ಗೂಗಲ್ ಪಿಕ್ಸೆಲ್ ವಾಚ್‌ ವಿನ್ಯಾಸ ಹೇಗಿದೆ? ಟೀಸರ್‌ನಲ್ಲಿ ಏನೆಲ್ಲ ಇದೆ ಮಾಹಿತಿ!

*ಅಕ್ಟೋಬರ್ 6ರಂದು ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೋ ಲಾಂಚ್
*ಪಿಕ್ಸೆಲ್ ಸರಣಿ ಫೋನುಗಳ ಜತೆಗೇ ಪಿಕ್ಸೆಲ್‌ ವಾಚ್ ಕೂಡ ಲಾಂಚ್
*ಪಿಕ್ಸೆಲ್ ವಾಚ್ ಗೂಗಲ್ ಕಂಪನಿ ಹೊರತರುತ್ತಿರುವ ಮೊದಲ ವಾಚ್

Google pixel watch teaser released on YouTube Channel

ಜಗತ್ತಿನ ಟೆಕ್ ದೈತ್ಯ ಗೂಗಲ್ (Google) ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ದಿನಾಂಕವನ್ನು ಬಹಿರಂಗಪಡಿಸಿದೆ. ಅಕ್ಟೋಬರ್ 6ರಂದು ಹೊಸ ಪಿಕ್ಸೆಲ್ ಫೋನ್‌ಗಳನ್ನು ಲಾಂಚ್ ಮಾಡಲಿದೆ. ಈ ಫೋನ್ ಜತೆಗೆ ಕಂಪನಿಯು ತನ್ನ ಮೊದಲ ಪಿಕ್ಸೆಲ್ ವಾಚ್ (Pixel Watch) ಕೂಡ ಬಿಡುಗಡೆ ಮಾಡಲಿದೆ.  ಪಿಕ್ಸೆಲ್ ವಾಚ್ ಗೂಗಲ್ ಹೊರ ತರುತ್ತಿರುವ ಮೊದಲ ಸ್ಮಾರ್ಟ್‌ವಾಚ್ ಆಗಿದೆ. ಹಾಗಾಗಿ, ಈ ಬಗ್ಗೆ ಗ್ರಾಹಕರಲ್ಲಿ ಸಾಕಷ್ಟು ಕುತೂಹಲವಿದೆ. ಜತೆಗೆ ಈ ವಾಚ್ ಬಗೆಗಿನ ಮೊದಲ ಫೋಟೋಗ್ರಾಫ್ ಬಹಿರಂಗವಾಗಿದ್ದು, ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಗೂಗಲ್ ಕಂಪನಿಯು, ತನ್ನ ಮೊದಲ ಪಿಕ್ಸೆಲ್ ವಾಚ್‌ಗೆ ಸಂಬಂಧಿಸಿದ, ವಿನ್ಯಾಸದ ಅಂಶಗಳನ್ನು ಒಳಗೊಂಡಿರುವ ವೀಡಿಯೋ ಟೀಸರ್ ಅನ್ನು ಬಿಡುಡೆ ಮಾಡಿದೆ. ಈ ಟೀಸರ್ ಅನ್ನು ಯುಟ್ಯೂಬ್‌ನಲ್ಲಿ ಲಾಂಚ್ ಮಾಡಲಾಗಿದೆ. ಯುಟ್ಯೂಬ್‌ನ ಮೇಡ್ ಬೈ ಗೂಗಲ್ ಖಾತೆಯಲ್ಲಿ ಈ ವೀಡಿಯೋವನ್ನು ನೋಡಬಹುದು. ಗೂಗಲ್‌ನ ಮೊದಲ ವಾಚ್ ಆಗಿರುವ ಈ ಪಿಕ್ಸೆಲ್ ವಾಚ್ ವಿನ್ಯಾಸವು ಸಾಕಷ್ಟು ಗಮನ ಸೆಳೆಯುತ್ತಿದೆ.

ಪಿಕ್ಸೆಲ್ ವಾಚ್‌ಗೆ ಸಂಬಂಧಿಸಿದಂತೆ ಈ ಹಿಂದೆಯೂ ಕೆಲವು ಚಿತ್ರಗಳು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದ್ದವು. ಹಾಗಾಗಿ ಕಂಪನಿಯೇ ಟೀಸ್ ಮಾಡಿರುವ ಚಿತ್ರದಲ್ಲಿ ಅದೇ ವೃತ್ತಾಕಾರದ ಡಯಲ್ ಅನ್ನು ಕಾಣಬಹುದಾಗಿದೆ. ಹಾಗಾಗಿ, ಈ ಹಿಂದೆ ಸೋರಿಕೆಯಾದ ಚಿತ್ರಗಳು ಬಹುತೇಕ ಕರೆಕ್ಟ್ ಆಗಿವೆ. ವೃತ್ತಾಕಾರದ ಡಯಲ್ ಹೆಚ್ಚು ಆಕರ್ಷಕವಾಗಿದೆ ಎಂದು ಹೇಳಬಹುದು. ವೃತ್ತಾಕಾರದ ಡಯಲ್‌ನಲ್ಲಿನ ಡಿಸ್‌ಪ್ಲೇ  ದುಂಡಾದ ಹೊರ ಗಡಿಯನ್ನು ಹೊಂದಿದೆ. ಪಿಕ್ಸೆಲ್ ವಾಚ್ ಡಯಲ್‌ನ ಬಲಭಾಗದಲ್ಲಿ ನೀವು ಕ್ರೌನ್ ಅನ್ನು ಕೂಡ ನೋಡಬಹುದುದ. ಇದು ಕೂಡ ಅತ್ಯಾಕರ್ಷಕವಾಗಿದೆ. ಗೂಗಲ್ ಬಿಡುಗಡೆ ಮಾಡಿರುವ ಯುಟ್ಯೂಬ್ ವಿಡಿಯೋದಲ್ಲಿ ವಾಚ್‌ನ ಮೂಲ  ಸಿಲಿಕೋನ್ ಪಟ್ಟಿಗಳು ಹೇಗಿರುತ್ತವೆ ಎಂಬುದನ್ನು ಪ್ರದರ್ಶಿಸಲಾಗಿದೆ.

Flipkart Sale: ಕಡಿಮೆ ರೇಟಿಗೆ ಸಿಗಲಿದೆ 5 ದುಬಾರಿ ಫೋನ್‌ಗಳು!

Google ಟೀಸರ್ ವಿಭಿನ್ನ ರೀತಿಯ ಸ್ಟ್ರಾಪ್ ಲಗತ್ತನ್ನು ಸಹ ಬಹಿರಂಗಪಡಿಸುತ್ತದೆ, ಇದು ಬ್ರ್ಯಾಂಡ್-ವಿಶೇಷ ಕ್ಲಿಪ್ ಕಾರ್ಯವಿಧಾನವಾಗಿರಬಹುದು ಎಂದು ಹೇಳಲಾಗುತ್ತಿದೆ. ಪಿಕ್ಸೆಲ್ ವಾಚ್‌ನ ನಿರೀಕ್ಷಿತ ಸೆನ್ಸರ್‌ಗಳ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಟೀಸರ್‌ನಲ್ಲಿ ಗೂಗಲ್ ಆ ಬಗ್ಗೆ ಯಾವುದೇ ವಿಶೇಷ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಹಿಂದೆಯೂ ಈ ಬಗ್ಗೆ ಯಾವುದೇ  ವಿಶೇಷ ಮಾಹಿತಿಯು ಬ ಹಿರಂಗವಾಗಿಲ್ಲ . ಬಹುಶಃ ವಾಚ್ ಬಿಡುಗಡೆಯಾದ ಬಳಿಕ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಎಲ್ಲರಿಗೂ ದೊರೆಯಬಹುದು. 

ಅಕ್ಟೋಬರ್ 6 ರಂದು, ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಜೊತೆಗೆ ಪಿಕ್ಸೆಲ್ ವಾಚ್ (Watch) ಅನ್ನು ಪರಿಚಯಿಸಲು "ಮೇಡ್ ಬೈ ಗೂಗಲ್" ಎಂಬ ಈವೆಂಟ್ ಅನ್ನು ಗೂಗಲ್ ನಡೆಸುತ್ತದೆ. 2018 ರಲ್ಲಿ Pixel 3 ಸರಣಿಯ ಪ್ರಾರಂಭದ ನಂತರ, ಕಂಪನಿಯು ಇತ್ತೀಚೆಗೆ Pixel 7 ಸರಣಿಯನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸುವುದಾಗಿ ಘೋಷಿಸಿತ್ತು.

ಡೈನಾಮಿಕ್ ಐಲ್ಯಾಂಡ್: ಆ್ಯಂಡ್ರಾಯ್ಡ್ ಫೋನ್‌ಗಳಿಗೂ ಐಫೋನ್ 14 ರೀತಿಯ ಫೀಚರ್?

ಅಕ್ಟೋಬರ್ 6ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಗೂಗಲ್ ಪಿಕ್ಸೆಲ್ (Google Pixel) 7 ಮತ್ತು ಗೂಗಲ್ ಪಿಕ್ಸೆಲ್ 7 ಪ್ರೋ ಸ್ಮಾರ್ಟ್ಫೋನ್ (Smartphone) ಭಾರತದಲ್ಲಿ ಯಾವಾಗ ಖರೀದಿಗೆ ಸಿಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಜತೆಗೇ ಪ್ರಿಆರ್ಡರ್ ಬಗ್ಗೆಯೂ ಗೊತ್ತಿಲ್ಲ. ಆದರೆ, ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ಅಮೆರಿಕದಲ್ಲಿ ಮಾತ್ರ ಈ ಎರಡೂ ಫೋನುಗಳ ಖರೀದಿಗೆ ಪ್ರಿ ಆರ್ಡರ್ ದೊರೆಯಲಿದೆ ಎನ್ನಲಾಗುತ್ತಿದೆ. ಗೂಗಲ್ (Google) ಅಭಿೃದ್ಧಿಪಡಿಸಿರುವ ಗೂಗಲ್ ಟೆನ್ಸರ್ ಚಿಪ್ನ ಎರಡನೇ ತಲೆಮಾರಿನ ಗೂಗಲ್ ಟೆನ್ಸರ್ ಜಿ 2ಜಿ ಪ್ರೊಸೆಸರ್ ಅನ್ನು ಈ ಪಿಕ್ಸೆಲ್ 7 ಸರಣಿ ಸ್ಮಾರ್ಟ್ಫೋನ್ಗಳಲ್ಲಿ ಬಳಸಲಾಗಿದೆ. ಹಾಗಾಗಿ, ಈ ಬಗ್ಗೆ ಸಾಕಷ್ಟು ಕುತೂಹಲ ಬಳಕೆದಾರರಲ್ಲಿದೆ. ಈಗಾಗಲೇ ಈ ಪ್ರೊಸಸೆರ್ ಕಾರ್ಯಕ್ಷಮತೆಯ ಬಗ್ಗೆ ಗ್ರಾಹಕರಿಗೆ ತೀರಾ ಅನುಮಾನಗಳೇನೂ ಇಲ್ಲ. ಅಕ್ಟೋಬರ್  6ರಂದು ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಗೂಗಲ್ ಪಿಕ್ಸೆಲ್ ಪ್ರೋ ಹೊಸ ಗೂಗಲ್ ಟೆನ್ಸರ್ ಜಿ2 ಪ್ರೊಸೆಸರ್ನೊಂದಿಗೆ  12GB RAM ಮತ್ತು Mali-G710 GPU ಅನ್ನು ಒಳಗೊಂಡಿರಬಹುದು ಎಂದು ಹೇಳಬಹುದಾಗಿದೆ.

Latest Videos
Follow Us:
Download App:
  • android
  • ios