Lava Bold N4 Lite : ಲಾವಾ ಕಂಪನಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಸಾಕಷ್ಟು ವೈಶಿಷ್ಟ್ಯವಿರುವ ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ.
ಲಾವಾ (Lava) ಕಂಪನಿ ಫೋನ್ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಕಂಪನಿ ತನ್ನ Bold ಸ್ಮಾರ್ಟ್ಫೋನ್ ಸರಣಿಯ ಹೊಸ ಮಾಡೆಲ್ Bold N4 ಲೈಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಬಜೆಟ್ ಫ್ರೆಂಡ್ಲಿ ಫೋನ್ ಆಗಿದ್ದು, ಅದ್ರ ಬೆಲೆ, ವೈಶಿಷ್ಟ್ಯದ ಮಾಹಿತಿ ಇಲ್ಲಿದೆ.
Bold N4 Lite ವಿಶೇಷತೆ ಏನು?
ಈ ಬಜೆಟ್ ಫೋನ್ 6.56-ಇಂಚಿನ ಡಿಸ್ಪ್ಲೇ, ಯುನಿಸಾಕ್ 9863A ಚಿಪ್ಸೆಟ್ ಮತ್ತು 5,000mAh ಬ್ಯಾಟರಿಯನ್ನು ಹೊಂದಿದೆ. ಫೋನ್ ಆಂಡ್ರಾಯ್ಡ್ 16 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. 3GB RAM ಮತ್ತು ವರ್ಚುವಲ್ RAM ಬೆಂಬಲದೊಂದಿಗೆ ಬರುತ್ತದೆ.
ಲಾವಾ ಬೋಲ್ಡ್ N4 ಲೈಟ್ ಬೆಲೆ
ಲಾವಾ ಬೋಲ್ಡ್ N4 ಲೈಟ್ನ 3GB RAM ಮತ್ತು 32GB ಸ್ಟೋರೇಜ್ ರೂಪಾಂತರದ ಬೆಲೆ 8099 ರೂಪಾಯಿ. ಫೋನ್ 7,999 ರೂಪಾಯಿಗೆ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಸೆಪ್ಟೆಂಬರ್ 3 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ನಲ್ಲಿ ಮಾರಾಟ ಶುರುವಾಗಲಿದೆ. ಫೋನ್ ಎಂಪೈರ್ ಗೋಲ್ಡ್ ಮತ್ತು ಘೋಸ್ಟ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಮನೆಗೆ ಬಂದು ರಿಪೇರಿ
ಈ ಫೋನ್ ನಲ್ಲಿ ಲಾವಾದ ಉಚಿತ ಹೋಮ್ ಅಟ್ ಹೋಮ್ ಸೇವೆಯನ್ನು ಸಹ ಲಭ್ಯವಿದೆ. ನಿಮ್ಮ ಫೋನ್ ಹಾಳಾದಲ್ಲಿಮನೆಗೆ ಬಂದು ಫೋನ್ ರಿಪೇರಿ ಕೆಲ್ಸವನ್ನು ಕಂಪನಿ ಮಾಡುತ್ತದೆ.
ಫೋನ್ ಆಂಡ್ರಾಯ್ಡ್ 16 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಲಾವಾ ಪ್ರಕಾರ, ಇದು ಅನಗತ್ಯ ಹೆಚ್ಚುವರಿ ಅಪ್ಲಿಕೇಶನ್ಗಳನ್ನು ಒಳಗೊಂಡಿಲ್ಲ. ಫೋಟೋಕ್ಕಾಗಿ ಲಾವಾ ಬೋಲ್ಡ್ N4 ಲೈಟ್ 8-ಮೆಗಾಪಿಕ್ಸೆಲ್ AI ಬ್ಯಾಕ್ ಕ್ಯಾಮೆರಾ ಮತ್ತು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಅದು 10W ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಒದಗಿಸಲಾಗಿದೆ. ಆಡಿಯೊಗಾಗಿ ಸಿಂಗಲ್ ಸ್ಪೀಕರ್ ಒದಗಿಸಲಾಗಿದೆ. ಇದು MIL-STD-810H ರೇಟಿಂಗ್ ಅನ್ನು ಸಹ ಹೊಂದಿದೆ.
ಲಾವಾ ಬೋಲ್ಡ್ N4 ಲೈಟ್ vs ಬೋಲ್ಡ್ N2 ಲೈಟ್
ಏಪ್ರಿಲ್ನಲ್ಲಿ ಭಾರತದಲ್ಲಿ ಬಿಡುಗಡೆಯಾದ ಲಾವಾ ಬೋಲ್ಡ್ N2 ಲೈಟ್ ಬೆಲೆ 7399 ರೂಪಾಯಿ. ಇದು 6.75-ಇಂಚಿನ HD+ 90Hz ಡಿಸ್ಪ್ಲೇ ಮತ್ತು ಯುನಿಸಾಕ್ 9863A ಚಿಪ್ಸೆಟ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 Go ನಲ್ಲಿ ಕಾರ್ಯನಿರ್ವಹಿಸುತ್ತದೆ.


