Huawei Nova Y9a ಪಾಪ್ ಅಪ್ ಸೆಲ್ಫಿಕ್ಯಾಮೆರಾ ನಾಚ್ಲೆಸ್ ವಿನ್ಯಾಸದೊಂದಿಗೆ ಲಾಂಚ್!
Huawei Nova Y9a ಸ್ಮಾರ್ಟ್ಫೋನ್ ನಾಚ್ ಇಲ್ಲದ 6.63-ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ
Tech Desk: Huawei Nova Y9a ಕಂಪನಿಯ ಲೆಟೆಸ್ಟ್ ಸ್ಮಾರ್ಟ್‌ಫೋನಾಗಿ ಬಿಡುಗಡೆ ಮಾಡಲಾಗಿದೆ. ಇದು 64ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು (Pop-up Selfie camera) ಒಳಗೊಂಡಿದೆ. Huawei Nova Y9a MediaTek Helio G80 SoC 8GB RAM ನೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ ನಾಚ್ ಇಲ್ಲದ 6.63-ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಸ್ಮಾರ್ಟ್‌ಫೋನನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.
Huawei Nova Y9a ಬೆಲೆ, ಲಭ್ಯತೆ: ಏಕೈಕ 8GB RAM + 128GB ಸ್ಟೋರೇಜ್ ಮಾದರಿಗಾಗಿ Huawei Nova Y9a ಬೆಲೆ ZAR 6,499 (ಸುಮಾರು ರೂ. 31,300)ಗೆ ನಿಗದಿಪಡಿಸಲಾಗಿದೆ. ಮಿಡ್‌ನೈಟ್ ಬ್ಲಾಕ್, ಸಕುರಾ ಪಿಂಕ್ ಮತ್ತು ಸ್ಪೇಸ್ ಸಿಲ್ವರ್ ಬಣ್ಣಗಳಲ್ಲಿ ಮುಂಗಡ-ಆರ್ಡರ್‌ಗಳಿಗೆ ಸ್ಮಾರ್ಟ್‌ಫೋನ್ ಲಭ್ಯವಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು Huawei ಇನ್ನೂ ಪ್ರಕಟಿಸಿಲ್ಲ.́
ಇದನ್ನೂ ಓದಿ: Huawei Smart Glasses: ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!
Huawei Nova Y9a Specifications: ಡ್ಯುಯಲ್-ಸಿಮ್ (ನ್ಯಾನೋ) Huawei Nova Y9a ಆಂಡ್ರಾಯ್ಡ್ 10 ರನ್ ಮಾಡುತ್ತಿದ್ದು, ಕಂಪನಿಯ EMUI 10.1 ಸ್ಕಿನ್ ಮೇಲೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ 6.63-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) ಟಿಎಫ್‌ಟಿ ಎಲ್‌ಸಿಡಿ ಡಿಸ್ಪ್ಲೇ ಜೊತೆಗೆ 'ನಾಚ್-ಲೆಸ್' ವಿನ್ಯಾಸವನ್ನು ಹೊಂದಿದೆ. Huawei Nova Y9a ಆಕ್ಟಾ-ಕೋರ್ MediaTek Helio G80 SoC ನಿಂದ ನಡೆಸಲ್ಪಡುತ್ತಿದೆ, Mali-G52 MC2 GPU ಮತ್ತು 8GB RAM ನೊಂದಿಗೆ ಜೋಡಿಸಲಾಗಿದೆ.
Huawei Nova Y9a ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, f/1.8 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ f/2.4 ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, ಮತ್ತು f/2.4 ಅಪರ್ಚರ್ ಲೆನ್ಸ್‌ನೊಂದಿಗೆ ಎರಡು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ f/2.2 ಅಪರ್ಚರ್ ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ.
ಇದನ್ನೂ ಓದಿ: Infinix Zero 5G: ಕಂಪನಿಯ ಮೊದಲ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ!
ಸ್ಮಾರ್ಟ್ಫೋನಲ್ಲಿ 128GB ಇಂಟರ್‌ನಲ್ ಸಂಗ್ರಹಣೆ ನೀಡಲಾಗಿದ್ದು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 256GBವರೆಗೆ ವಿಸ್ತರಿಸಬಹುದಾಗಿದೆ . Huawei Nova Y9a 4G LTE, Wi-Fi, Bluetooth v5.1, GPS/ AGPS ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಸೆನ್ಸರ್ ambient light sensor, ಗೈರೊಸ್ಕೋಪ್, ದಿಕ್ಸೂಚಿ ಮತ್ತು ಗುರುತ್ವಾಕರ್ಷಣೆ ಸೆನ್ಸರ್ ಒಳಗೊಂಡಿವೆ. Huawei Nova Y9a 4,300mAh ಬ್ಯಾಟರಿಯೊಂದಿಗೆ USB ಟೈಪ್-C ಮೂಲಕ 40W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ 163.5x76.5x8.95mm ಅಳತೆ ಮತ್ತು 197 ಗ್ರಾಂ ತೂಗುತ್ತದೆ.