Ace 3 Heera Feature Phone : ಬಜೆಟ್ ಫ್ರೆಂಡ್ಲಿ ಫೀಚರ್ ಫೋನ್ ಬಳಸುವವರ ಸಂಖ್ಯೆ ಈಗ್ಲೂ ಇದೆ. ನೀವೂ ಇಂಥ ಫೋನ್ ಹುಡುಕ್ತಿದ್ದರೆ ಮಾರ್ಕೆಟ್ ಗೆ ಬಂದ ಹೊಸ ಫೋನ್ ಟ್ರೈ ಮಾಡ್ಬಹುದು.
ಐಟೆಲ್ (itel ) ತನ್ನ ಹೊಸ ಫೀಚರ್ ಫೋನ್, ಏಸ್ 3 ಹೀರಾ (Ace 3 Heera) ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿ ಅತಿ ಕಡಿಮೆ ಬೆಲೆಗೆ ಈ ಮೊಬೈಲ್ ನೀಡ್ತಿದೆ. ನೀವು ಸಾವಿರ ರೂಪಾಯಿ ಒಳಗೆ ಈ ಮೊಬೈಲ್ ಖರೀದಿ ಮಾಡ್ಬಹುದು. ಫೋನ್ ಫೀಚರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಏಸ್ 3 ಹೀರಾ ಫೀಚರ್
ಏಸ್ 3 ಹೀರಾ ಫೋನ್ ಬಜೆಟ್ ಫೀಚರ್ ಫೋನ್. ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ನೀಡುವ ಭಾರತದ ಮೊದಲ ಬ್ರ್ಯಾಂಡ್ ಎಂದು ಹೇಳಿಕೊಂಡಿದೆ. ಫೀಚರ್ ಫೋನ್ಗಳನ್ನು ಚಾರ್ಜ್ ಮಾಡಲು ಪ್ರತ್ಯೇಕ ಮೈಕ್ರೋ-ಯುಎಸ್ಬಿ ಕೇಬಲ್ನ ಅಗತ್ಯ ಇಲ್ಲ. ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನಂತೆಯೇ ಅದೇ ಟೈಪ್-ಸಿ ಕೇಬಲ್ ಬಳಸಿ ಫೋನ್ ಚಾರ್ಜ್ ಮಾಡಬಹುದು. ಫೋನ್ ನೀಲಿ, ನೇರಳೆ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ದೇಶಾದ್ಯಂತ ಚಿಲ್ಲರೆ ಅಂಗಡಿಗಳಲ್ಲಿ ಫೋನ್ ಸಿಗಲಿದೆ.
ಐಟೆಲ್ ಏಸ್ 3 ಹೀರಾ 1,000mAh ಬ್ಯಾಟರಿಯನ್ನು ಹೊಂದಿದೆ. ಕಂಪನಿಯು ಬ್ಯಾಟರಿ ಬಳಕೆಯನ್ನು ಉತ್ತಮವಾಗಿ ನಿರ್ವಹಿಸುವ AI-ಆಧಾರಿತ ಬ್ಯಾಟರಿ ಆಪ್ಟಿಮೈಸೇಶನ್ ವೈಶಿಷ್ಟ್ಯವನ್ನು ಸಹ ಸೇರಿಸಿದೆ. ಈ ಫೋನ್ ಸೂಪರ್ ಬ್ಯಾಟರಿ ಮೋಡ್ ಸಹ ಹೊಂದಿದೆ.
ಫೋನ್ ಬ್ಲೂಟೂತ್ ಬೆಂಬಲವನ್ನು ಹೊಂದಿದೆ. ಇದು ವೈರ್ಲೆಸ್ ಇಯರ್ಫೋನ್ಗಳು ಮತ್ತು ಸ್ಪೀಕರ್ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ವೈರ್ಲೆಸ್ ಎಫ್ಎಂ ರೇಡಿಯೋ ಸಹ ಲಭ್ಯವಿದೆ. ಇದು ವೈರ್ಡ್ ಇಯರ್ಫೋನ್ಗಳ ಅಗತ್ಯವನ್ನು ನಿವಾರಿಸುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಎಫ್ಎಂ ಕಾರ್ಯಕ್ರಮಗಳನ್ನು ಸಹ ರೆಕಾರ್ಡ್ ಮಾಡಬಹುದು. ಇದು 32 ಜಿಬಿ ವರೆಗಿನ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
ಬೆಲೆ
ಐಟೆಲ್ ಏಸ್ 3 ಹೀರಾ ಬೆಲೆ 949 ರೂಪಾಯಿ. ಕಂಪನಿಯು ಈ ಫೀಚರ್ ಫೋನ್ನಲ್ಲಿ ಒಂದು ವರ್ಷದ ಬದಲಿ ವಾರಂಟಿಯನ್ನು ಸಹ ನೀಡುತ್ತಿದೆ. ಟೈಪ್-ಸಿ ಚಾರ್ಜಿಂಗ್, ದೀರ್ಘ ಬ್ಯಾಟರಿ ಬಾಳಿಕೆ, ಬ್ಲೂಟೂತ್ ಮತ್ತು ವೈರ್ಲೆಸ್ ಎಫ್ಎಂನಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಫೀಚರ್ ಫೋನ್ ಹುಡುಕ್ತಿದ್ದರೆ ಇದು ಬೆಸ್ಟ್ ಆಯ್ಕೆ.


