ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಯೋ ಬಂಪರ್| ಐದು ತಿಂಗಳವರೆಗೆ ಇಂಟರ್ನೆಟ್ ಹಾಗೂ ಕಾಲಿಂಗ್ ಸೌಲಭ್ಯ ಉಚಿತ| ಈ ಪ್ಲಾನ್ ಲಾಭ ಪಡೆಯಲು ನೀವೇನು ಮಾಡಬೇಕು? ಇಲ್ಲಿದೆ ವಿವರ

ಮುಂಬೈ(ಆ.15): ತನ್ನ ಆಕರ್ಷಕ ಆಫರ್‌ಗಳಿಂದಲೇ ಜನಪ್ರಿಯಗೊಂಡಿರುವ ಜಿಯೋ ಸ್ವಾತಂತ್ರ್ಯ ದಿನದ ಪ್ರಯುಕ್ತ ಮತ್ತೊಂದು ಬಂಪರ್ ಆಫರ್ ಘೋಷಿಸಿದೆ. ಈ ಆಫರ್‌ ಮೂಲಕ ಜಿಯೋಫೈ 4 ಜಿ ವೈರ್‌ಲೆಸ್ ಹಾಟ್‌ಸ್ಪಾಟ್ ಖರೀದಿದಾರರಿಗೆ 5 ತಿಂಗಳವರೆಗೆ ಉಚಿತ ಇಂಟರ್ನೆಟ್ ಹಾಗೂ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆ ಸಿಗಲಿದೆ. ಇನ್ನು ಜಿಯೋಫೈ ಬೆಲೆ 1,999 ರೂ. ನಿಗದಿಪಡಿಸಲಾಗಿದ್ದು, ಈ ಆಫರ್‌ ಪಡೆದುಕೊಳ್ಳಲು ಗ್ರಾಹಕರು ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋಫೈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವುದು ಅಗತ್ಯ.

ಹೇಗೆ ಪಡೆದುಕೊಳ್ಳುವುದು?

ರಿಲಯನ್ಸ್ ಡಿಜಿಟಲ್ ಅಂಗಡಿಯಿಂದ ಜಿಯೋಫೈ ಹಾಟ್‌ಸ್ಪಾಟ್ ಖರೀದಿಸಿ, ಬಳಿಕ ಜಿಯೋ ಸಿಮ್ ಸಕ್ರಿಯಗೊಳಿಸಲಾಗುತ್ತದೆ. ಇದಾದ ನಂತರ ಗ್ರಾಹಕರು JioFi ಉಪಕರಣವನ್ನು ಸಕ್ರಿಯಗೊಳಿಸಲು ಈಗಾಗಲೇ ಜಾರಿಯಲ್ಲಿರುವ 3 ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು. ಜಿಯೋಫೈ ಡಿವೈಸ್‌ನಲ್ಲಿ ಸಿಮ್ ಸಕ್ರಿಯಗೊಂಡ ಕೆಲವೇ ಸಮಯದಲ್ಲಿ ಪ್ಲಾನ್ ಲಾಭ ನಿಮಗೆ ಸಿಗಲಿದೆ. 

ಇನ್ನು ಆಕ್ಟಿವೇಶನ್ ಸ್ಟೇಟಸ್ ಬಗ್ಗೆ MyJio ಆಪ್‌ನ್ಲಿ ಪರಿಶೀಲಿಸಬಹುದಾಗಿದೆ. ಗ್ರಾಹಕರು ಈ ಕೊಡುಗೆಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಪಡೆಯಬಹುದು.

ರೂ.199 ಅತಿ ಅಗ್ಗದ ಬೆಲೆಯ ಪ್ಲಾನ್ ಆಗಿದೆ

ಜಿಯೋ ಫೈ ನಲ್ಲಿ 199 ರೂ ಪ್ಲಾನ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು, ಇದರಡಿಯಲ್ಲಿ ಪ್ರತಿ ನಿತ್ಯ ನಿತ್ಯ 1.5 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿದ ಗ್ರಾಹಕರು ರೂ.99 ಪಾವತಿಸಿ JioPrime ಮೆಂಬರ್ ಷಿಪ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಇದರಿಂದ ಪ್ರತಿನಿತ್ಯದ ಡೇಟಾ ಜೊತೆಗೆ ಜಿಯೋ ನೆಟ್ವರ್ಕ್‌ಗಳಿಗೆ ಅನಿಯಮಿತ ಕರೆ ಹಾಗೂ ಬೇರೆ ನೆಟ್ವರ್ಕ್ ಗಾಗಿ 1000 ನಿಮಿಷ ಕಾಲಿಂಗ್ ಜೊತೆಗೆ ನಿತ್ಯ 100 ಉಚಿತ SMSಗಳು ಸಿಗಲಿವೆ.

5 ತಿಂಗಳ ಉಚಿತ ಡೇಟಾ ಆಫರ್

ಜಿಯೋ ಫೈನ 249 ರೂ. ಪ್ಲಾನ್‌ನಡಿ 28 ದಿನಗಳ ವ್ಯಾಲಿಡಿಟಿ ಇರುವ ನಿತ್ಯ 2 ಜಿಬಿ ಡೇಟಾ ಸಿಗುತ್ತದೆ. ಹಿಂದಿನ ಪ್ಲಾನ್ ನಂತೆಯೇ ಇತರ ಲಾಭಗಳೂ ಕೂಡ ಇರಲಿವೆ. ರೂ.349 ಬೆಲೆಯ ಪ್ಲಾನ್ ಅಡಿ ನಿತ್ಯ 3ಜಿಬಿ ಡೇಟಾ, 28 ದಿನಗಳ ಅವಧಿಗೆ ಸಿಗಲಿದೆ. ಈ ಪ್ಲಾನ್ ಅಡಿಯಲ್ಲಿ ಜಿಯೋ ಐದು ತಿಂಗಳ ಅವಧಿಗೆ ಅನ್ ಲಿಮಿಟೆಡ್ ಕಾಲಿಂಗ್ ಹಾಗೂ ಡೇಟಾ ತನ್ನ ಬಳಕೆದಾರರಿಗೆ ನೀಡಲಿದೆ.