Asianet Suvarna News Asianet Suvarna News

Jio ನೆಟ್‌ವರ್ಕ್‌ ಏಕಾಏಕಿ ಸ್ಥಗಿತ, ಗ್ರಾಹಕರು ಕಂಗಾಲು!

* ಫೇಸ್‌ಬುಕ್‌ ಅವಾಂತರದ ಬೆನ್ನಲ್ಲೇ ಜಿಯೋ ನೆಟ್ವರ್ಕ್‌ ಮಾಯ

* ದೇಶದ ವಿವಿಧ ರಾಜ್ಯಗಳಲ್ಲಿ ಜಿಯೋ ನೆಟ್ವರ್ಕ್‌ ಸ್ಥಗಿತ

Reliance Jio network goes down in certain circles users report they cannot use internet or make calls pod
Author
Bangalore, First Published Oct 6, 2021, 1:29 PM IST | Last Updated Oct 6, 2021, 1:34 PM IST

ನವದೆಹಲಿ(ಆ.06): ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್(Telecom Operator) ರಿಲಯನ್ಸ್ ಜಿಯೋ(Reliance Jio) ನೆಟ್ವರ್ಕ್ ಬುಧವಾರ ಬೆಳಿಗ್ಗೆ 9.30 ರಿಂದ ದೇಶಾದ್ಯಂತ ಸ್ಥಗಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಬಳಕೆದಾರರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಟ್ವಿಟರ್‌ನಲ್ಲಿ, #jiodown ಭಾರೀ ಟ್ರೆಂಡಿಂಗ್ ಆಗಲಾರಂಭಿಸಿದೆ. ಜಿಯೋ ನೆಟ್‌ವರ್ಕ್‌ ಸ್ಥಗಿತಗೊಂಡಿರುವ ಬಗ್ಗೆ ಬಳಕೆದಾರರು ನಿರಂತರವಾಗಿ ದೂರು ನೀಡುತ್ತಿದ್ದಾರೆ. ಕೆಲವು ಬಳಕೆದಾರರು ಜಿಯೋ(Jio) ಕಂಪನಿಯನ್ನು ತೀವ್ರವಾಗಿ ದೂಷಿಸುತ್ತಿದ್ದಾರೆ. ಮೀಮ್‌ಗಳನ್ನೂ ಸಹ ಹಂಚಿಕೊಳ್ಳಲಾಗುತ್ತಿದೆ. ಪ್ರಸ್ತುತ, ಜಿಯೋ ನೆಟ್‌ವರ್ಕ್ ಹಲವು ಗಂಟೆಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಬಳಕೆದಾರರು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಬಳಿಕ ಈಗ ಜಿಯೋ ನೆಟ್‌ವರ್ಕ್(Jio Network) ಕೂಡ ಸ್ಥಗಿತಗೊಂಡಿದೆ ಎಂದು ಬರೆದಿದ್ದಾರೆ.

ದೇಶಾದ್ಯಂತ ಜಿಯೋ ಸೇವೆ ಸ್ಥಗಿತಗೊಂಡಿದೆ. ಮಂಗಳವಾರ ರಾತ್ರಿಯಿಂದ ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಜಿಯೋ ನೆಟ್ವರ್ಕ್ ಸಮಸ್ಯೆ ಕಾಣಿಸಿಕೊಂಡಿದೆ. ಬೆಳಗ್ಗಿನಿಂದ, ಜಿಯೋ ನೆಟ್‌ವರ್ಕ್ ಡೌನ್ ಆಗಿದೆ ಎಂಬ ಸುದ್ದಿ ದೇಶಾದ್ಯಂತ ಕೇಳಲಾರಮಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಬಳಕೆದಾರರು ಫೋನ್ ಕರೆಗಳನ್ನು ಹಾಗೂ ಇಂಟರ್ನೆಟ್ ಬಳಸಲಾಗುತ್ತಿಲ್ಲ. ಕಂಪನಿಯ ಗ್ರಾಹಕ ಸೇವೆಯನ್ನು ಸಂಪರ್ಕಿಸಲೂ ಸಾಧ್ಯವಾಗುವುತ್ತಿಲ್ಲ. ಕಳೆದ ಒಂದೂವರೆ ಗಂಟೆಗಳಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ. ಕಂಪನಿಯ ತಾಂತ್ರಿಕ ತಂಡವು ಅದನ್ನು ನಿರ್ವಹಿಸುವಲ್ಲಿ ವ್ಯಸ್ತವಾಗಿದ್ದು, ವ್ಯವಸ್ಥೆಯು ಶೀಘ್ರದಲ್ಲೇ ಸರಿಪಡಿಸಲಾಗುತ್ತದೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಸೇವೆ ಸ್ಥಗಿತ

ಬಳಕೆದಾರರು ಆರಂಭದಲ್ಲಿ ವಾಟ್ಸಾಪ್ ಸೇವೆ ಮತ್ತೆ ಸ್ಥಗಿತಗೊಂಡಿದೆ ಎಂದು ಭಾವಿಸಿದ್ದರು, ಆದರೆ ಶೀಘ್ರದಲ್ಲೇ ಸಮಸ್ಯೆ ಜಿಯೊ ನೆಟ್‌ವರ್ಕ್‌ನಲ್ಲಿದೆ ಎಂಬುವುದು ಸ್ಪಷ್ಟವಾಗಿದೆ. ವಿಶೇಷವೆಂದರೆ ಈ ಸಮಯದಲ್ಲಿ ನೆಟ್‌ವರ್ಕ್ ಇರುವಂತೆಯೇ ಮೊಬೈಲ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಕರೆ ಮಾಡಲು ಆಗುತ್ತಿಲ್ಲ. ಎರಡು ದಿನಗಳ ಹಿಂದೆ, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನ ಸರ್ವರ್‌ಗಳು ಸ್ಥಗಿತಗೊಂಡಿದ್ದರಿಂದ ಸಂಚಲನ ಉಂಟಾಗಿತ್ತು. ನಂತರ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಭಾರತ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ ಎಂಬುವುದು ತಿಳಿದು ಬಂದಿತ್ತು. 

Latest Videos
Follow Us:
Download App:
  • android
  • ios