ಆ್ಯಪಲ್‌ ಐಫೋನ್ ಬಳಿಕ ಭಾರತದಲ್ಲಿ ಗೂಗಲ್‌ನಿಂದ ಪಿಕ್ಸೆಲ್‌ ಮೊಬೈಲ್‌ ಉತ್ಪಾದನೆ, 2024ಕ್ಕೆ ಮಾರುಕಟ್ಟೆಗೆ

ಟೆಕ್‌ ದೈತ್ಯ ಗೂಗಲ್‌ ಕಂಪನಿಯು ತನ್ನ ‘ಗೂಗಲ್‌ ಫಿಕ್ಸೆಲ್’ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸುವುದಾಗಿ ಘೋಷಿಸಿದೆ.

Google to manufacture Pixel smartphones in India, first devices expected in 2024 gow

ನವದೆಹಲಿ (ಅ.20): ಟೆಕ್‌ ದೈತ್ಯ ಗೂಗಲ್‌ ಕಂಪನಿಯು ತನ್ನ ‘ಗೂಗಲ್‌ ಫಿಕ್ಸೆಲ್’ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸುವುದಾಗಿ ಘೋಷಿಸಿದೆ. ಈ ಪೈಕಿ ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳ ಸರಣಿಯ ‘ಗೂಗಲ್‌ ಫಿಕ್ಸೆಲ್‌ 8’ ಸ್ಮಾರ್ಟ್‌ಫೋನ್‌ನನ್ನು ಮೊದಲ ಬಾರಿಗೆ ಭಾರತದಲ್ಲೇ ಉತ್ಪಾದನೆ ಮಾಡಿ ಬಿಡುಗಡೆ ಮಾಡಲಿದ್ದು, 2024ರ ವೇಳೆಗೆ ಈ ಪೋನ್‌ಗಳು ಮಾರುಕಟ್ಟೆಗೆ ಬರಲಿವೆ ಎಂದು ತಿಳಿಸಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಕಂಪನಿಯ ವಾರ್ಷಿಕ ಪ್ರಮುಖ ಈವೆಂಟ್ ಗೂಗಲ್‌ ಫಾರ್‌ ಇಂಡಿಯಾ ಕಾರ್ಯಕ್ರಮದಲ್ಲಿ ಗೂಗಲ್‌ನ ಸಾಧನಗಳು ಮತ್ತು ಸೇವೆಗಳ ಹಿರಿಯ ಉಪಾಧ್ಯಕ್ಷ ರಿಕ್ ಓಸ್ಟರ್ಲೋಹ್  ಘೋಷಣೆ ಮಾಡಿ,  ಸಂಸ್ಥೆಯು ‘ಭಾರತವು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ನಮ್ಮ ಅತ್ಯುತ್ತಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಾಮರ್ಥ್ಯವನ್ನು ದೇಶಾದ್ಯಂತ ಜನರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಸಡಿಲಿಕೆ, ಲೈಸೆನ್ಸ್‌ ಬದಲು ದೃಢೀಕರಣ ಕಡ್ಡಾಯ

ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗಾಗಿ ಭಾರತದಲ್ಲಿನ ದೇಶೀಯ ಮತ್ತು ಅಂತರರಾಷ್ಟ್ರೀಯ ಉತ್ಪಾದಕರೊಂದಿಗೆ ನಾವು ಪಾಲುದಾರಿಕೆ ಹೊಂದಿದ್ದೇವೆ’ ಎಂದಿದ್ದಾರೆ. ಅಮೆರಿಕದ ಟೆಕ್‌ ದೈತ್ಯ ಆ್ಯಪಲ್‌ ಈಗಾಗಲೇ ಭಾರತದಲ್ಲಿ ತನ್ನ ಮೊಬೈಲ್‌ಗಳನ್ನು ಉತ್ಪಾದಿಸಿ ಅದನ್ನು ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳಿಗೆ ಪೂರೈಸುತ್ತಿದೆ ಎಂದಿದ್ದಾರೆ.

ಭಾರತದಲ್ಲಿ ಪ್ರಾಥಮಿಕವಾಗಿ ಶಿಕ್ಷಣ ಕ್ಷೇತ್ರಕ್ಕೆ ಕೈಗೆಟುಕುವ PC ಗಳ ಬೇಡಿಕೆಯನ್ನು ಪೂರೈಸುವ ಸಲುವಾಗಿ ಭಾರತದಲ್ಲಿ Chromebooks ಅನ್ನು ತಯಾರಿಸಲು Google ವೈಯಕ್ತಿಕ ಕಂಪ್ಯೂಟರ್ (PC) ತಯಾರಕ HP ಯೊಂದಿಗೆ ಪಾಲುದಾರಿಕೆ ಮಾಡಿಕೊಂಡ ವಾರಗಳ ನಂತರ ಈ ಕ್ರಮವು ಬಂದಿದೆ.

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಒಂದೇ ಫೋನ್‌ನಲ್ಲಿ 2

ಈ ಕ್ರೋಮ್‌ಬುಕ್‌ಗಳ ಉತ್ಪಾದನೆಯನ್ನು ಅಕ್ಟೋಬರ್ 2, 2023 ರಿಂದ ಚೆನ್ನೈ ಬಳಿಯ ಫ್ಲೆಕ್ಸ್ ಫೆಸಿಲಿಟಿಯಲ್ಲಿ HP ಪ್ರಾರಂಭಿಸಿದೆ, ಸಾಧನ ತಯಾರಕರು ಆಗಸ್ಟ್ 2020 ರಿಂದ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಶ್ರೇಣಿಯನ್ನು ಉತ್ಪಾದಿಸುತ್ತಿದ್ದಾರೆ.

"ಮೇಕ್ ಇನ್ ಇಂಡಿಯಾ" ಉಪಕ್ರಮಕ್ಕೆ ಗೂಗಲ್ ಸೇರ್ಪಡೆಗೊಳ್ಳಲು ಮತ್ತು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸುವ ಯೋಜನೆಗಳೊಂದಿಗೆ ಭಾರತದ ಬೆಳವಣಿಗೆಯ ಕಥೆಯನ್ನು ಮತ್ತಷ್ಟು ಬಲಪಡಿಸುವುದನ್ನು ನೋಡಲು ಸಂತೋಷವಾಗಿದೆ" ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios