ರೈತರ ಪ್ರತಿಭಟನೆಯಲ್ಲಿ ಜಿಯೋ ವಿರುದ್ಧ ಘೋಷಣೆ ಕೇಳಿಬಂದಿತ್ತು. ಆದರೆ ಜಿಯೋಗೆ ನೀಡುವ ಹೈಸ್ಪೀಡ್ ಡಾಟಾವನ್ನು ಪ್ರತಿಸ್ಪರ್ಧಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಟ್ರಾಯ್ ಬಿಡುಗಡೆ ಮಾಡಿದ ಮಾಹಿತಿ ಸಾಬೀತು ಪಡಿಸಿದೆ.
ನವದೆಹಲಿ(ಡಿ.16): : ರಿಲಯನ್ಸ್ ಜಿಯೋ ಸೆಕೆಂಡಿಗೆ 20.8 ಮೆಗಾಬಿಟ್ (ಎಮ್‌ಬಿಪಿಎಸ್) ಡೌನ್‌ಲೋಡ್ ವೇಗದ ಸೇವೆಯನ್ನು ನೀಡುವ ಮೂಲಕ 4G ಡೌನ್‌ಲೋಡ್ ವೇಗದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ವೊಡಾಫೋನ್ ಗಿಂತಲೂ ಡಬಲ್ ಡೌನ್‌ಲೋಡ್ ವೇಗವನ್ನು ಹೊಂದಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ತಮ್ಮ ಮೊಬೈಲ್ ವ್ಯವಹಾರವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಆಗಿ ವಿಲೀನಗೊಳಿಸಿದರೂ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇನ್ನೂ ಎರಡೂ ಘಟಕಗಳ ಪ್ರತ್ಯೇಕ ವೇಗ ಡೇಟಾವನ್ನು ಬಿಡುಗಡೆ ಮಾಡಿದೆ.
Jio ರೈತ ವಿರೋಧಿ ಎಂದು ಅಪಪ್ರಚಾರ; ಆರೋಪಕ್ಕೆ ಉತ್ತರಿಸಿದ ಏರ್ ಟೆಲ್, VIL
ಡಿಸೆಂಬರ್ 10 ರಂದು ಟ್ರಾಯ್ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ ನವೆಂಬರ್‌ನಲ್ಲಿ ವೊಡಾಫೋನ್ 9.8 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗವನ್ನುದಾಖಲಿಸಿದೆ. ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 8.8 ಎಮ್‌ಬಿಪಿಎಸ್ ಮತ್ತು 8 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗವನ್ನು ಹೊಂದಿದೆ ಎನ್ನಲಾಗಿದೆ.
ಅಪ್‌ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಮ್‌ಬಿಪಿಎಸ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ. ಐಡಿಯಾ ನಂತರ 5.8 ಎಮ್‌ಬಿಪಿಎಸ್, ಏರ್‌ಟೆಲ್ 4 ಎಮ್‌ಬಿಪಿಎಸ್ ಮತ್ತು ಜಿಯೋ 3.7 ಎಮ್‌ಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿದೆ.
ನವೆಂಬರ್‌ನಲ್ಲಿ 6.5 ಎಮ್‌ಬಿಪಿಎಸ್ ಅಪ್‌ಲೋಡ್ ವೇಗದ ಸೇವೆಯನ್ನು ನೀಡಿದ ವೊಡಾಫೋನ್ ಈ ವಿಭಾಗದಲ್ಲಿ ಇತರರಿಗಿಂತ ಮುಂದಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.
ಡೌನ್‌ಲೋಡ್ ವೇಗವು ಗ್ರಾಹಕರಿಗೆ ವಿಡಿಯೋ ನೋಡಲು, ಆನ್‌ಲೈನ್ ಗೇಮ್ ಆಡಲು ಮತ್ತು ವಿಡಿಯೋ ಮತ್ತು ಆಡಿಯೋ ಗಳನ್ನು ಡೌನ್‌ಲೋಡ್ ಮಾಡಲು ಸಹಾಯ ಮಾಡುತ್ತದೆ. ಅಪ್‌ಲೋಡ್ ವೇಗವು ಚಿತ್ರಗಳು, ವಿಡಿಯೋ ಇತ್ಯಾದಿಗಳನ್ನು ಕಳುಹಿಸಲು ಅಥವಾ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಮಾಡುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 16, 2020, 8:14 PM IST