Jio Diwali Offer : ದೀಪಾವಳಿ ಹಬ್ಬದಲ್ಲಿ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಗ್ರಾಹಕರಿಗೆ ಉಚಿತ ರಿಚಾರ್ಜ್ ಜೊತೆ ಅನೇಕ ಆಫರ್ ನೀಡ್ತಿದೆ.
ದೀಪಾವಳಿ ಹಬ್ಬಕ್ಕೂ ಮುನ್ನ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರು ಬರೋಬ್ಬರಿ 5 ತಿಂಗಳ ಕಾಲ ಉಚಿತ ಸೇವೆ ಪಡೆಯಬಹುದು. ಅಷ್ಟೇ ಅಲ್ಲ, ಲೈವ್ ಟಿವಿ, ಅನಿಯಮಿತ ವೈ-ಫೈ ಹಾಗೂ ಹಲವು ಜನಪ್ರಿಯ OTT ಆ್ಯಪ್ಗಳ ಸಬ್ಸ್ಕ್ರಿಪ್ಷನ್ ಸೌಲಭ್ಯವೂ ಸಿಗ್ತಿದೆ.
ದೀಪಾವಳಿಗೆ ಜಿಯೋ ಆಫರ್
ಜಿಯೋದ ಈ ವಿಶೇಷ ಆಫರ್ ಜಿಯೋ ಹೋಮ್ (JioHome) ಸೇವೆಯ ಅಡಿಯಲ್ಲಿ ಲಭ್ಯವಿದೆ. ಇದರಲ್ಲಿ ಜಿಯೋ ಫೈಬರ್ (JioFiber) ಮತ್ತು ಜಿಯೋ ಏರ್ಫೈಬರ್ (JioAirFiber) ಪ್ಲಾನ್ಗಳು ಸೇರಿವೆ. ಕಂಪನಿಯು ತನ್ನ ಫ್ರೀಡಂ ಆಫರ್ ಅಡಿಯಲ್ಲಿ ಗ್ರಾಹಕರಿಗೆ ಈ ವಿಶೇಷ ಕೊಡುಗೆ ನೀಡುತ್ತಿದೆ. ಸಾಮಾಜಿಕ ಜಾಲತಾಣ Xನಲ್ಲಿ ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿರುವ ಜಿಯೋ, ಕೇವಲ 10 ತಿಂಗಳ ಹಣ ಪಾವತಿಸಿ 15 ತಿಂಗಳವರೆಗೆ JioHome ಸೇವೆ ಪಡೆಯಬಹುದು ಎಂದು ಘೋಷಿಸಿದೆ. ಅಂದರೆ, ಗ್ರಾಹಕರಿಗೆ ಹೆಚ್ಚುವರಿಯಾಗಿ ಯಾವುದೇ ಹಣ ಪಾವತಿಸದೆ 5 ತಿಂಗಳ ಸೇವೆ ಉಚಿತವಾಗಿ ಸಿಗಲಿದೆ.
ಜಿಯೋ ಹೋಮ್ 5 ತಿಂಗಳ ಉಚಿತ ಆಫರ್ ಹೇಗಿದೆ?
ದೀಪಾವಳಿ ಸಂಭ್ರಮದ ಅಂಗವಾಗಿ ಜಿಯೋ ಈ ವಿಶೇಷ ಕೊಡುಗೆ ನೀಡುತ್ತಿದೆ. ಇದರ ಪ್ರಕಾರ, ಗ್ರಾಹಕರು ತಿಂಗಳಿಗೆ 666 ರೂಪಾಯಿಯಂತೆ 10 ತಿಂಗಳ ಜಿಯೋ ಹೋಮ್ ರೀಚಾರ್ಜ್ ಮಾಡಿಸಿದರೆ, ಒಟ್ಟು 15 ತಿಂಗಳವರೆಗೆ ಅನಿಯಮಿತ ಮನರಂಜನೆ ಪಡೆಯಬಹುದು. ಅಂದರೆ, 10 ತಿಂಗಳ ಹಣ ಪಾವತಿಸಿದರೆ ಹೆಚ್ಚುವರಿಯಾಗಿ 5 ತಿಂಗಳ ಸೇವೆ ಉಚಿತವಾಗಿ ಸಿಗಲಿದೆ. ಆದರೆ, ಈ ಜಿಯೋ ಹೋಮ್ ಫ್ರೀಡಂ ಆಫರ್ ಸದ್ಯದ ಮಟ್ಟಿಗೆ ಈಗಾಗಲೇ JioHome ಸೇವೆ ಬಳಸುತ್ತಿರುವ ಗ್ರಾಹಕರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ.
ಈ ಆಫರ್ ಪಡೆಯುವುದು ಹೇಗೆ?
ಈ ವಿಶೇಷ ಆಫರ್ ಪಡೆಯಲು ಅರ್ಹ ಗ್ರಾಹಕರು 8219582195 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ಇನ್ನು ಹೊಸ ಗ್ರಾಹಕರಿಗೆ ಎರಡು ತಿಂಗಳ JioHome ಪ್ಲಾನ್ ಖರೀದಿಸಿದರೆ ಒಂದು ತಿಂಗಳ ಹೆಚ್ಚುವರಿ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಯೋ ಹೋಮ್ ಸೇವೆಯಲ್ಲಿ 15 ಭಾಷೆಗಳಲ್ಲಿ 1,000ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್ಗಳನ್ನು ವೀಕ್ಷಿಸುವ ಅವಕಾಶವಿದೆ. ಇದರ ಜೊತೆಗೆ ಹಲವು OTT ಆ್ಯಪ್ಗಳ ಸೌಲಭ್ಯ ಹಾಗೂ ಅನಿಯಮಿತ ಹೈ-ಸ್ಪೀಡ್ ವೈ-ಫೈ ಸೌಲಭ್ಯವೂ ಲಭ್ಯವಿದೆ.
ಜಿಯೋ ಪ್ರಕಾರ, ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ JioTV+ ಆ್ಯಪ್ ಮೂಲಕ ಒಂದೇ ಜಿಯೋ ಸೆಟ್ಟಾಪ್ ಬಾಕ್ಸ್ ಬಳಸಿ ಮನೆಯ ಎರಡು ಸ್ಮಾರ್ಟ್ ಟಿವಿಗಳಲ್ಲಿ ಮನರಂಜನೆ ಪಡೆಯಬಹುದು. ವಾರ್ಷಿಕ ಪ್ಲಾನ್ ಆಯ್ಕೆ ಮಾಡಿಕೊಂಡರೆ ಜಿಯೋ ಹೋಮ್ ಇನ್ಸ್ಟಾಲೇಷನ್ ಕೂಡ ಉಚಿತವಾಗಿರುತ್ತದೆ. ಈ ಸೆಟಪ್ನಲ್ಲಿ ವೈ-ಫೈ ರೌಟರ್, 4K ಟಿವಿ ಸೆಟ್ಟಾಪ್ ಬಾಕ್ಸ್ ಮತ್ತು ಔಟ್ ಡೋರ್ ಡಿವೈಸ್ ಲಭ್ಯವಿದೆ. ಇನ್ನು ಇತ್ತೀಚೆಗೆ ಜಿಯೋ ಕೇವಲ 15 ರೂಪಾಯಿಯ ಹೊಸ ರೀಚಾರ್ಜ್ ಪ್ಯಾಕ್ ಪರಿಚಯಿಸಿದೆ. ಈ ಪ್ಯಾಕ್ನಲ್ಲಿ 24 ಗಂಟೆಗಳ ಕಾಲ ಅನಿಯಮಿತ 5G ಇಂಟರ್ನೆಟ್ ಸೌಲಭ್ಯ ಸಿಗಲಿದೆ ಎಂದು ವರದಿಯಾಗಿದೆ.
ಇದೇ ವೇಳೆ, ತನ್ನ ವಾರ್ಷಿಕೋತ್ಸವದ ಕೊಡುಗೆಯ ಭಾಗವಾಗಿ ಜಿಯೋ ಮತ್ತೊಂದು ವಿಶೇಷ ಆಫರ್ ನೀಡುತ್ತಿದೆ. ಕೇವಲ 1,499 ರೂಪಾಯಿಗೆ ಹೊಸ ಜಿಯೋ ಭಾರತ್ ಕೀಪ್ಯಾಡ್ ಫೋನ್ ಖರೀದಿಸಿದರೆ ಅದರೊಂದಿಗೆ 6 ತಿಂಗಳ ರೀಚಾರ್ಜ್ ಉಚಿತವಾಗಿ ಸಿಗಲಿದೆ.
ಈ ಕೊಡುಗೆಯಲ್ಲಿ JioBharat A1, B1, B2 ಮತ್ತು B3 ಸರಣಿಯ ಫೋನ್ಗಳು ಸೇರಿವೆ. ಉಚಿತ ರೀಚಾರ್ಜ್ನಲ್ಲಿ ಪ್ರತಿ ತಿಂಗಳು 14GB ಡೇಟಾ (ಪ್ರತಿದಿನ 0.5GB) ಹಾಗೂ ಅನಿಯಮಿತ HD ಕರೆಗಳ ಸೌಲಭ್ಯ ದೊರೆಯಲಿದೆ. ಇದರ ಜೊತೆಗೆ 500ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು, JioPay, JioSaavn, JioHotstar, Safety First ಫೀಚರ್ ಹಾಗೂ 23 ಭಾರತೀಯ ಭಾಷೆಗಳ ಬೆಂಬಲವೂ ಈ ಫೋನ್ಗಳಲ್ಲಿ ಲಭ್ಯವಿದೆ.






