Asianet Suvarna News Asianet Suvarna News

20.9 MBPS ಡೌನ್ಲೋಡ್ ಸ್ವೀಡ್; 4ಜಿ ನೆಟ್‌ವರ್ಕ್‌ನಲ್ಲಿ ಜಿಯೋಗೆ ಅಗ್ರಸ್ಥಾನ!

  • ರಿಲಯನ್ಸ್ ಜಿಯೋಗೆ ಡೌನ್ಲೋಡ್ ವೇಗದಲ್ಲಿ ಮೊದಲ ಸ್ಥಾನ
  • 4ಜಿ ನೆಟ್‌ವವರ್ಕ್ ವೇಗದಲ್ಲಿ ಜಿಯೋ ಮತ್ತೆ ಸಂಚಲನ
  • ಅಪ್ಲೋಡ್‌ನಲ್ಲಿ ವೋಡಾಫೋನ್‌ಗೆ ಮೊದಲ ಸ್ಥಾನ
     
Jio tops 4G chart with 20 9 Mbps download speed in september Trai report ckm
Author
Bengaluru, First Published Oct 18, 2021, 9:46 PM IST
  • Facebook
  • Twitter
  • Whatsapp

ನವದೆಹಲಿ(ಅ.18): ರಿಲಯನ್ಸ್ ಜಿಯೋ ಪ್ರತಿ ಸೆಕೆಂಡ್‌ಗೆ ಸರಾಸರಿ 20.9 ಮೆಗಾಬೈಟ್ (MBPS) ಡೌನ್ಲೋಡ್ ವೇಗ ಕಾಯ್ದುಕೊಳ್ಳುವ ಮೂಲಕ 4ಜಿ ವಿಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕೂಡ ಮೊದಲ ಸ್ಥಾನದಲ್ಲಿ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ನೆಟ್‌ವರ್ಕ್ ಬಲಪಡಿಸಿದ ಜಿಯೋ, ಹೆಚ್ಚುವರಿ 5MHz ತರಂಗಾಂತರ ಅಳವಡಿಕೆ!
 
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋದ 4ಜಿ ನೆಟ್ವರ್ಕ್ ವೇಗವು ಶೇ 15ರಷ್ಟು ಹೆಚ್ಚಾಗಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐ) ವೇಗವು ತಿಂಗಳಿಂದ ತಿಂಗಳಿಗೆ ಕ್ರಮವಾಗಿ ಸುಮಾರು ಶೇ 85 ಮತ್ತು ಶೇ 60ರಷ್ಟು, ಅಂದರೆ 11.9 ಎಂಬಿಪಿಎಸ್ ಹಾಗೂ 14.4 ಎಂಬಿಪಿಎಸ್ನಷ್ಟು ಏರಿಕೆಯಾಗಿದೆ.

Jio ನೆಟ್‌ವರ್ಕ್‌ ಏಕಾಏಕಿ ಸ್ಥಗಿತ, ಗ್ರಾಹಕರು ಕಂಗಾಲು!
 
ಇನ್ನು 7.2 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಪ್ಲೋಡ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಡೌನ್ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ. ಟ್ರಾಯ್ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲ ಮೂರೂ ಖಾಸಗಿ ಆಪರೇಟರ್ಗಳ 4ಜಿ ಅಪ್ಲೋಡ್ ವೇಗದಲ್ಲಿ ಸುಧಾರಣೆಯಾಗಿದೆ.

ಚಿಪ್ ಕೊರತೆ, ಗಣೇಶ ಹಬ್ಬದ ಬದಲು ದೀಪಾವಳಿಗೆ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ!
 
ವೊಡಾಫೋನ್ ಐಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 7.2 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗ ಹೊಂದಿತ್ತು. ನಂತರದ ಸ್ಥಾನದಲ್ಲಿ 6.2 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ಇದ್ದರೆ, ಭಾರ್ತಿ ಏರ್ಟೆಲ್ 4.5 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ.
 
ಸರ್ಕಾರಿ ಸ್ವಾಮ್ಯದ ದೂರಸಂರ್ಪಕ ಸಂಸ್ಥೆ ಬಿಎಸ್ಎನ್ಎಲ್, ಆಯ್ದ ಪ್ರದೇಶಗಳಲ್ಲಿ 4ಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ, ಅದರ ನೆಟ್ವರ್ಕ್ ವೇಗವನ್ನು ಟ್ರಾಯ್ ಚಾರ್ಟ್ನಲ್ಲಿ ನಮೂದಿಸಿಲ್ಲ. ಮೈಸ್ಪೀಡ್ ಆಪ್ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ

Follow Us:
Download App:
  • android
  • ios