ಅಯ್ಯೋ ಶಿವನೇ! ತಾಯಿ ಯಾರಿಗೋ ಮೆಸೇಜ್ ಮಾಡ್ತಿದ್ರು ಅಂತ ಕೊಚ್ಚಿ ಕೊಲೆ ಮಾಡ್ದ ಮಗ
ಬಾಲಕನಿಗೆ ತನ್ನ ತಾಯಿ ಸೋನಾಲಿ ಗೊಗ್ರಾ ನಡವಳಿಕೆ ಬಗ್ಗೆ ಅನುಮಾನವಿತ್ತು ಮತ್ತು ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ರೀತಿ, ತಾಯಿ ಮೊಬೈಲ್‌ನಲ್ಲಿ ಮೆಸೇಜ್ ಮಾಡ್ತಿದ್ರು ಎಂದ ಸಿಟ್ಟಿಗೆದ್ದ ಮಗ ಕೊಚ್ಚಿ ಕೊಲೆ ಮಾಡಿದ್ದಾನೆ.
ಪಾಲ್ಘರ್ (ಆಗಸ್ಟ್ 22, 2023): ಅಮ್ಮ ಮೊಬೈಲ್‌ನಲ್ಲಿ ಯಾರಿಗೋ ಮೆಸೇಜ್ ಮಾಡ್ತಿದ್ರು ಅಂತ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಂದ ಘಟನೆ ನಡೆದಿದೆ. 17 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನು ಕೊಡಲಿಯಿಂದ ಕೊಂದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಸಾಯಿ ಟೌನ್‌ಶಿಪ್‌ನ ಪರೋಲ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಬಾಲಕನಿಗೆ ತನ್ನ ತಾಯಿ ಸೋನಾಲಿ ಗೊಗ್ರಾ (35) ನಡವಳಿಕೆ ಬಗ್ಗೆ ಅನುಮಾನವಿತ್ತು ಮತ್ತು ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಮಾಂಡವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕಾಂಬಳೆ ತಿಳಿಸಿದ್ದಾರೆ. ಹಾಗೆ, ಭಾನುವಾರ ರಾತ್ರಿ ಊಟ ಮಾಡುತ್ತಿದ್ದಾಗ ಆತನ ತಾಯಿ ಮೊಬೈಲ್‌ನಲ್ಲಿ ಯಾರಿಗೋ ಸಂದೇಶ ಕಳುಹಿಸುತ್ತಿರುವುದನ್ನು ಗಮನಿಸಿದ ಬಾಲಕನಿಗೆ ಸಿಟ್ಟು ಬಂತು. ನಂತರ ಕೊಡಲಿಯನ್ನು ಹೊರತೆಗೆದು ತಾಯಿಗೆ ಹೊಡೆದಿದ್ದು, ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ವೇಳೆ ಕುಟುಂಬದ ಇತರ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದೂ ಅವರು ಹೇಳಿದರು.
ಇದನ್ನು ಓದಿ: ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಸರ್ಕಾರಿ ಅಧಿಕಾರಿಯಿಂದ ಹಲವು ಬಾರಿ ರೇಪ್; ಗರ್ಭಪಾತ ಮಾತ್ರೆ ನೀಡಿದ ಪತ್ನಿ!
ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಭಿವಂಡಿಯ ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿ ಹೇಳಿದರು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಆದರೆ ಆರೋಪಿಯನ್ನುಇನ್ನೂ ಬಂಧಿಸಲಾಗಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಏಡ್ಸ್ ರೋಗಿ ಎಂದು ಹೇಳಿ ಮನೆಗೆ ನುಗ್ಗಿದ ಕಾಮುಕನಿಂದ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಂಡ ಮಹಿಳೆ
ಇನ್ನೊಂದೆಡೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಸಾಕು ನಾಯಿಗಳ ನಡುವಿನ ಕಾದಾಟವು ಅವುಗಳ ಮಾಲೀಕರ ನಡುವೆ ಜಗಳವಾಗಿ ಎರಡು ಸಾವಿನೊಂದಿಗೆ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ರಾಜಪಾಲ್ ಸಿಂಗ್ ರಾಜಾವತ್ ತನ್ನ ಬಾಲ್ಕನಿಯಿಂದ ನೆರೆಹೊರೆಯವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟಿದ್ದು, ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಂಚಿಸಿ ಕೋಟಿ ಕೋಟಿ ಲೂಟಿ ಹೊಡೆದ ‘ಹಾರ್ಟ್ ಸ್ಪೆಷಲಿಸ್ಟ್’!