ಉಚಿತ ಡೇಟಾ, ಕಾಲ್, ಒಟಿಟಿ; ಇಲ್ಲಿದೆ 189 ರೂನಿಂದ ಆರಂಭಗೊಳ್ಳುವ ಟಾಪ್ 5 ಜಿಯೋ ಪ್ಲಾನ್
ಉಚಿತ ಡೇಟಾ, ಅನ್‌ಲಿಮಿಟೆಡ್ ಕಾಲ್, ಫ್ರೀ ಒಟಿಟಿ ಸಬ್‌ಸ್ಕ್ರಪ್ರಶನ್ ಸೇರಿದಂತೆ ಹಲವು ಸೌಲಭ್ಯ ಒದಗಿಸುವ ಟಾಪ್ 5 ಜಿಯೋ ಪ್ಲಾನ್ ಯಾವುದು? ಕೇವಲ 189 ರೂನಿಂದ ಆರಂಭಗೊಳ್ಳುವ ಈ ಪ್ಲಾನ್‌ನಲ್ಲಿ ಏನೆಲ್ಲಾ ಉಚಿತ?

ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು ಪ್ಲಾನ್ ನೀಡುತ್ತಿದೆ. ಇದೀಗ ಗ್ರಾಹಕರ ಸಂಖ್ಯೆ ಹೆಚ್ಚಿಸಲು ಜಿಯೋ ಪ್ಲಾನ್ ಮಾಡುತ್ತಿದೆ. ವಿಶೇಷ ಅಂದರೆ ಉಚಿತ ಡೇಟಾ, ಅನ್‌ಲಿಮಿಟೆಡ್ ಕಾಲ್, ಉಚಿತ ಒಟಿಟಿ ಸಬ್‌ಸ್ಕ್ರಿಪ್ಶನ್, ಉಚಿತ ಎಸ್ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ. ವಿಶೇಷ ಅಂದರೆ ಈ ಪ್ಲಾನ್ ಆರಂಭಗೊಳ್ಳುತ್ತಿರುವದು ಕೇವಲ 189 ರೂಪಾಯಿಯಿಂದ. ಜೊತೆಗೆ ಒಂದು ತಿಂಗಳ ವ್ಯಾಲಿಡಿಟಿ ಇರಲಿದೆ.
ಜಿಯೋ 189 ರೂಪಾಯಿ ಪ್ಲಾನ್
ಇದು ಬಜೆಟ್ ಫ್ರೆಂಡ್ಲಿ ಪ್ಲಾನ್. ಈ ಪ್ಲಾನ್ ರೀಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಇರಲಿದೆ. ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯ ಸಿಗಲಿದೆ. ಇನ್ನು ಜಯೋ ಆ್ಯಪ್ ಆ್ಯಕ್ಸೆಸ್ ಸಿಗಲಿದೆ. ಜೊತೆಗೆ 2ಜಬಿ ಡೇಟಾ ಉಚಿತವಾಗಿ ಸಿಗಲಿದೆ. ಈ ಉಚಿತ ಡೇಟಾ 4ಜಿ ಡೇಟಾ ಆಗಿದೆ. ಹೆಚ್ಚಿನ ಡೇಟಾ ಬಳಕೆ ಮಾಡದೇ ಇರುವವರಿಗ ಈ ಪ್ಲಾನ್ ಸೂಕ್ತವಾಗಿದೆ.
ಜಿಯೋ 198 ರೂಪಾಯಿ ಪ್ಲಾನ್
ರಿಲಯನ್ಸ್ ಜಿಯೋ 198 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿದರೆ 5ಜಿ ಡೇಟಾ ಸೌಲಭ್ಯ ಸಿಗಲಿದೆ. ಈ ಪ್ಲಾನ್ ಅಡಿಯಲ್ಲಿ ಪ್ರತಿ ದಿನ 1 ಡೇಟಾ ಉಚಿತವಾಗಿ ಸಿಗಲಿದೆ. ಅನ್‌ಲಿಮಿಟೆಡ್ ಕಾಲ್ ಸೌಲಭ್ಯ, 100 ಎಸ್ಎಂಎಸ್ ಸೌಲಭ್ಯವೂ ಸಿಗಲಿದೆ.ಆದರೆ ಈ ಪ್ಲಾನ್ ಅಡಿಯಲ್ಲಿ ವ್ಯಾಲಿಡಿಟಿ 14 ದಿನ ಇರಲಿದೆ.
ಜಿಯೋ 199 ರೂಪಾಯಿ ಪ್ಲಾನ್
5ಜಿ ಡೇಟಾ ಸ್ಪೀಡ್ ಆನಂದಿಸಲು ಬಯಸುವವರಿಗೆ ಜೊತೆಗೆ ಕಡಿಮೆ ಬೆಲೆಯ ಪ್ಲಾನ್ ಬೇಕಿದ್ದರೆ ಈ ರೀಚಾರ್ಜ್ ಪ್ಲಾನ್ ಸೂಕ್ತವಾಗಿದೆ. 18 ದಿನ ವ್ಯಾಲಿಡಿಟಿ ಸಿಗಲಿದೆ. ಪ್ರತಿ ದಿನ 1.5 ಜಿಬಿ ಡೇಟಾ ಉಚಿತವಾಗಿ ಸಗಲಿದೆ. ಇನ್ನು ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವಿದೆ. ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯವೂ ಇದೆ.
ಜಿಯೋ 201 ರೂಪಾಯಿ ಪ್ಲಾನ್
ರಿಲಯನ್ಸ್ ಜಿಯೋ 201 ರೂಪಾಯಿ ರೀಚಾರ್ಜ್ ಪ್ಲಾನ್ ಆಡಿಯಲ್ಲಿ 22 ದಿನಗಳ ವ್ಯಾಲಿಡಿಟಿ ಸಿಗಲಿದೆ. ಪ್ರತಿ ದಿನ 1 ಜಿಬಿ ಡೇಟಾ ಸಿಗಲಿದೆ. ಇನ್ನು ಇತರ ಕಡಿಮೆ ಬೆಲೆ ಪ್ಲಾನ್‌ನಂತೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುತ್ತಾರೆ. ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯವೂ ಸಿಗಲಿದೆ.
ಜಿಯೋ 239 ರೂಪಾಯಿ ಪ್ಲಾನ್
ಜಿಯೋ ಕೈಗೆಟುಕುವ ದರದ ರೀಚಾರ್ಜ್ ಪ್ಲಾನ್‌ನಲ್ಲಿ 239 ರೂಪಾಯಿ ಕೂಡ ಸೇರಿದೆ. 22 ದಿನಗಳ ವ್ಯಾಲಿಡಿಟಿ ಈ ಪ್ಲಾನ್‌ನಲ್ಲಿದೆ. ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇನ್ನು ಪ್ರತಿ ದಿನ 1.5 ಜಿಬಿ ಡೇಟಾ ಸೌಲಭ್ಯವೂ ಇದರಲ್ಲಿದೆ.
ಇದರ ಜೊತೆಗೆ 28 ದಿನಗಳ ವ್ಯಾಲಿಡಿಟಿ ಬೇಕಿದ್ದಲ್ಲಿ 249 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬಹುದು. ಇನ್ನುಳಿದಂತೆ ಪ್ರತಿ ದಿನ 1 ಜಿಬಿ ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿದೆ. ಜಿಯೋ ಕೈಗೆಟುಕುವ ಪ್ಲಾನ್ ಇದೀಗ ಭಾರಿ ಜನಪ್ರಿಯತೆ ಪಡೆದುಕೊಂಡಿದೆ.