನಕ್ಕೇರಿದ್ದರೂ, ಇತ್ತೀಚಿನ ವರದಿಗಳ ಪ್ರಕಾರ ಚೀನಾ ಮೂಲದ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮಾರಾಟವೂ ಗಣನೀಯವಾಗಿ ಏರಿಕೆಯಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತಿಂಗಳಿಗೆ ಮುಕ್ತಾಯವಾದ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ಭಾರತೀಯ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಶೇ.24ರಷ್ಟು ಪಾಲನ್ನು ಪಡೆದುಕೊಳ್ಳುವ ಮೂಲಕ ಅಗ್ರ ಸ್ಥಾನಕ್ಕೇರಿದೆ. ಇದೇ ವೇಳೆ, ಶಿಯೋಮಿ ಶೇ.23ರಷ್ಟು ಪಾಲನ್ನು ಪಡೆದುಕೊಂಡಿದೆ. ವಿಶೇಷ ಎಂದರೆ, 2019ರ ಮೂರನೇ ತ್ರೈಮಾಸಿಕದಲ್ಲಿ ಶಿಯೋಮಿ ಶೇ.26ರಷ್ಟು ಪಾಲು ಹೊಂದಿದ್ದರೆ, ಸ್ಯಾಮ್ಸಂಗ್ ಶೇ.20ರಷ್ಟು ಹೊಂದಿತ್ತು.
ವಾಟ್ಸ್ಆ್ಯಪ್‌ಗೆ ಶೀಘ್ರ ಫೇಶಿಯಲ್ ರೆಕಗ್ನಿಷನ್?
ಜಾಗತಿಕವಾಗಿಯೂ ಸ್ಯಾಮ್ಸಂಗ್ ಒಳ್ಳೆಯ ಬೆಳವಣಿಗೆಯನ್ನು ಕಂಡಿದೆ. ಹುವೈ ಬ್ರ್ಯಾಂಡ್ ಅನ್ನು ಹಿಂದಕ್ಕೆ ತಳ್ಳಿರುವ ಸ್ಯಾಮ್ಸಂಗ್ ಜಾಗತಿಕವಾಗಿ ಶೇ.22ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಏಪ್ರಿಲ್‌ಗೆ ಹೋಲಿಸಿದರೆ ಕಂಪನಿಯ ಬೆಳವಣಿಗೆಯಲ್ಲಿ ಶೇ.2ರಷ್ಟು ಹೆಚ್ಚಳವಾಗಿದೆ. ಅಂದರೆ, ಏಪ್ರಿಲ್‌ಗೆ ಮುಕ್ತಯವಾದ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ಶೇ.20ರಷ್ಟು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೊಂದಿತ್ತು. ಮತ್ತೊಂದೆಡೆ ಹುವೈ ಮಾರುಕಟ್ಟೆ ಪಾಲು 2020ರ ಆಗಸ್ಟ್‌ನಲ್ಲಿ ಶೇ.16ರಷ್ಟು ಕುಸಿತ ಕಂಡಿತ್ತು. ಏಪ್ರಿಲ್ ಅದರ ಪಾಲು ಶೇ.21ರಷ್ಟಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಚೀನಾ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ವಾಣಿಜ್ಯ ವ್ಯಾಪಾರದ ಸಂಘರ್ಷ. ಮತ್ತಷ್ಟು ನಿರ್ಬಂಧಗಳು ಸಾಧ್ಯವಾಗುವುದರಿಂದ ಹುವೈ ವ್ಯಾಪಾರ ಇನ್ನಷ್ಟು ಕುಸಿಯುವ ಸಾಧ್ಯತೆ ಎನ್ನುತ್ತಾರೆ ತಜ್ಞರು.
ಮತ್ತೊಂದೆಡೆ ಚೀನಾ ಮೂಲದ ಮತ್ತೊಂದ ಕಂಪನಿ ಶಿಯೋಮಿ ಬ್ರ್ಯಾಂಡ್ ಮಾತ್ರ ಸೆಂಟ್ರಲ್ ಈಸ್ಟರ್ನ್ ಯುರೋಪನ್ ಮಾರುಕಟ್ಟೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದು, ಹೆಚ್ಚಿನ ಪಾಲನ್ನು ಪಡೆಯುವತ್ತ ದಾಪುಗಾಲು ಹಾಗುತ್ತಿದೆ ಎನ್ನತ್ತಿದೆ ವರದಿ. ಹುವೈ ಕಳೆದುಕೊಳ್ಳುತ್ತಿರುವ ಪಾಲನ್ನು ಶಿಯೋಮಿ ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದು.
ಬದಲಾಗದ ಆಪಲ್ ಸ್ಥಿತಿ
ಜಗತ್ತಿನ ಪ್ರಮುಖ ಬ್ರ್ಯಾಂಡ್‌ನ ಸ್ಥಾನಮಾನದಲ್ಲೇನೂ ಅಂಥ ಬದಲಾವಣೆಯಾಗಿಲ್ಲ. 2020ರ ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ಅದರ ವ್ಯಾಪಾರ ವಹಿವಾಟು ಹೆಚ್ಚು ಕಡಿಮೆ ಒಂದೇ ತೆರನಾಗಿದೆ. ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿ ಶೇ.12ರಷ್ಟು ಪಾಲು ಹೊಂದಿದೆ. ಇತ್ತೀಚೆಗೆ ಆಪಲ್ ಕಂಪನಿ ಐಫೋನ್ 12 ಸಿರೀಸ್ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ನವೆಂಬರ್ ತಿಂಗಳಲ್ಲಿ ಹೆಚ್ಚಿನ ಬೆಳವಣಿಗೆ ಕಾಣಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ