ವಿಜಯ್ ಸೇಲ್ಸ್‌ನಲ್ಲಿ ಐಫೋನ್ 16 ಪ್ರೊ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ. 128 ಜಿಬಿ ಸ್ಟೋರೇಜ್ ಫೋನ್ ಅನ್ನು 1,09,500 ರೂಪಾಯಿಗೆ ಖರೀದಿಸಬಹುದು, ಇದರ ಮೂಲ ಬೆಲೆ 1,19,900 ರೂಪಾಯಿ. ಐಸಿಐಸಿಐ, ಎಸ್ ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ ಹೆಚ್ಚುವರಿ 3,000 ರೂಪಾಯಿ, ಹೆಚ್ ಡಿಎಫ್ ಸಿ ಕಾರ್ಡ್‌ಗೆ 4,500 ರೂಪಾಯಿ ರಿಯಾಯಿತಿ ಇದೆ. ಇದು 6.3-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ, A18 Pro ಬಯೋನಿಕ್ ಚಿಪ್‌ಸೆಟ್ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.

ಐಫೋನ್ 16 ಪ್ರೊ (iPhone 16 Pro) ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ ಇದೆ. ಐ ಫೋನ್ 16 ಪ್ರೋ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಾ ಇದೆ. ಮೂಲ ಬೆಲೆಗಿಂತ 16 ಸಾವಿರ ರೂಪಾಯಿ ಕಡಿಮೆ ಬೆಲೆಗೆ ನೀವು ಐಫೋನ್ 16 ಪ್ರೋ ಖರೀದಿ ಮಾಡಬಹುದು. ಅಮೆಜಾನ್ (Amazon) ಅಥವಾ ಪ್ಲಿಪ್ಕಾರ್ಟ್ (Flipkart) ನಲ್ಲಿ ಅಲ್ಲ ಈ ಬಾರಿ ವಿಜಯ ಸೇಲ್ಸ್ (Vijay Sales) ನಲ್ಲಿ ಕಡಿಮೆ ಬೆಲೆಗೆ ಐಫೋನ್ 16 ಪ್ರೋ ಖರೀದಿ ಮಾಡ್ಬಹುದು

ಎಷ್ಟು ಕಡಿಮೆ ಬೆಲೆಗೆ ಸಿಗ್ತಿದೆ ಐ ಫೋನ್ 16 ಪ್ರೋ? : ವಿಜಯ್ ಸೇಲ್ ನಲ್ಲಿ ನೀವು ಐಫೋನ್ 16 ಪ್ರೋ ಖರೀದಿ ಮಾಡ್ತಿದ್ದರೆ ನಿಮಗೆ ಶೇಕಡಾ 9ರಷ್ಟು ರಿಯಾಯಿತಿ ಸಿಗಲಿದೆ. ಐಫೋನ್ 16 ಪ್ರೊ ಖರೀದಿಯ ಮೇಲೆ 13,000 ರೂಪಾಯಿಗಳ ಫ್ಲಾಟ್ ರಿಯಾಯಿತಿ ಸಿಗ್ತಿದೆ. ಇದಲ್ಲದೆ, 3,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಒಟ್ಟಾರೆ ಐಫೋನ್ 16 ಪ್ರೊ ನಿಮಗೆ 16,000 ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಸಿಗ್ತಿದೆ. ಐ ಫೋನ್ 16 ಪ್ರೋ 128 ಜಿಬಿ ಸ್ಟೋರೇಜ್ ಫೋನನ್ನು ವೆಬ್ ಸೈಟ್ ಮೂಲಕ ನೀವು 1,09,500 ರೂಪಾಯಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್ಫೋನ್ ಮೂಲ ಬೆಲೆ 1, 19,900 ರೂಪಾಯಿ. 

ಮಾರ್ಚ್‌ 11ಕ್ಕೆ ಬರ್ತಿದೆ iQOO Neo 10R! ಏನೇನು ಫೀಚರ್ಸ್, ಬೆಲೆ ಎಷ್ಟು ಅಂತಾ ನೋಡಿ

ನೀವು ಕೆಲ ಬ್ಯಾಂಕ್ ಕಾರ್ಡ್ ಮೂಲಕ ಈ ಮೊಬೈಲ್ ಖರೀದಿ ಮಾಡ್ತಿದ್ರೆ ಹೆಚ್ಚುವರಿ ಆಫರ್ ನಿಮಗೆ ಸಿಗಲಿದೆ. ಗ್ರಾಹಕರು ಐಸಿಐಸಿಐ ಮತ್ತು ಎಸ್ ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಐ ಫೋನ್ 16 ಪ್ರೋ ಖರೀದಿ ಮಾಡಿದ್ರೆ ಹೆಚ್ಚುವರಿ 3 ಸಾವಿರ ರೂಪಾಯಿ ನಿಮಗೆ ರಿಯಾಯಿತಿ ಸಿಗಲಿದೆ. ನೀವು ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದ್ರೆ ನಿಮಗೆ 4500 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಬರೀ 128 ಜಿಬಿ ಫೋನ್ ಗೆ ಮಾತ್ರವಲ್ಲ ಕಂಪನಿ 256 ಜಿಬಿ ಮತ್ತು 512 ಜಿಬಿ ಸ್ಟೋರೇಜ್ ಫೋನ್ ಗೂ ಆಫರ್ ನೀಡ್ತಾ ಇದೆ. 

ಐಫೋನ್ 16 ಪ್ರೊ ವೈಶಿಷ್ಟ್ಯ ಏನು? : ಐಫೋನ್ 16 ಪ್ರೊ ಸಾಕಷ್ಟು ವೈಶಿಷ್ಟ್ಯವನ್ನು ಹೊಂದಿದೆ. ಈ ಪ್ರೀಮಿಯಂ ಐಫೋನ್ 6.3-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಐಫೋನ್ 120Hz ಪ್ರೊ ಮೋಷನ್ ತಂತ್ರಜ್ಞಾನದೊಂದಿಗೆ ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇಯನ್ನು ಹೊಂದಿದೆ. A18 Pro ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಬ್ಯಾಟರಿ ಕೂಡ ಸಾಕಷ್ಟು ದೊಡ್ಡದಾಗಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ ದೀರ್ಘಕಾಲದವರೆಗೆ ಬಳಸಬಹುದು.

ಉಚಿತ ಡೇಟಾ, ಕಾಲ್, ಒಟಿಟಿ; ಇಲ್ಲಿದೆ 189 ರೂನಿಂದ ಆರಂಭಗೊಳ್ಳುವ ಟಾಪ್ 5 ಜಿಯೋ

ಈ ಆಪಲ್ ಐಫೋನ್ 16 ಪ್ರೊ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಫೋನ್ 48MP ಫ್ಯೂಷನ್ ಕ್ಯಾಮೆರಾ, 48MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 12MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಅನ್ನು ಸಪೋರ್ಟ್ ಮಾಡುತ್ತೆ. ಆಪಲ್‌ನ ಈ ಐಫೋನ್ 12MP ಸೆಲ್ಫಿ ಕ್ಯಾಮೆರಾದೊಂದಿಗೆ ಲಭ್ಯವಿದೆ. ಇದು iOS 18 ಗೆ ಬೆಂಬಲ ನೀಡುತ್ತೆ. ಹೆಚ್ಚುವರಿಯಾಗಿ, ಇದು ಕ್ಯಾಪ್ಚರ್ ಬಟನ್, ಆಪಲ್ ಇಂಟೆಲಿಜೆನ್ಸ್‌ನಂತಹ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ.