Asianet Suvarna News Asianet Suvarna News

ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್‌ ನೋಡಿ..!

  • IPL ಆಸಕ್ತರಿಗೆ ಜಿಯೋ ಹೊಸ ಪ್ಲಾನ್ ಲಾಂಚ್
  • ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್ ನೋಡುವ ಅವಕಾಶ
  • ಸರಳ ಹಾಗೂ ಸುಲಭ ಪ್ಲಾನ್ ಲಾಂಚ್ ಮಾಡಿದ ಜಿಯೋ
Jio IPL Special Reliance Jio Dhan Dhana Dhan offer for IPL cricket lovers
Author
Bengaluru, First Published Aug 25, 2020, 2:11 PM IST
  • Facebook
  • Twitter
  • Whatsapp

ಬೆಂಗಳೂರು(ಆ.25):  ಕ್ರಿಕೆಟ್ ಧನ್ ಧನಾ ಧನ್, ಜಿಯೋ ಧನ್ ಧನಾ ಧನ್ ಹೆಸರಿನಲ್ಲಿ ಹೊಸದೊಂದು ಆಫರ್ ಅನ್ನು ಜಿಯೋ ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಕರೋನಾದಿಂದಾಗಿ ಯುಎಇ ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗಳನ್ನು ಯಾವುದೇ ಅಡೆತಡೆಗಳು ಇಲ್ಲದೇ ಆನ್‌ಲೈನಿನಲ್ಲಿ ನೋಡಲು ತನ್ನ ಚಂದದಾರರಿಗೆ ಜಿಯೋ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ.

ಜಿಯೋ ಧಮಾಕಾ: 5 ತಿಂಗಳವರೆಗೆ ಡೇಟಾ, ಕರೆ ಸಂಪೂರ್ಣ ಉಚಿತ!

ಜಿಯೋ ನಾನ್ ಸ್ಟಾಪ್ IPL ಮನರಂಜನೆಯನ್ನು ನೀಡುವ ಸಲುವಾಗಿ ಡಿಸ್ನಿ + ಹಾಟ್‌ಸ್ಟಾರ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಹೊಸದಾಗಿ ಪ್ಲಾನ್‌ಗಳನ್ನು ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್ ಚಂದಾರರಿಕೆಯನ್ನು ಪಡೆಯುವುದರೊಂದಿಗೆ ಡೇಟಾ ವನ್ನು ಸಹ ಪಡೆದುಕೊಳ್ಳಲಿದ್ದಾರೆ.

ಹೊಸ ಪ್ಲಾನ್‌ಗಳು:

ರೂ.401 ಪ್ಲಾನ್:
ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ  ಮತ್ತುಒಂದು ತಿಂಗಳ ಅವಧಿಯಲ್ಲಿ ಬಳಕೆ ಮಾಡಿಲು 90 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಆನ್‌ಲಿಮಿಟೆಡ್‌ ವಾಯ್ಸ್‌ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ಇರಲಿದೆ.

ರಿಲಯನ್ಸ್ ಜಿಯೋ ತೆಕ್ಕೆಗೆ ಟಿಕ್ ಟಾಕ್ ಭಾರತ ಘಟಕ..?.

ರೂ. 499 ಕ್ರಿಕೆಟ್ ಪ್ಯಾಕ್ (ಡೇಟಾ ಆಡ್-ಆನ್)
ರೂ. 499ಕ್ಕೆ ಲಭ್ಯವಿರುವ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ IPL ಪಂದ್ಯಾವಳಿಗಳು ನಡೆಯುವ 56 ದಿನಗಳ ಕಾಲ ನಿತ್ಯ 1.5GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡಲಿದೆ.

ರೂ. 777 ಕ್ವಾಟರ್ಲಿ ಪ್ಲ್ಯಾನ್
ರೂ.777ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಜಿಯೋ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ 84 ದಿನಗಳ ಕಾಲ ಬಳಕೆಗೆ 131 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್‌ಲಿಮಿಟೆಡ್‌ ವಾಯ್ಸ್‌ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ. 

ರೂ.2599 ಇಯರ್ಲಿ ಪ್ಲಾನ್
ರೂ.2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡಲಿದೆ ಮತ್ತು ಒಂದು ವರ್ಷದ ಅವಧಿಗೆ 740 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್‌ಲಿಮಿಟೆಡ್‌ ವಾಯ್ಸ್‌ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಿದೆ.

ಇದಲ್ಲದೇ ಡೇಟಾ ಆಡ್‌ ಆನ್‌ ಪ್ಲಾನ್‌ಗಳನ್ನು ಸಹ ಜಿಯೋ ನೀಡುತ್ತಿದೆ

ರೂ. 612 ಡೇಟಾ ಆಡ್ ಆನ್:
ರೂ. 612ಕ್ಕೆ ಡೇಟಾ ಆಡ್‌ ಆನ್‌ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಈಗಾಗಲೆ ಇರುವ ಪ್ಲಾನ್‌ ಅವಧಿಯ ವರೆಗೆ 72GB ಡೇಟಾ ಮತ್ತು 6000 ನಿಮಿಷಗಳ ಕಾಲ ಜಿಯೋ ದಿಂದ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಅವಕಾಶ ಮಾಡಿಕೊಡಲಿದೆ.

ರೂ. 1,004ಡೇಟಾ ಆಡ್ ಆನ್:
ರೂ. 1,004ಕ್ಕೆ ಡೇಟಾ ಆಡ್‌ ಆನ್‌ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ 120 ದಿನಗಳ ಅವಧಿಯ ವರೆಗೆ 200GB GB ಡೇಟಾವನ್ನು ಬಳಕೆಗೆ ನೀಡಲಿದೆ.

ರೂ. 1,206 ಡೇಟಾ ಆಡ್ ಆನ್:
ರೂ. 1,206 ಕ್ಕೆ ಡೇಟಾ ಆಡ್‌ ಆನ್‌ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ 180 ದಿನಗಳ ಅವಧಿಯ ವರೆಗೆ 240GB GB ಡೇಟಾವನ್ನು ಬಳಕೆಗೆ ನೀಡಲಿದೆ.

ರೂ. 1,208 ಡೇಟಾ ಆಡ್ ಆನ್:
ರೂ. 1,208ಕ್ಕೆ ಡೇಟಾ ಆಡ್‌ ಆನ್‌ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ 240  ದಿನಗಳ ಅವಧಿಯ ವರೆಗೆ 240GB GB ಡೇಟಾವನ್ನು ಬಳಕೆಗೆ ನೀಡಲಿದೆ.

Follow Us:
Download App:
  • android
  • ios