Asianet Suvarna News Asianet Suvarna News

999 ರೂ. ಗೆ ಅಮೆಜಾನ್‌ನಲ್ಲಿ ಲಭ್ಯ ಜಿಯೋ ಭಾರತ್ ಫೀಚರ್ ಫೋನ್: ಮಾರಾಟ ದಿನಾಂಕ, ವೈಶಿಷ್ಟ್ಯತೆ ಹೀಗಿದೆ..

ಹೊಸ Jio ಫೋನ್ ಅನ್ನು ಆಗಸ್ಟ್ 28 ರಿಂದ ಖರೀದಿಸಬಹುದು ಎಂದು ಅಮೆಜಾನ್‌ ಬಹಿರಂಗಪಡಿಸಿದೆ. ಮಾರಾಟವು 12:00PM ಗೆ ಆರಂಭವಾಗುತ್ತದೆ ಹಾಗೂ ಕ್ಲಾಸಿಕ್ ಕಪ್ಪು ಬಣ್ಣದ ಮಾದರಿಯಲ್ಲಿ ಲಭ್ಯವಿರುತ್ತದೆ.

jio bharat feature phone to go on sale in india via amazon check out price sale date and features ash
Author
First Published Aug 25, 2023, 1:26 PM IST

ನವದೆಹಲಿ (ಆಗಸ್ಟ್‌ 25, 2023): ರಿಲಯನ್ಸ್ ಜಿಯೋ ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಹೊಸ ಜಿಯೋ ಭಾರತ್ 4G ಫೋನ್ ಅನ್ನು ಕೇವಲ 999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಇದು ಈಗ ದೇಶದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಅಮೆಜಾನ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಮಾರಾಟವಾಗಲಿದ್ದು, ಈ ಸಂಬಂಧ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. 

ಆಸಕ್ತ ಗ್ರಾಹಕರು ಹೊಸ Jio ಫೋನ್ ಅನ್ನು ಆಗಸ್ಟ್ 28 ರಿಂದ ಖರೀದಿಸಬಹುದು ಎಂದು ಅಮೆಜಾನ್‌ ಬಹಿರಂಗಪಡಿಸಿದೆ. ಮಾರಾಟವು 12:00PM ಗೆ ಆರಂಭವಾಗುತ್ತದೆ ಹಾಗೂ ಕ್ಲಾಸಿಕ್ ಕಪ್ಪು ಬಣ್ಣದ ಮಾದರಿಯಲ್ಲಿ ಲಭ್ಯವಿರುತ್ತದೆ. ಇನ್ನು, ಈ ಫೋನ್‌ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

ಇದನ್ನು ಓದಿ: ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್‌ ನ್ಯೂಸ್‌: 999 ರೂ. ಗೆ ರೀಲಾಂಚ್ ಆಯ್ತು ಮುಖೇಶ್‌ ಅಂಬಾನಿಯ ಜಿಯೋಭಾರತ್ V2 ಫೋನ್

ಜಿಯೋ ಭಾರತ್ ಫೋನ್: ವೈಶಿಷ್ಟ್ಯಗಳು, ವಿಶೇಷಣಗಳು
ಜಿಯೋ ಭಾರತ್ ಫೋನ್ ಅನ್ನು ಕಾರ್ಬನ್‌ ಫೋನ್‌ನೊಂದಿಗೆ ಸಹ ರಚಿಸಲಾಗಿದೆ. ಈ ಹಿನ್ನೆಲೆ, ಇದನ್ನು ಜಿಯೋ ಭಾರತ್ ಕೆ1 ಕಾರ್ಬನ್ (Jio Bharat K1 Karbonn) ಎಂದು ಕರೆಯಲಾಗುತ್ತದೆ. ಇನ್ನು, ಜಿಯೋ ಭಾರತ್ ಫೋನ್ ಕೆಂಪು ಮತ್ತು ಕಪ್ಪು ಮಿಶ್ರಣವನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್‌ ಮುಂಭಾಗವು "ಭಾರತ್" ಬ್ರ್ಯಾಂಡಿಂಗ್ ಅನ್ನು ಒಳಗೊಂಡಿದೆ. ಆದರೆ ಹಿಂಭಾಗವು "ಕಾರ್ಬನ್" ಲೋಗೋವನ್ನು ಹೊಂದಿದೆ. ಹಾಗೂ, ಈ ಫೋನ್ ಹಳೆಯ ಮಾದರಿಯ T9 ಕೀಬೋರ್ಡ್ ಮತ್ತು ಮೇಲ್ಭಾಗದಲ್ಲಿ ಫ್ಲ್ಯಾಷ್‌ಲೈಟ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಕ್ಯಾಮೆರಾ ಕೂಡ ಇದ್ದು, ಬಳಕೆದಾರರು JioCinema ನಲ್ಲಿ ಚಲನಚಿತ್ರಗಳು ಅಥವಾ ಸ್ಪೋರ್ಟ್ಸ್‌ ಪಂದ್ಯಗಳನ್ನು ವೀಕ್ಷಿಸಬಹುದು.

ಇದನ್ನೂ ಓದಿ: Ambani vs Tata ನಡುವೆ ಹೆಚ್ತಿದೆ ಪೈಪೋಟಿ: ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಿರುವ ಬ್ರ್ಯಾಂಡ್‌ಗಳ ಪಟ್ಟಿ ಹೀಗಿದೆ..

ಈ ಫೀಚರ್ ಫೋನ್ 1.77-ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಫೀಚರ್ ಫೋನ್‌ಗೆ ಸಾಕಷ್ಟು ದೊಡ್ಡದಾಗಿದೆ. ಇನ್ನು, ಕಂಪನಿಯು 128GB ವರೆಗಿನ ಬಾಹ್ಯ ಮೈಕ್ರೋ SD ಕಾರ್ಡ್ ಸಪೋರ್ಟ್‌ ಹೊಂದಿದೆ. ದೊಡ್ಡ ಶೇಖರಣಾ ಸಾಮರ್ಥ್ಯ ಇರುವುದರಿಂದ ಜನರು ಮ್ಯೂಸಿಕ್, ವಿಡಿಯೋ, ಫೋಟೋಗಳು ಮತ್ತು ಇತರ ವಿಷಯವನ್ನು ಸಂಗ್ರಹಿಸಲು ಅನುಮತಿಸುತ್ತದೆ. ಹಿಂದಿನ ಕ್ಯಾಮೆರಾ ಮಾಡ್ಯೂಲ್ ಒಂದು ಆಯತಾಕಾರದ ವಿನ್ಯಾಸವನ್ನು ಹೊಂದಿದೆ, ಇದು ಎಲ್ಇಡಿ ಫ್ಲ್ಯಾಶ್‌ನೊಂದಿಗೆ 0.3-ಮೆಗಾಪಿಕ್ಸೆಲ್ (VGA) ಸಂವೇದಕವನ್ನು ಹೊಂದಿದೆ.

ಫ್ಲ್ಯಾಶ್‌ಲೈಟ್‌ ಅನ್ನೂ ಹೊಂದಿರಲಿದ್ದು, 1,000mAh ಬ್ಯಾಟರಿಯನ್ನು ಸಹ ಒಳಗೊಂಡಿದೆ. ಹೊಸ ಜಿಯೋ ಭಾರತ್ ಫೋನ್ ಮೂಲಕ ಜನರು ಪಾವತಿಗಳನ್ನು ಮಾಡಲು ಮತ್ತು ಜಿಯೋ ಅಪ್ಲಿಕೇಶನ್‌ಗಳ ಮೂಲಕ ಚಲನಚಿತ್ರಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ಹಾಗೂ, ಈ ಫೋನ್ WhatsApp ಗೆ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 2023ರ ಭಾರತದ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿ ಹೀಗಿದೆ: ಐಫೋನ್ ಈ ಲಿಸ್ಟ್‌ನಲ್ಲೇ ಇಲ್ಲ!

ಏನು ನೆನಪಿನಲ್ಲಿಟ್ಟುಕೊಳ್ಳಬೇಕು?
ಜಿಯೋ ಭಾರತ್ ಫೋನ್ ಬಳಸುವುದನ್ನು ಮುಂದುವರಿಸಲು, ಬಳಕೆದಾರರು 123 ರೂ. ಗಳ ಸಕ್ರಿಯ ರೀಚಾರ್ಜ್ ಯೋಜನೆಯನ್ನು ಹೊಂದಿರಬೇಕು. ಈ ಯೋಜನೆಯು 28 ದಿನಗಳವರೆಗೆ ವ್ಯಾಪಿಸುತ್ತದೆ ಮತ್ತು ಅನಿಯಮಿತ ಕರೆ, 14GB ಯ 4G ಡೇಟಾ ಮತ್ತು ಎಲ್ಲಾ Jio ಅಪ್ಲಿಕೇಶನ್‌ಗಳಿಗೆ ಪೂರ್ಣ ಪ್ರವೇಶವನ್ನು ಒದಗಿಸುತ್ತದೆ. ಪರ್ಯಾಯವಾಗಿ, ಬಳಕೆದಾರರು ವಾರ್ಷಿಕ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು 1,234 ರೂ. ವೆಚ್ಚದಲ್ಲಿ ಲಭ್ಯವಿದೆ. 

ಇದನ್ನೂ ಓದಿ: ಅಯ್ಯೋ ಶಿವನೇ! ತಾಯಿ ಯಾರಿಗೋ ಮೆಸೇಜ್‌ ಮಾಡ್ತಿದ್ರು ಅಂತ ಕೊಚ್ಚಿ ಕೊಲೆ ಮಾಡ್ದ ಮಗ

Follow Us:
Download App:
  • android
  • ios