Asianet Suvarna News Asianet Suvarna News

ಆ್ಯಪಲ್‌ ಫೋನ್‌ ಪ್ರಿಯರಿಗೆ ಸಿಹಿ ಸುದ್ದಿ: iPhone 15 ರಿಲೀಸ್‌ ಡೇಟ್‌ ಬಹಿರಂಗ; ಹೊಸ ಫೋನ್‌ನಲ್ಲಿರಲಿದೆ ಈ ಫೀಚರ್ಸ್‌!

ಟೆಕ್ ದೈತ್ಯ ಸಂಸ್ಥೆ ಆ್ಯಪಲ್‌, ಸೆಪ್ಟೆಂಬರ್ 13 ರಂದು iPhone 15 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಬಹುದು, ಸೆಪ್ಟೆಂಬರ್ 15 ರಂದು ಪ್ರೀ ಆರ್ಡರ್‌ಗಳು ಆರಂಭವಾಗುತ್ತದೆ. ಹಾಗೆ, ಸೆಪ್ಟೆಂಬರ್ 22 ರಂದು ಸ್ಟೋರ್‌ಗಳಲ್ಲಿ ದೊರೆಯಲಿದೆ ಎಂದು ಹೇಳಲಾಗ್ತಿದೆ. 

iphone 15 launch date revealed apple s upcoming phone to be launched on this day ash
Author
First Published Aug 4, 2023, 6:21 PM IST

ನವದೆಹಲಿ (ಆಗಸ್ಟ್‌ 4, 2023): ಆ್ಯಪಲ್‌ ಐಫೋನ್‌ ಪ್ರಿಯರು ದೇಶ ಸೇರಿ ಜಗತ್ತಿನಾದ್ಯಂತ ಹೆಚ್ಚಿನ ಜನಸಂಖ್ಯೆಯೇ ಇದೆ. ಬೆಲೆ ಹೆಚ್ಚಾದರೂ ಹೊಸ ಫೋನ್‌ ಕೊಂಡುಕೊಳ್ಳೋಕೆ ಮುಗಿಬೀಳ್ತಿರ್ತಾರೆ. ಫೋನ್‌ ಬಿಡುಗಡೆಯಾದ ದಿನವೇ ಕೊಳ್ಳೋರ ಸಂಖ್ಯೆಯೂ ಬಹಳಷ್ಟಿದೆ. ಇಂತಹ ಐಫೋನ್‌ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಇತ್ತೀಚಿನ ವದಂತಿಗಳ ಪ್ರಕಾರ, ಆ್ಯಪಲ್‌ ಸೆಪ್ಟೆಂಬರ್ ಮೂರನೇ ವಾರದಲ್ಲಿ ಹೊಸ ಫೋನ್‌ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವದಂತಿಗಳು ಹೇಳುತ್ತಿದೆ.

ಆ ಸಮಯದಲ್ಲಿ ರಜೆ ತೆಗೆದುಕೊಳ್ಳದಂತೆ ಉದ್ಯೋಗಿಗಳಿಗೆ ಸಲಹೆ ನೀಡಲಾಗಿದೆ ಎಂದು 9to5Mac ವರದಿ ಸೂಚಿಸುತ್ತದೆ. ಹಾಗೆ, ಟೆಕ್ ಉದ್ಯಮದ ಮೂಲಗಳು ಬಹುನಿರೀಕ್ಷಿತ iPhone 15 ಸರಣಿಯ ಬಿಡುಗಡೆ ದಿನಾಂಕವನ್ನು ಲೀಕ್‌ ಮಾಡಿದ್ದಾರೆ ಎಂದೂ ಈ ವರದಿ ಹೇಳುತ್ತದೆ. ಇವರ ಪ್ರಕಾರ, ಮೊಬೈಲ್ ಕ್ಯಾರಿಯರ್‌ಗಳು ತಮ್ಮ ಉದ್ಯೋಗಿಗಳಿಗೆ ಸೆಪ್ಟೆಂಬರ್ 13 ರಂದು ಯಾವುದೇ ಕಾರಣಕ್ಕೆ  ರಜೆ ತೆಗೆದುಕೊಳ್ಳದಂತೆ ಸಲಹೆ ನೀಡುತ್ತಿದ್ದಾರೆ. ಈ ಮೂಲಕ ಪ್ರಮುಖ ಸ್ಮಾರ್ಟ್‌ಫೋನ್ ಪ್ರಕಟಣೆಯ ಸುಳಿವು ನೀಡಿದ್ದಾರೆ. 

ಇದನ್ನು ಓದಿ: ಭಾರತದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ ಗ್ರೂಪ್‌: ರಾಜ್ಯದಲ್ಲೇ ಐಫೋನ್‌ 15 ಉತ್ಪಾದನೆ!

ಈ ದಿನ ಯಾವ ಬ್ರ್ಯಾಂಡ್‌ನ ಈವೆಂಟ್‌ ಇರುತ್ತದೆ ಅಥವಾ ಯಾವ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತದೆ ಎಂಬುದು ಇನ್ನೂ ಬಹಿರಂಗವಾಗದಿದ್ದರೂ, ಆ್ಯಪಲ್‌ ತನ್ನ ಇತ್ತೀಚಿನ ಐಫೋನ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಲಾಂಛ್‌ ಮಾಡುವ ಇತಿಹಾಸವನ್ನು ಹೊಂದಿದೆ. ಈ ಹಿನ್ನೆಲೆ ಟೆಕ್ ದೈತ್ಯ ಸಂಸ್ಥೆ ಆ್ಯಪಲ್‌, ಸೆಪ್ಟೆಂಬರ್ 13 ರಂದು  iPhone 15 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದರೆ, ಸೆಪ್ಟೆಂಬರ್ 15 ರಂದು ಪ್ರೀ ಆರ್ಡರ್‌ಗಳು ಆರಂಭವಾಗುತ್ತದೆ. ಹಾಗೆ, ಸೆಪ್ಟೆಂಬರ್ 22 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಗ್ರಾಹಕರ ಕೈ ಸೇರಬಹುದು ಎಂದೂ 9To5Mac ವರದಿ ಮಾಡಿದೆ.

ಇದೇ ರೀತಿ, iPhone 14 ಗಾಗಿ ಮುಂಗಡ-ಆರ್ಡರ್‌ಗಳು ಕಳೆದ ವರ್ಷ ಸೆಪ್ಟೆಂಬರ್ 9 ರಂದು ಪ್ರಾರಂಭವಾಯಿತು. ಒಂದು ವಾರದ ನಂತರ ಸೆಪ್ಟೆಂಬರ್ 16 ರಂದು ಸ್ಟೋರ್‌ಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿತ್ತು. ಇನ್ನು, ಐಫೋನ್‌ 15ನಲ್ಲಿ ಏನೆಲ್ಲ ಹೊಸ ವೈಶಿಷ್ಟ್ಯಗಳು ಅಥವಾ ಫೀಚರ್ಸ್‌ ಇರುತ್ತದೆ ಎಂದೂ ಊಹೆ ಮಾಡಲಾಗ್ತಿದೆ. 

ಇದನ್ನೂ ಓದಿ: Bengaluru Airport: ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ 2 ಐಫೋನ್‌ ಕದ್ದ ಕೆಂಪೇಗೌಡ ಏರ್‌ಪೋರ್ಟ್ ಸಿಬ್ಬಂದಿ

iPhone 15 ಸ್ವಲ್ಪ ಕರ್ವ್‌ ಆಗಿರುವ ಎಡ್ಜ್‌ ಮತ್ತು ಡಿಸ್‌ಪ್ಲೇಯ ಸುತ್ತಲೂ ತೆಳುವಾದ ಬೆಜೆಲ್‌ಗಳೊಂದಿಗೆ ಹೊಸ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 4 ಮಾದರಿಯ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಈ ಎಲ್ಲ ಸ್ಮಾರ್ಟ್‌ಫೋನ್‌ಗಳು ಲೈಟ್ನಿಂಗ್ ಬದಲಿಗೆ ಡೈನಾಮಿಕ್ ಐಲ್ಯಾಂಡ್ ಮತ್ತು USB-C ಅನ್ನು ಒಳಗೊಂಡಿರುತ್ತವೆ. ಹಾಗೂ, ಪ್ರೋ ಮಾದರಿಗಳಿಗಾಗಿ, ಐಫೋನ್ ತಯಾರಕರು ಸ್ಟೇನ್‌ಲೆಸ್ ಸ್ಟೀಲ್ ಫ್ರೇಮ್ ಬದಲು ಟೈಟಾನಿಯಂ ಫ್ರೇಮ್‌ಗೆ ಬದಲಾಯಿಸಲಿದ್ದಾರೆ ಎಂದೂ ವರದಿಗಳು ಹೇಳುತ್ತಿವೆ.

ಐಫೋನ್ 15 ಮತ್ತು 15 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಐಫೋನ್ 14 ಪ್ರೋನಲ್ಲಿರುವಂತೆ A16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಬಹುದು. ಮತ್ತೊಂದೆಡೆ, iPhone 15 Pro ಮತ್ತು 15 Pro Max ಮಾದರಿಗಳು ಹೊಸ A17 ಚಿಪ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. "ವಿಶೇಷವಾಗಿ ದೊಡ್ಡ ಪ್ರೋ ಮಾದರಿಯಲ್ಲಿ, ಉತ್ತಮ ಆಪ್ಟಿಕಲ್ ಜೂಮ್‌ಗಾಗಿ ಆ್ಯಪಲ್‌ ಹೊಸ ಪೆರಿಸ್ಕೋಪ್ ಲೆನ್ಸ್ ಅನ್ನು ಸೇರಿಸುತ್ತದೆ" ಎಂದು ವರದಿ ಹೇಳಿದೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

ಅಲ್ಲದೆ, ಪ್ರಸ್ತುತ ಪೀಳಿಗೆಗೆ ಹೋಲಿಸಿದರೆ ಹೊಸ ಐಫೋನ್‌ಗಳ ಬೆಲೆಗಳು 200 ಡಾಲರ್‌ವರೆಗೆ ಹೆಚ್ಚಾಗಬಹುದು (ಅಂದರೆ ಅಮದಾಜು 1 ಲಕ್ಷ 60 ಸಾವಿರ ರೂ ) ಗೂ ಹೆಚ್ಚು. ಮುಂಬರುವ ಪ್ರೋ ಸ್ಮಾರ್ಟ್‌ಫೋನ್ ಮಾದರಿಗಳು ಇತ್ತೀಚಿನ Wi-Fi 6E ತಂತ್ರಜ್ಞಾನವನ್ನು ಹೊಂದಿದ್ದು, ಹೆಚ್ಚಿನ ವೇಗದ ವೈರ್‌ಲೆಸ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ ಎಂದು ಈ ಮೊದಲೇ ವರದಿಯಾಗಿತ್ತು.  

ಇದನ್ನೂ ಓದಿ: ಆಪಲ್ ಐಫೋನ್ ಬಳಕೆದಾರರಿಗೆ ಹೆಚ್ಚಿನ ಅಪಾಯ: ಕೇಂದ್ರ ಸರ್ಕಾರ ಎಚ್ಚರಿಕೆ; ಅಪಾಯ ತಪ್ಪಿಸಲು ಹೀಗೆ ಮಾಡಿ..

Follow Us:
Download App:
  • android
  • ios