Asianet Suvarna News Asianet Suvarna News

Space Film Studio: ಜಗತ್ತಿನ ಮೊದಲ ಸ್ಪೇಸ್ ಫಿಲ್ಮ್ ಸ್ಟುಡಿಯೋ 2024ರಲ್ಲಿ ಶುರು!

* 2020 ಜನವರಿಯಲ್ಲಿ ನಾಸಾದಿಂದ ಒಪ್ಪಿಗೆ ಪಡೆದುಕೊಂಡು ಬಾಹ್ಯಾಕಾಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
* ಇಲ್ಲಿ ಫಿಲ್ಮ್ ಶೂಟಿಂಗ್ ಮಾತ್ರವಲ್ಲದೇ, ಟೆಲಿವಿಷನ್, ಕ್ರೀಡೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
* ಈ ಬಾಹ್ಯಾಕಾಶದಲ್ಲಿನ ಸ್ಟುಡಿಯೋ 2024ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ.

SEE 1 is the worlds first space based studio to launch by 2024
Author
Bengaluru, First Published Jan 22, 2022, 2:45 PM IST

Tech Desk: ಮಾನವ ಎಣಿಕೆಗೆ ಕೊನೆಯೇ ಇಲ್ಲ, ಕನಸಿಗೆ ಮಿತಿಯೇ ಇಲ್ಲ ಎಂದು ಹೇಳುವುದು ಇದಕ್ಕೆ. ಬಾಹ್ಯಾಕಾಶದಲ್ಲಿ ಫಿಲ್ಮ್ ಸ್ಟುಡಿಯೋ ಮಾಡಬಹುದಾ? ಖಂಡಿತ ಇದು ಓದೋದಕ್ಕೆ ಚೆನ್ನಾಗಿರುತ್ತದೆ, ಕತೆ-ಕಾದಂಬರಿಗಳಲ್ಲಿ ರಿಯಲ್ ಆಗಿರುತ್ತದೆ ಎಂದು ಭಾವಿಸಬೇಡಿ. ಇಂಥದೊಂದು ನಿಜವಾಗುವ ಕಾಲ ಸನ್ನಿಹಿತವಾಗಿದೆ. ಬಾಹ್ಯಾಕಾಶದಲ್ಲೇ ಜಗತ್ತಿನ ಮೊದಲ ಎಂಟರ್‌ಟೈನ್ಮೆಂಟ್ ಸ್ಟುಡಿಯೂವೊಂದು 2024ರಲ್ಲಿ ಕಾರ್ಯಾರಂಭ ಮಾಡಲಿದೆ. ಭೂಮಿಯ ಮೇಲಿನ ಸ್ಟುಡಿಯೋಗಳು ಯಾವ ರೀತಿಯಲ್ಲಿ ಇರಲಿವೆಯೋ ಅದೇ ರೀತಿಯ ಸ್ಟುಡಿಯೋ ಆಕಾಶದಲ್ಲಿ ತಲೆ ಎತ್ತಲಿದೆ! ಅಂದ ಹಾಗೆ, ಹಾಲಿವುಡ್‌ನ ಫೇಮಸ್ ನಟ ಟಾಮ್ ಕ್ರೂಸ್ ಗೊತ್ತಲ್ಲ, ಅವರ ಸಿನಿಮಾ ಇಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ.

ಹೌದು ಇದೆಲ್ಲವೂ ನಿಜ. ಸ್ಪೇಸ್ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸಸ್(Space Entertainment Enterprise-SEE) ಇಂಥದೊಂದು ಸಾಹಸಕ್ಕೆ ಮುಂದಾಗಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಮೊದಲು ಬಹುಪಯೋಗಿ ಎಂಟರ್‌ಟೈನ್ಮೆಂಟ್ ಸ್ಟುಡಿಯೋ ಲಾಂಚ್ ಮಾಡುವುದಾಗಿ ಹೇಳಿಕೊಂಡಿದೆ. ಈ ಕಂಪನಿಯೇ ಟಾಮ್ ಕ್ರೂಸ್ ಅವರ ಮುಂಬರಲಿರುವ ಸ್ಪೇಸ್ ಮೂವಿ ನಿರ್ಮಾಣ ಕೂಡ ಮಾಡುತ್ತಿದೆ. 

ಇದನ್ನೂ ಓದಿ:  ಚಂದ್ರನಲ್ಲಿ ನೀರು: ಸ್ಥಳದಲ್ಲೇ ಖಚಿತಪಡಿಸಿದ ಚೀನಾ ನೌಕೆ!

ಕ್ರೀಡಾ ಮತ್ತು ಎಂಟರ್‌ಟೈನ್ಮೆಂಟ್ ಸ್ಟುಡಿಯೊಗಳು ಮಾತ್ರವಲ್ಲದೇ ಕಂಟೆಂಟ್ ಸ್ಟುಡಿಯೋ ಕೂಡ ನಿರ್ಮಾಣ ಮಾಡಲಿದೆ. ಈ ಬಾಹ್ಯಾಕಾಶದಲ್ಲಿನ ಸ್ಟುಡಿಯೋ 2024ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇದಕ್ಕೆ ಎಸ್ಇಇ-1 (SEE-1) ಎಂದು ನಾಮಕರಣ ಮಾಡಲಾಗಿದೆ. ಇಲ್ಲಿ ನೀವು ಸಿನಿಮಾ, ದೂರದರ್ಶನ, ಸಂಗೀತ ಮತ್ತು ಕ್ರೀಡಾ ಇವೆಂಟ್‌ಗಳನ್ನು ಆಯೋಜಿಸಬಹುದು. ಮೈಕ್ರೋ ಗ್ರಾವಿಟ್ ಹಾಗೂ ಲೋ ಆರ್ಬಿಟ್‌ನಲ್ಲಿ ಕಲಾವಿದರು, ನಿರ್ಮಾಣಕರು, ನಿರ್ದೇಶಕರು ತಮಗೆ ಬೇಕಾದ ಕಂಟೆಂಟ್ ಅನ್ನು ಇಲ್ಲಿ ಸೃಷ್ಟಿಸಬಹುದು. ಈ ಮಾಡ್ಯೂಲ್‌ನಲ್ಲಿ ಎಸ್ಇಇ ತನ್ನ ಸ್ವಂತ ಕಂಟೆಂಟ್ ರೂಪಿಸುವುದು ಮಾತ್ರವಲ್ಲದೇ ಥರ್ಡ್ ಪಾರ್ಟಿಗಳಿಗೂ ಇಲ್ಲಿ ತಮ್ಮ ಕಂಟೆಂಟ್ ರೂಪಿಸಲು ಕೊಳ್ಳಲು ಅವಕಾಶ ನೀಡಲಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ವಾಣಿಜ್ಯ ಘಟಕವನ್ನು ನಿರ್ಮಿಸಲು ಜನವರಿ 2020ರಲ್ಲಿ ನಾಸಾದ ಅನುಮೋದನೆಯನ್ನು ಪಡೆದುಕೊಂಡ ಆಕ್ಸಿಯಮ್ ಸ್ಪೇಸ್ (Axiom Space), SEE-1 ರ ನಿರ್ಮಾಣವನ್ನು ಕೈಗೊಳ್ಳಲಿದೆ. ಮಾಡ್ಯೂಲ್ Axiom ನ ವಾಣಿಜ್ಯ ವಿಭಾಗದಲ್ಲಿ ಡಾಕ್ ಮಾಡುತ್ತದೆ ಮತ್ತು ಇದಕ್ಕೆ ಆಕ್ಸಿಯಮ್ ಸ್ಟೇಷನ್ (Axiom Station) ಎಂದು ಹೆಸರಿಸಲಾಗಿದೆ, ಇದು ಬಾಹ್ಯಾಕಾಶ ಪ್ರವಾಸೋದ್ಯಮ ಸೇರಿದಂತೆ ಇತರ ವಾಣಿಜ್ಯ ಉದ್ಯಮಗಳನ್ನು ಸಹ ಆಯೋಜಿಸುತ್ತದೆ. ಆಕ್ಸಿಯಮ್ ಸ್ಟೇಷನ್ ನಂತರ 2028 ರಲ್ಲಿ ISSನಿಂದ ಪ್ರತ್ಯೇಕಗೊಳ್ಳಲಿದೆ.

ಇದನ್ನೂ ಓದಿ:  Artificial Lunar ಕೃತಕ ಚಂದ್ರನನ್ನೇ ಸೃಷ್ಟಿಸಿದ ಚೀನಾ, ಅಧ್ಯಯನದಿಂದ ಏನೇನು ಲಾಭ?

ಬ್ರಿಟನ್‌ನಲ್ಲಿ ಉದ್ಯಮಿಗಳು ಮತ್ತು ನಿರ್ಮಾಪಕರಾಗಿರುವ ಎಲೆನಾ (Elena) ಮತ್ತು ಡಿಮಿಟ್ರಿ ಲೆಸ್ನೆವ್ಸ್ಕಿ (Dmitry Lesnevsky) ಅವರು ಎಸ್ಇಇಗೆ ಸಹ ಸಂಸ್ಥಾಪಕರಾಗಿದ್ದಾರೆ. ಮತ್ತು ಇದಕ್ಕಾಗಿ ಪ್ರಸ್ತುತ ನಿಧಿಸಂಗ್ರಹಣೆಯನ್ನು ಮಾಡಲಾಗುತ್ತಿದೆ. "ಎಸ್ಇಇ-1 ಮಾನವೀಯತೆಯು ವಿಭಿನ್ನ ಕ್ಷೇತ್ರಕ್ಕೆ ಚಲಿಸಲು ಮತ್ತು ಬಾಹ್ಯಾಕಾಶದಲ್ಲಿ ಅತ್ಯಾಕರ್ಷಕ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಅದ್ಭುತ ಅವಕಾಶವಾಗಿದೆ" ಎಂದು ಡಿಮಿಟ್ರಿ ಮತ್ತು ಎಲೆನಾ ಲೆಸ್ನೆವ್ಸ್ಕಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದು ಸೃಜನಶೀಲತೆಯ ಹೊಸ ಜಗತ್ತನ್ನು ಅನಾವರಣಗೊಳಿಸುವ ನವೀನ ಮೂಲಸೌಕರ್ಯದಿಂದ ತುಂಬಿದ ಸ್ಥಳದಲ್ಲಿ ಮಿತಿಯಿಲ್ಲದ ಮನರಂಜನೆಯ ಸಾಧ್ಯತೆಗಳಿಗಾಗಿ ಅನನ್ಯ ಮತ್ತು ಪ್ರವೇಶಿಸಬಹುದಾದ ಅವಕಾಶವನ್ನು ಒದಗಿಸುತ್ತದೆ. ಈ ಅತ್ಯಾಧುನಿಕ, ಕ್ರಾಂತಿಕಾರಿ ಸೌಲಭ್ಯವನ್ನು ಸೃಷ್ಟಿಯಲ್ಲಿ ಆಕ್ಸಿಯಂ ಸ್ಪೇಸ್ ವಿಶ್ವದಲ್ಲೇ ಮುಂಚೂಣಯಿಲ್ಲಿದೆ. SEE-1,  ಎರಡು ಟ್ರಿಲಿಯನ್ ಡಾಲರ್ ಜಾಗತಿಕ ಮನರಂಜನಾ ಉದ್ಯಮವನ್ನು ಲೋ ಗ್ರಾವಿಟಿ ಕಕ್ಷೆಗೆ ವಿಸ್ತರಿಸಲು ಅನುವು ಮಾಡಿಕೊಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.  ವಿಶ್ವದ ಮೊದಲ ವಾಣಿಜ್ಯ ಬಾಹ್ಯಾಕಾಶ ನಿಲ್ದಾಣವಾದ ಆಕ್ಸಿಯಮ್ ನಿಲ್ದಾಣವು ಕಕ್ಷೆಯಲ್ಲಿ ವೈವಿಧ್ಯಮಯ ಆರ್ಥಿಕತೆಯನ್ನು ಸಕ್ರಿಯಗೊಳಿಸುವ ಅಡಿಪಾಯದ ಮೂಲಸೌಕರ್ಯವಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ಆಕ್ಸಿಯಮ್ ಸ್ಪೇಸ್‌ನ ಅಧ್ಯಕ್ಷ/ಸಿಇಒ ಮೈಕೆಲ್ ಸುಫ್ರೆಡಿನಿ ಹೇಳಿದ್ದಾರೆ.

Follow Us:
Download App:
  • android
  • ios