ರಿಲಯನ್ಸ್ ಜಿಯೋ ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊಸ ಜಿಯೋ ಭಾರತ್ 4ಜಿ ಫೋನ್ ಖರೀದಿಸುವ ಗ್ರಾಹಕರಿಗೆ 6 ತಿಂಗಳ ಉಚಿತ ರಿಚಾರ್ಜ್ ಆಫರ್ ಘೋಷಿಸಿದೆ. 1,499 ರೂ. ಬೆಲೆಯ ಈ ಫೋನ್ ಖರೀದಿಸಿ ಮೊದಲ 123 ರೂ. ರಿಚಾರ್ಜ್ ಮಾಡಿದರೆ, 168 ದಿನಗಳವರೆಗೆ ಉಚಿತ ಕರೆ ಮತ್ತು ಡೇಟಾ ಸಿಗಲಿದೆ. ಈ ಕೊಡುಗೆಯು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 20ರವರೆಗೆ ಲಭ್ಯವಿರುತ್ತದೆ.
ಹೊಸ ಫೋನ್ ಖರೀದಿ ಮಾಡುತ್ತಿದ್ದೀರಾ? ಆದರೆ ಆರು ತಿಂಗಳ ರಿಚಾರ್ಜ್ ಉಚಿತವಾಗಿ ಪಡೆದುಕೊಳ್ಳುವ ಅವಕಾಶವಿದೆ. ಹೊಸ ಫೋನ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವ ರಿಲಯನ್ಸ್ ಜಿಯೋ ಬಳಕೆದಾರರಿಗೆ ವಿಶೇಷ ಆಫರ್ ಪ್ರಕಟಿಸಿದೆ. ಜಿಯೋ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 2026ರ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 20ರ ವರೆಗೂ ಈ ಆಫರ್ ಲಭ್ಯವಾಗಲಿದೆ. ಆದರೆ ಇದು ಹೊಸ ಜಿಯೋ ಭಾರತ್ 4ಜಿ ಫೋನ್ ಮಾಡುವವರಿಗೆ ಮಾತ್ರ ಆಫರ್ ಸಿಗಲಿದೆ. ಅಂದರೆ ಜಿಯೋ ಕಂಪನಿ ಆಫರ್ ನೀಡಿದ ಫೋನ್ ಖರೀದಿ ಮಾಡಿದವರಿಗೆ ಮಾತ್ರ ಈ ಆಫರ್ ಅನ್ವಯ ಆಗಲಿದೆ.
ಜಿಯೋ ಹೊಸ ಫೋನ್ ಖರೀದಿಸುವ ಮುನ್ನ ಈ ಬಂಪರ್ ಆಫರ್ ತಿಳಿಯಿರಿ!
ಅರ್ಹ ಗ್ರಾಹಕರಿಗೆ ಆರು ರಿಚಾರ್ಜ್‌ಗಳು ಫ್ರೀಯಾಗಿ ಸಿಗಲಿದೆ. ಒಮ್ಮೆ 28 ದಿನಗಳ ವ್ಯಾಲಿಟಿಡಿ ನೀಡಲಿದೆ. ಪ್ರತಿ ಸೈಕಿಲ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 0.5 ಜಿಬಿ ಹೈಸ್ಪೀಡ್ ಡೇಟಾ ಸೇರಿದಂತೆ 14ಜಿಬಿ, 300 ಫ್ರೀ ಎಸ್‌ಎಂಎಸ್ ಸಿಗಲಿದೆ. ಆದರೆ ಐಎಸ್‌ಡಿ ಕರೆಗಳು, ಇಂಟರ್ ನ್ಯಾಷನ್ ಮೆಸೇಜ್‌ಗಳ ಸೌಲಭ್ಯ ಸಿಗುವುದಿಲ್ಲ. ಒಟ್ಟು ಆರು ಬಾರಿ ಒಟ್ಟು 168 ದಿನಗಳ ವ್ಯಾಲಿಟಿಡಿ, 84ಜಿಬಿ ಡೇಟಾ, 1,800 ಎಸ್‌ಎಎಸ್‌ಗಳು ಲಭ್ಯವಾಗಲಿದೆ.
ಆರು ರಿಚಾರ್ಜ್‌ಗಳು ಉಚಿತವಾಗಿ ಸಿಗಲಿದೆ
ಈ ಎಲ್ಲಾ ಪ್ರಯೋಜನಗಳು ಒಟ್ಟಿಗೆ ಸಿಗೋದಿಲ್ಲ. ಜಿಯೋ ನಿಯಮಗಳ ಅನ್ವಯ, ಕಸ್ಟಮರ್ ಐಎಂಇಎ ಮೊಬೈಲ್ ನಂಬರ್ ಲಿಂಕ್ ನಿರಂತರವಾಗಿ ರಿಚಾರ್ಜ ಸರ್ಕಲ್ ನೊಂದಿಗೆ ಮುಂದುವರಿಸಿದರೆ ಮುಂದಿನ ರಿಚಾರ್ಜ್ ಸೌಲಭ್ಯ ಸಿಗಲಿದೆ. ಅಷ್ಟು ಕರೆ, ಎಸ್‌ಎಂಎಸ್ ಬಳಕೆ ಮಾಡಿಕೊಳ್ಳದಿದ್ದರೆ ಉಳಿಕೆ ಡೇಟಾ ಸೇರಿದಂತೆ ಎಲ್ಲವೂ ಕ್ಯಾರಿ ಫಾರ್ವಡ್ ಆಗಲಿದೆ. ಈ ಯೋಜನೆಯ ಪ್ರಮುಖ ಷರತ್ತು ಎಂದರೆ, ಜಿಯೋ ಸಿಮ್ ಅನ್ನು ಸ್ಲಾಟ್ 01 ರಲ್ಲಿಯೇ ಉಳಿಸಬೇಕು. ಆರು ಸೈಕಿಲ್ ಅವಧಿಯಲ್ಲಿ ಐಎಂಇಐ, ಮೊಬೈಲ್ ನಂಬರ್ ಲಿಂಕ್ ಕೂಡ ಮುಂದುವರಿಯಬೇಕು.
1,499 ರೂಪಾಯಿಗೆ ಜಿಯೋ ಭಾರತ್ ಮೊಬೈಲ್ ಖರೀದಿಸಿದರೆ, 6 ತಿಂಗಳ ಆಫರ್ ಅನ್ವಯ ಆಗಲಿದೆ. 6 ತಿಂಗಳ ಅವಧಿಗೆ 14 ಜಿಬಿ ಡೇಟಾ, ಅನಿಯಮಿತ ಎಚ್‌ಡಿ ಕರೆಗಳು ಕೂಡ ಇದರಲ್ಲಿದೆ. ಉಳಿದಂತೆ ಜಿಯೋ ಭಾರತ್ ಎ1, ಬಿ1, ಬಿ2 ಮತ್ತು ಬಿ3 ಫೋನ ಖರೀದಿಸಿದರೆ ಮಾತ್ರ ಯೋಜನೆಗೆ ಅರ್ಹರಾಗಲಿದ್ದಾರೆ. ಈ ಆರು ತಿಂಗಳ ಪ್ರಯೋಜನಗಳನ್ನು ಅನ್‌ಲಾಕ್ ಮಾಡಲು 123 ರೂಪಾಯಿ ಕಡ್ಡಾಯವಾಗಿ ಮೊದಲ ರಿಚಾರ್ಜ್ ಮಾಡಬೇಕಿದೆ.


