ಕಂಪ್ಯೂಟರ್, ಲ್ಯಾಪ್‌ಟಾಪ್ ಆಮದು ನಿರ್ಬಂಧ ಸಡಿಲಿಕೆ, ಲೈಸೆನ್ಸ್ ಬದಲು ದೃಢೀಕರಣ ಕಡ್ಡಾಯ
ಲ್ಯಾಪ್‌ಟಾಪ್, ಕಂಪ್ಯೂಟರ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.
ನವದೆಹಲಿ (ಅ.20): ಲ್ಯಾಪ್‌ಟಾಪ್, ಕಂಪ್ಯೂಟರ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಆಮದಿಗೆ ಲೈಸೆನ್ಸ್ ಕಡ್ಡಾಯ ಎಂಬ ನಿಯಮ ತೆಗೆದುಹಾಕಿ ಅವುಗಳ ಆನ್ಲೈನ್ ದೃಢೀಕರಣ ಕಡ್ಡಾಯಗೊಳಿಸಿದೆ.
ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಒಂದೇ ಫೋನ್‌ನಲ್ಲಿ 2
ವಿದೇಶಗಳಿಂದ ತರಿಸಿಕೊಳ್ಳಲಾಗುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿಗಾ ವಹಿಸಲು ಈ ನಿಯಮ ಜಾರಿ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ಆಮದಿನ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಸಮಸ್ಯೆಗೆ ಸಿಲುಕಿದ್ದ ಕಂಪನಿಗಳಿಗೆ ಇದೀಗ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿದೇಶಿ ವ್ಯಾಪಾರದ ನಿರ್ದೇಶಕ ಸಂತೋಷ್ ಕುಮಾರ್ ಸಾರಂಗಿ, ‘ಈ ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ. ಆಮದಾಗುತ್ತಿರುವ ಉತ್ಪನ್ನಗಳು ನಂಬಲರ್ಹ ಸಂಸ್ಥೆಗಳಿಂದ ಬರುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಈ ಆನ್ಲೈನ್ ದೃಢೀಕರಣ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್, ವ್ಯಾಟ್ಸ್ಆ್ಯಪ್
ಆಮದು ಮಾಡಿಕೊಳ್ಳಲಾದ ಉತ್ಪನ್ನಗಳ ಸಾರಾಂಶ, ಈ ಮೊದಲ ಆಮದು ಮತ್ತು ರಫ್ತಿನ ಮಾಹಿತಿ ಮತ್ತು ಇವುಗಳ ಮೌಲ್ಯದ ಮಾಹಿತಿಯನ್ನು ದೃಢೀಕರಿಸುವುದು ಕಡ್ಡಾಯವಾಗಿದೆ. ಎಚ್‌ಸಿಎಲ್, ಸ್ಯಾಮ್‌ಸಂಗ್, ಡೆಲ್, ಎಲ್‌ಜಿ, ಏಸರ್, ಆ್ಯಪಲ್, ಲೆನವೋ ಮತ್ತು ಎಚ್‌ಪಿ ಕಂಪನಿಯ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು.